Film News

ಫೈಟರ್ ಸಿನೆಮಾದಲ್ಲೂ ಬಿಕಿನಿಯಲ್ಲಿ ಸದ್ದು ಮಾಡಿದ ದೀಪಿಕಾ, ಫೈಟರ್ ಸಿನೆಮಾದ ಸೆಕೆಂಡ್ ಸಿಂಗಲ್ ರಿಲೀಸ್…….!

ಬಾಲಿವುಡ್ ನಲ್ಲಿ ಗ್ಲಾಮರ್‍ ಗೆ ತುಂಬಾನೆ ಪ್ರಾಧಾನ್ಯತೆ ಇರುತ್ತದೆ ಎಂದು ಹೇಳಬಹುದು. ಈ ಕಾರಣದಿಂದಲೇ ವಯಸ್ಸಾದರೂ ಸಹ ಅನೇಕ ನಟಿಯರು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಈ ಹಾದಿಯಲ್ಲೇ ನಟಿ ದೀಪಿಕಾ ಪಡುಕೋಣೆ ಸಹ ಮದುವೆಯಾದರೂ ಸಹ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳು‌ತ್ತಾ ಸಾಗುತ್ತಿದ್ದಾರೆ. ಅದರಲ್ಲೂ ಸಿನೆಮಾಗಳಲ್ಲಿ ಬೋಲ್ಡ್ ಆಗಿಯೇ ನಟಿಸುತ್ತಾ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಇದೀಗ ಫೈಟರ್‍ ಸಿನೆಮಾದಲ್ಲೂ ಸಹ ದೀಪಿಕಾ ಬಿಕಿನಿಯಲ್ಲಿ ಕಾಣಿಸಿಕೊಂಡು ಯುವಕರನ್ನು ಟೆಂಪ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್ ಗ್ರೀಕ್ ವೀರ ಎಂದೇ ಕರೆಯಲಾಗುವ ಹೃತಿಕ್ ರೋಷನ್ ಫೈಟರ್‍ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದಲ್ಲಿ ಹೃತಿಕ್ ಗೆ ಜೋಡಿಯಾಗಿ ದೀಪಿಕಾ ಪಡುಕೊಣೆ ಹೆಜ್ಜೆಹಾಕಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನೆಮಾ ತೆರೆಕಾಣಲಿದ್ದು, ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಬಾಲಿವುಡ್ ಆಕ್ಷನ್ ನಿರ್ದೇಶಕ ಸಿದ್ದಾರ್ಥ್ ಆನಂದ್ ಈ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಮುಂದಿನ ವರ್ಷ ಗಣರಾಜ್ಯೋತ್ಸವ ದಿನದಂದು ಈ ಸಿನೆಮಾ ಸಿನೆಮಾ ಥಿಯೇಟರ್‍ ಗಳಲ್ಲಿ ತೆರೆ ಕಾಣಲಿದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಟೀಸರ್‍ ಸಹ ಬಿಡುಗಡೆ ಮಾಡಲಾಗಿತ್ತು. ಈ ಟೀಸರ್‍ ಬಳಿಕ ಸಿನೆಮಾದ ಮೇಲೆ ಮತಷ್ಟು ಹೈಪ್ ಕ್ರಿಯೇಟ್ ಆಗಿತ್ತು. ವಾರದ ಹಿಂದೆ Sher Khul Gaye ಎಂಬ ಹಾಡು ರಿಲೀಸ್ ಆಗಿತ್ತು. ಇದೀಗ ಸೆಕೆಂಡ್ ಸಿಂಗಲ್ ರಿಲೀಸ್ ಆಗಿದೆ.

ಫೈಟರ್‍ ಸಿನೆಮಾದ ಎರಡನೇ ಹಾಡು Ishq Jaisa Kuch ಎಂಬ ಟೈಟಲ್ ನಲ್ಲಿ ಲಿರಿಕಲ್ ವಿಡಿಯೋ ರಿಲೀಸ್ ಮಾಡಲಾಗಿದ. ಈ ಹಾಡಿನಲ್ಲಿ ಹೃತಿಕ್ ಹಾಗೂ ದೀಪಿಕಾ ಸಖತ್ ಆಗಿ ಹೆಜ್ಜೆಯನ್ನು ಹಾಕಿದ್ದಾರೆ. ಅದರಲ್ಲೂ ಮುಖ್ಯವಾಗಿ ದೀಪಿಕಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ದೀಪಿಕಾ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಈ ಹಾಡು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ. ಇನ್ನೂ ಶಾರುಖ್ ಜೊತೆಗೆ ಪಠಾನ್ ಸಿನೆಮಾದಲ್ಲೂ ಸಹ ದೀಪಿಕಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ದೀಪಿಕಾ ಧರಿಸಿದ ಬಿಕಿನಿ ಕಲರ್‍ ಕಾರಣದಿಂದ ಸಿನೆಮಾ ಬ್ಯಾನ್ ಮಾಡಬೇಕೆಂಬ ಕೂಗು ಸಹ ಕೇಳಿಬಂದಿತ್ತು. ಇದೀಗ ಮತ್ತೆ ದೀಪಿಕಾ ಫೈಟರ್‍ ಸಿನೆಮಾದಲ್ಲಿ ಹೃತಿಕ್ ರೋಷನ್ ಗೆ ತಕ್ಕಂತೆ ಸ್ಟೆಪ್ಸ್ ಹಾಕಿ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದ್ದಾರೆ.

ಇನ್ನೂ ಈ ಸಿನೆಮಾ ಸೆ.30 ರಂದು ತೆರೆಕಾಣಬೇಕಿತ್ತು. ಆದರೆ ಪ್ರೊಡಕ್ಷನ್ ಕೆಲಸ ತಡವಾದ ಹಿನ್ನೆಲೆಯಲ್ಲಿ ಈ ಸಿನೆಮಾ 2024 ಜನವರಿ 25 ರಂದು ಅದ್ದೂರಿಯಾಗಿ ತೆರೆಕಾಣಲಿದೆ. ಈ ಸಿನೆಮಾದ ಪ್ರಮೋಷನ್ ಸಹ ಭರದಿಂದ ಸಾಗುತ್ತಿದೆ. ಈ ಸಿನೆಮಾದಲ್ಲಿ ಅನೀಲ್ ಕಪೂರ್‍, ಕರಣ್ ಸಿಂಗ್ ಹಾಗೂ ಅಕ್ಷಯ್ ಓಬೆರಾಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Most Popular

To Top