ಹಿಜಾಬ್ ನಿಷೇಧ ವಾಪಸ್ಸು ಪಡೆಯುವುದಾಗಿ ಘೋಷಣೆ ಮಾಡಿ ಸಿಎಂ ಸಿದ್ದು, ಹಿಜಾಬ್ ಹಾಕಿಕೊಂಡು ಎಲ್ಲಾದರೂ ಹೋಗಬಹುದು ಎಂದ ಸಿಎಂ…!

Follow Us :

ಕೆಲವು ತಿಂಗಳುಗಳ ಹಿಂದೆ ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದಂತಹ ಹಿಜಾಬ್ ನಿಷೇಧ ಮತ್ತೆ ಸುದ್ದಿಯಾಗಿದೆ. ಕರ್ನಾಟಕ ರಾಜ್ಯದ ಕಾಂಗ್ರೇಸ್ ಸರ್ಕಾರ ಹಿಜಾಬ್ ನಿಷೇಧ ವಾಪಸ್ಸು ಪಡೆಯಲು ಸೂಚನೆ ನೀಡಿದ್ದಾರೆ. ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಉಡುಪು, ಊಟ ಅವರವರ ಇಷ್ಟ. ಅದಕ್ಕೆ ನಾನ್ಯಾಕೆ ಅಡ್ಡಿಪಡಿಸಲಿ. ಹಿಜಾಬ್ ಹಾಕಿಕೊಂಡು ಎಲ್ಲಿಗಾದರೂ ಹೋಗಬಹುದು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಕರ್ನಾಟಕದ ನಂಜನಗೂಡಿನ ಕವಲಂದೆದಲ್ಲಿ ನಡೆದ ಪೊಲೀಸ್ ಠಾಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ. ಸಿಎಂ ಮಾತನಾಡುವ ಸಮಯದಲ್ಲಿ ಕೆಲ ಸಾರ್ವಜನಿಕರು ಹಿಜಾಬ್ ಕುರಿತು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರ ನೀಡಿದ ಸಿಎಮ ನೋ ಹಿಜಾಬ್ ಬ್ಯಾನ್ ಎಲ್ಲರೂ ಹಿಜಾಬ್ ಹಾಕಿಕೊಂಡು ಹೋಗಬಹುದು. ಈ ಆದೇಶ ಹಿಂಪಡೆಯಲು ಹೇಳಿದ್ದೇನೆ. ಆಹಾರ ಉಡುಗೆ ಅವರವರ ಇಚ್ಚೆಗೆ ಬಿಟ್ಟಿದ್ದು. ನಿನಗೆ ಯಾವ ಡ್ರೆಸ್ ಇಷ್ಟ ಅದನ್ನು ಹಾಕಿಕೋ, ನಿನಗೆ ಯಾವ ಆಹಾರ ಸೇವನೆ ಮಾಡಬೇಕು ಅನಿಸುತ್ತೆ ಅದನ್ನು ಸೇವನೆ ಮಾಡು, ಊಟ ಮಾಡುವುದು ನಿನ್ನ ಹಕ್ಕು, ನಾನು ಊಟ ಮಾಡುವುದು ನನ್ನ ಹಕ್ಕು ಎಂದಿದ್ದಾರೆ. ನೀನು ಪ್ಯಾಂಟ್ ಶರ್ಟ್ ಹಾಕಿಕೊಂಡರೇ ಹಾಕಿಕೊ, ನಾನು ದೋತಿ ಮತ್ತು ಜುಬ್ಬಾ ಹಾಕಿಕೊಳ್ಳುತ್ತೇನೆ ಅದರಲ್ಲೇನು ತಪ್ಪು, ಮತಕ್ಕಾಗಿ ರಾಜಕಾರಣ ಮಾಡುವುದು ತಪ್ಪು, ನಮ್ಮ ಸರ್ಕಾರ ಬಡವರಿಗಾಗಿ ಕೆಲಸ ಮಾಡುತ್ತದೆ. ಅದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಇನ್ನೂ ಹಿಜಾಬ್ ಬಗ್ಗೆ ಸಿದ್ದರಾಮಯ್ಯ ಎಕ್ಸ್ (ಟ್ವೀಟ್) ಪೋಸ್ಟ್ ಸಹ ಮಾಡಿದ್ದಾರೆ. ಅದರಲ್ಲಿರುವಂತೆ ಪ್ರಧಾನಿ ಮೋದಿಯವರ ಸಬ್ ಕಾ ಸಾಥ್- ಸಭ್ ಕಾ ವಿಕಾಸ್ ಎಂಬುದು ಬೋಗಸ್, ಬಟ್ಟೆ, ಉಡುಪು, ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಜಾಬ್ ನಿಷೇಧ ವಾಪಸ್ ಪಡೆಯಲು ತಿಳಿಸಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.