ಬಾಲಿವುಡ್ ಸ್ಟಾರ್ ಕಿಡ್ ಸಾರಾ ಕ್ರಿಕೆಟರ್ ಶುಭ್ ಮನ್ ಗಿಲ್ ನಡುವೆ ಬ್ರೇಕಪ್, ವೈರಲ್ ಆದ ಸುದ್ದಿ…!

ಸುಮಾರು ದಿನಗಳಿಂದ ಬಾಲಿವುಡ್ ಸ್ಟಾರ್‍ ಕಿಡ್ ಸಾರಾ ಅಲಿಖಾನ್ ಹಾಗೂ ಟೀಂ ಇಂಡಿಯಾ ಯಂಗ್ ಕ್ರಿಕೆಟರ್‍ ಶುಭಮನ್ ಗಿಲ್ ರವರ ಡೇಟಿಂಗ್ ವಿಚಾರ ಹರಿದಾಡುತ್ತಲೇ ಇದೆ. ಅನೇಕ ಬಾರಿ ಈ ಜೋಡಿಯ ಮದುವೆ ನಡೆದೇ ಬಿಡುತ್ತದೆ ಎಂಬ ಸುದ್ದಿ ಸಹ ಹರಿದಾಡಿತ್ತು. ಅನೇಕ ಬಾರಿ ಇಬ್ಬರೂ ಜೋಡಿಯಾಗಿ ಸಹ ಕಾಣಿಸಿಕೊಂಡಿದ್ದು ಈ ರೂಮರ್‍ ಗಳಿಗೆ ಮತಷ್ಟು ಪುಷ್ಟಿ ನೀಡಿತ್ತು. ಆದರೆ ಇದೀಗ ಇಬ್ಬರೂ ಬೇರೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರಿಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಇದೀಗ ಹಲ್ ಚಲ್ ಸೃಷ್ಟಿಸಿದೆ.

ಸುಮಾರು ತಿಂಗಳುಗಳಿಂದ ಬಾಲಿವುಡ್ ಯಂಗ್ ಬ್ಯೂಟಿ ಸಾರಾ ಅಲಿಖಾನ್ ಹಾಗೂ ಶುಭಮನ್ ಗಿಲ್ ಡೇಟಿಂಗ್ ವಿಚಾರ ಜೋರಾಗಿಯೇ ಹರಿದಾಡುತ್ತಿದೆ. 23 ವರ್ಷದ ಯಂಗ್ ಕ್ರಿಕೆಟರ್‍ ಶುಭಮನ್ ಗಿಲ್ ರವರ ವೈಯುಕ್ತಿಕ ಜೀವನದ ಬಗ್ಗೆ ಅನೇಕ ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ. ಇದಕ್ಕೆ ಮುಖ್ಯಕಾರಣ ಸೋಷಿಯಲ್ ಮಿಡಿಯಾದಲ್ಲಿ ಒಬ್ಬರೊನ್ನೊಬ್ಬರು ಫಾಲೋ ಆಗುತ್ತಿರುವುದು, ಪೊಟೋಗಳಿಗೆ ಕಾಮೆಂಟ್ ಮಾಡಿಕೊಳ್ಳುವುದು ಈ ರೂಮರ್‍ ಗಳು ಮತಷ್ಟು ಹೆಚ್ಚಾಗಲು ಕಾರಣವಾಗಿತ್ತು. ಆದರೆ ಇದೀಗ ಅವರ ನಡುವೆ ವಿಬೇದಗಳು ಉಂಟಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದಾರೆ. ಈ ಕಾರಣದಿಂದ ಇಬ್ಬರೂ ಬೇರೆಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಾರಾ ಹಾಗೂ ಶುಭ್ ಮನ್ ಗಿಲ್ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಕಾರಣದಿಂದ ಇಬ್ಬರ ನಡುವೆ ಪ್ರೇಮ ವ್ಯವಹಾರ ನಡೆಯುತ್ತಿದೆ ಎಂದು ಹೇಳಲಾಗುತ್ತಿತ್ತು. ಮುಂಬೈ, ದೆಹಲಿ ಸೇರಿದಂತೆ ಅನೇಕ ಕಡೆ ಇಬ್ಬರೂ ಕಾಣಿಸಿಕೊಂಡಿದ್ದರು. ಆ ಮೂಲಕ ತಾವು ಡೇಟಿಂಗ್ ನಲ್ಲಿರುವುದಾಗಿ ಪರೋಕ್ಷವಾಗಿ ಹೇಳಿಕೊಂಡಿದ್ದರು. ಜೊತೆಗೆ ಮುಂಬೈನಲ್ಲಿ ಇತ್ತಿಚಿಗೆ ರೆಸ್ಟೋರೆಂಟ್ ನಲ್ಲಿ ಡಿನ್ನರ್‍ ಸಹ ಮಾಡಿದ್ದರು. ಬಳಿಕ ದೆಹಲಿಯ ಹೋಟೆಲ್ ಒಂದರಲ್ಲಿ ಸಹ ಕಾಣಿಸಿಕೊಂಡಿದ್ದರು. ಜೊತೆಗೆ ಕೆಲವೊಮ್ಮೆ ಶುಭ್ ಮನ್ ಗಿಲ್ ಸಹ ಕೆಲವೊಂದು ಪೋಸ್ಟ್ ಗಳನ್ನು ಸಹ ಅವರ ಡೇಟಿಂಗ್ ರೂಮರ್‍ ಗೆ ಪುಷ್ಟಿ ನೀಡುತ್ತಿತ್ತು. ಆದರೆ ಇದೀಗ ಅವರು ಬೇರೆಯಾಗಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಕೇಳಿಬರುತ್ತಿವೆ.

ಇನ್ನೂ ಬಾಲಿವುಡ್ ಅಂಗಳದಲ್ಲಿ ಸಾರಾ ಹಾಗೂ ಶುಭ್ ಮನ್ ಗಿಲ್ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿಗಳು ಜೋರಾಗಿಯೇ ಹರಿದಾಡುತ್ತಿದೆ. ಈ ಸುದ್ದಿಯಲ್ಲಿ ಎಷ್ಟು ನಿಜ ಎಷ್ಟು ಸುಳ್ಳು ಎಂಬುದು ಮಾತ್ರ ಗೊತ್ತಿಲ್ಲ. ಆದರೆ ಸುದ್ದಿ ಮಾತ್ರ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ಸಾರಾ ಆಗಲಿ ಅಥವಾ ಶುಭ್ ಮನ್ ಆಗಲಿ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.