News

ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ತಡೆಯದೇ ವಿಡಿಯೋ ಮಾಡಿದ ಪಾಪಿ ಗಂಡ….!

ಸಮಾಜದಲ್ಲಿ ಪತಿ ಪತ್ನಿಯರ ನಡುವೆ ಅನೇಕ ವಿಚಾರಗಳ ಕಾರಣದಿಂದ ಜಗಳಗಳು ನಡೆಯುತ್ತಿರುತ್ತವೆ. ಈ ಜಗಳ ವಿಚ್ಚೇದನದ ವರೆಗೂ ಸಹ ಹೋಗುತ್ತವೆ. ಕೆಲವೊಂದು ಜಗಳಗಳ ಕಾರಣದಿಂದ ಕೆಲವರು ಆತ್ಮಹತ್ಯೆಗೂ ಸಹ ಮುಂದಾಗುತ್ತಿರುತ್ತಾರೆ. ಅಂತಹುದೇ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಗಂಡ ಹೆಂಡತಿ ನಡುವೆ ಜಗಳ ನಡೆದಿದ್ದು, ಅದರಿಂದ ಬೇಸತ್ತ ಪತ್ನಿ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಅದನ್ನು ತಡೆಯದ ಪಾಪಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ತೆಲಂಗಾಣದ ಹೈದರಾಬಾದ್ ನ ಮುರಾದ್ ನಗರ ಸೈಯದ್ ಅಲಿಗುಡ ಎಂಬಲ್ಲಿ ವಾಸಿಸುತ್ತಿದ್ದ ರಸೂಲ್ ಹಾಗೂ ಹರ್ಷಿಯಾ ಬೇಗಂ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ರಸೂಲ್ ಗೆ ಈಗಾಗಲೇ ಮದುವೆಯಾಗಿದ್ದು, ಅದನ್ನು ಮುಚ್ಚಿಟ್ಟು ಹರ್ಷಿಯಾರನ್ನು 2ನೇ ಮದುವೆಯಾಗಿದ್ದನಂತೆ. ರಸೂಲ್ ಕುಡುಕನಾಗಿದ್ದು, ಈ ಕಾರಣದಿಂದ ಪ್ರತಿನಿತ್ಯ ಇಬ್ಬರ ನಡುವೆ ಜಗಳ ನಡೆಯುತ್ತಿತ್ತಂತೆ. ಕುಡಿತ ಬಿಡದೇ ಇದ್ದರೇ ತಾನು ನೇಣು ಹಾಕಿಕೋಂಡು ಸಾಯುವುದಾಗಿ ಹರ್ಷಿಯಾ ಹೆದರಿಸಿದ್ದಾಳೆ. ಕಳೆದ ಸೋಮವಾರ ನಡು ರಾತ್ರಿ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಆಕೆ ನೇಣು ಹಾಕಿಕೊಳ್ಳಲು ಮುಂದಾಗಿದ್ದಾಳೆ. ಆದರೆ ಕುಡಿದು ಅಮಲಿನಲ್ಲಿದ್ದ ರಸೂಲ್ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಮುಂದಾಗಿದ್ದಾನೆ. ಅದರಿಂದ ಕೆರಳಿದ ಹರ್ಷಿಯಾ ನೇಣು ಬಿಗಿದು ಸತ್ತಿದ್ದಾಳೆ.

ಹರ್ಷಿಯಾ ನನ್ನನ್ನು ಬೆದರಿಸಲು ಈ ರೀತಿ ಮಾಡಿದ್ದಾಳೆ ಎಂದು ನಾನು ವಿಡಿಯೋ ಮಾಡಿಕೊಂಡೆ ಆದರೆ ಆಕೆ ನಿಜವಾಗಲೂ ಸಾಯುತ್ತಾಳೆ ಎಂದು ಅಂದುಕೊಂಡಿರಲಿಲ್ಲ ಎಂದು ರಸೂಲ್ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಇನ್ನೂ ರಸೂಲ್ ಹಾಗೂ ಹರ್ಷಿಯಾಗೆ ಇಬ್ಬರು ಮಕ್ಕಳಿದ್ದು, ತಾಯಿ ಇಹಲೋಕ ತ್ಯೆಜಿಸಿದ್ದರೇ, ತಂದೆ ಜೈಲು ಪಾಲಾಗಿದ್ದಾನೆ. ಈ ಕಾರಣದಿಂದ ಇಬ್ಬರೂ ಮಕ್ಕಳು ಇದೀಗ ಅನಾಥರಾಗಿದ್ದಾರೆ.

Most Popular

To Top