ಅಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡ ಪವನ್ ಕಲ್ಯಾಣ್, ಜನಸೇನಾ ಪಕ್ಷಕ್ಕೆ 5 ಕೋಟಿ ದೇಣಿಗೆ ನೀಡಿದ ಮೆಗಾಸ್ಟಾರ್…..!

Follow Us :

ಆಂಧ್ರಪ್ರದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯ ಅಬ್ಬರ ಜೋರಾಗಿದೆ. ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಪಿಟಾಪುರಂ ಎಂಬ ಕ್ಷೇತ್ರದಿಂದ ಎಂ.ಎಲ್.ಎ ಸ್ಥಾನಕ್ಕೆ ಸ್ಫರ್ಧೆ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಪಕ್ಷದ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಲು ತುಂಬಾನೆ ಶ್ರಮಿಸುತ್ತಿದ್ದಾರೆ. ಈ ಬಾರಿ ಜನಸೇನಾ, ಟಿಡಿಪಿ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ವಿಚಾರ ತಿಳಿದೇ ಇದೆ. ಇದೀಗ ಪವನ್ ಕಲ್ಯಾನ್ ತಮ್ಮ ಸಹೋದರ ಚಿರಂಜೀವಿಯವರ ಕಾಲಿಗೆ ಬಿಟ್ಟು ಆಶಿರ್ವಾದ ಪಡೆದುಕೊಂಡಿದ್ದಾರೆ. ನಟ ಮೇಗಾಸ್ಟಾರ್‍ ರವರು ಜನಸೇನಾ ಪಕ್ಷಕ್ಕೆ 5 ಕೋಟಿ ದೇಣಿಗೆ ನೀಡಿದ್ದಾರೆ.

ನಟ ಪವನ್ ಕಲ್ಯಾಣ್ ಸದ್ಯ ಸಿನೆಮಾಗಳಿಗೆ ಬ್ರೇಕ್ ಕೊಟ್ಟು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೇನು ಒಂದು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಪವನ್ ಕಲ್ಯಾಣ್ ಚುನಾವಣಾ ಪ್ರಚಾರವನ್ನು ಜೋರಾಗಿ ನಿರ್ವಹಿಸುತ್ತಿದ್ದಾರೆ. ಈ ನಡುವೆ ಪವನ್ ಕಲ್ಯಾಣ್ ರವರು ವಿಶ್ವಂಭರ ಶೂಟಿಂಗ್ ಸೆಟ್ಸ್ ಗೆ ಭೇಟಿ ನೀಡಿದ್ದರು. ಈ ವೇಳೆ ತನ್ನ ಸಹೋದರರಾದ ಪವನ್ ಕಲ್ಯಾಣ್ ಹಾಗೂ ನಾಗಬಾಬು ರವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಚಿರಂಜೀವಿಯವರನ್ನು ಆತ್ಮೀಯತೆಯಿಂದ ತಬ್ಬಿಕೊಂಡಿದ್ದಾರೆ. ಅಣ್ಣನ ಕಾಲಿಗೆ ಬಿದ್ದು ಆಶಿರ್ವಾದ ಪಡೆದುಕೊಂಡಿದ್ದಾರೆ. ಈ ವೇಳೆ ಚಿರಂಜೀವಿ ಜನಸೇನಾ ಪಾರ್ಟಿಗೆ ತಮ್ಮ ಸಪೋರ್ಟ್ ಸದಾ ಇರುತ್ತದೆ ಎಂದು ಭರವಸೆ ನೀಡಿದ್ದಾರೆ. ಈ ವೇಳೆ ಅಣ್ಣನ ಪ್ರೀತಿಗೆ ಪವನ್ ಕಲ್ಯಾಣ್ ಭಾವುಕರಾಗಿದ್ದಾರೆ ಎನ್ನಲಾಗಿದೆ.

ಇನ್ನೂ ಪವನ್ ಕಲ್ಯಾಣ್ ಕಳೆದ ಭಾನುವಾರ ಪವನ್ ಕಲ್ಯಾಣ್ ಅನಕಾಪಲ್ಲಿ ಎಂಬಲ್ಲಿ ಪ್ರಚಾರ ನಡೆಸಿದಿದ್ದನ್ನು ಚಿರಂಜೀವಿ ಟಿವಿಯಲ್ಲಿ ನೋಡಿದ್ದರಂತೆ. ಅನಕಾಪಲ್ಲಿ ನೂಕಾಲಮ್ಮ ದೇವಿಯ ಆಶಿರ್ವಾದ ಪವನ್ ಕಲ್ಯಾಣ್ ರವರಿಗೆ ಇರಲಿದೆ ಎಂಬ ಮಾತುಗಳನ್ನು ಚಿರಂಜೀವಿ ನೋಡಿದರಂತೆ. ಇದರಿಂದ ತನ್ನ ತಮ್ಮನಿಗೆ ತನ್ನ ಆಶಿರ್ವಾದ ಸಹ ಇರಬೇಕೆಂದು. ಜೊತೆಗೆ ಜನಸೇನಾ ಪಾರ್ಟಿಗೆ ಆರ್ಥಿಕವಾಗಿ ಸಹ ಬೆಂಬಲಿಸುವ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಂಡಿದ್ದಾರಂತೆ. ಕೂಡಲೇ 5 ಕೋಟಿ ರೂಪಾಯಿಯನ್ನು ಚೆಕ್ ಮೂಲಕ ಜನಸೇನಾ ಪಕ್ಷಕ್ಕೆ ವಿರಾಳವಾಗಿ ನೀಡಿದ್ದರಂತೆ. ತಮ್ಮ ಮನೆ ದೇವರು ಆಂಜನೇಯಸ್ವಾಮಿ ದೇವರ ಪಾದಗಳ ಬಳಿ ಪವನ್ ಕಲ್ಯಾಣ್ ರವರನ್ನು ಆಶಿರ್ವಾದ ನೀಡಿ ಆರ್ಥಿಕ ಸಹಾಯ ನೀಡಿದ್ದಾರೆ. ಜೊತೆಗೆ ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಸಹ ಜನಸೇನಾ ಪಾರ್ಟಿಗೆ ಆರ್ಥಿಕವಾಗಿ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇದೀಗ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.