ರಕ್ಷಿತ್ ಶೆಟ್ಟಿ ಇನ್ನೂ ರಶ್ಮಿಕಾ ಜೊತೆಗೆ ಟಚ್ ನಲ್ಲಿದ್ದಾರಾ? ಈ ಕುರಿತು ರಕ್ಷಿತ್ ಹೇಳಿದ್ದು ಏನು? ವೈರಲ್ ಆದ ಕಾಮೆಂಟ್ಸ್……!

Follow Us :

ಸ್ಯಾಂಡಲ್ ವುಡ್ ಸ್ಟಾರ್‍ ನಟ ರಕ್ಷಿತ್ ಶೆಟ್ಟಿ ಹಾಗೂ ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ರವರು ಪ್ರೀತಿಸಿ, ಎಂಗೇಜ್ ಮೆಂಟ್ ಸಹ ಮಾಡಿಕೊಂಡಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಈ ಎಂಗೇಜ್ ಮೆಂಟ್ ಮುರಿದು ಬಿತ್ತು. ಮದುವೆ ಕ್ಯಾನ್ಸಲ್ ಆದ ಬಳಿಕವೂ ರಶ್ಮಿಕಾ ಜೊತೆಗೆ ರಕ್ಷಿತ್ ಶೆಟ್ಟಿ ಟಚ್ ನಲ್ಲೇ ಇದ್ದಾರಾ ಎಂಬ ಪ್ರಶ್ನೆ ಅನೇಕರಿಗೆ ಕಾಡುತ್ತಿದ್ದು, ಈ ಬಗ್ಗೆ ರಕ್ಷಿತ್ ಶೆಟ್ಟಿ ಸಂದರ್ಶನವೊಂದರಲ್ಲಿ ಮಾಡಿದ ಹೇಳಿಕೆಗಳು ವೈರಲ್ ಆಗುತ್ತಿವೆ.

ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಕಾಂಬಿನೇಷನ್ ನಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನೆಮಾ ಭಾರಿ ಸಕ್ಸಸ್ ತಂದುಕೊಂಟ್ಟಿತ್ತು. ಈ ಸಿನೆಮಾದ ಮೂಲಕ ನಟಿ ರಶ್ಮಿಕಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬಂದ ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿತ್ತು. ಇದೇ ಸಿನೆಮಾದ ಸಮಯದಲ್ಲೇ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ನಡುವೆ ಪ್ರೀತಿ ಹುಟ್ಟಿದ್ದು, ಅವರ ಪ್ರೀತಿ ಮದುವೆಯವರೆಗೂ ಸಾಗಿತ್ತು, ಜೊತೆಗೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಆ ನಿಶ್ಚಿತಾರ್ಥ ಸಹ ಕ್ಯಾನ್ಸಲ್ ಆಗಿದೆ. ಇಬ್ಬರ ನಡುವೆ ಬ್ರೇಕಪ್ ಸಹ ಆಗಿತ್ತು. ಆದರೆ ಅವರ ನಡುವೆ ಬ್ರೇಕಪ್ ಗೆ ಕಾರಣವಾದರೂ ಏನು ಎಂಬುದು ತಿಳಿದುಬಂದಿಲ್ಲ. ಈ ಕಾರಣದಿಂದ ರಶ್ಮಿಕಾರನ್ನು ರಕ್ಷಿತ್ ಶೆಟ್ಟಿ ಫ್ಯಾನ್ಸ್ ಹಿಗ್ಗಾಮುಗ್ಗಾ ಟ್ರೋಲ್ ಸಹ ಮಾಡಿದ್ದರು. ಬಳಿಕ ರಕ್ಷಿತ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿ ಯಾರೂ ರಶ್ಮಿಕಾರನ್ನು ಟ್ರೋಲ್ ಮಾಡಬೇಡಿ ಎಂದು ಹೇಳಿದ್ದರು.

ಟಾಲಿವುಡ್ ನತ್ತ ಮುಖ ಮಾಡಿದ ರಶ್ಮಿಕಾ ಚಲೋ ಎಂಬ ಸಿನೆಮಾದಲ್ಲಿ ನಟಿಸಿ ಹಿಟ್ ಪಡೆದುಕೊಂಡರು. ಬಳಿಕ ಸೌತ್ ಸಿನಿರಂಗದಲ್ಲೇ ಬಹುಬೇಡಿಕೆ ಪಡೆದುಕೊಂಡರು. ಸದ್ಯ ಸೌತ್ ಅಂಡ್ ನಾರ್ತ್ ನಲ್ಲೂ ಫೇಂ ಪಡೆದುಕೊಂಡು ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇನ್ನೂ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ರಕ್ಷಿತ್ ಶೆಟ್ಟಿ ಭಾಗಿಯಾಗಿ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ರಶ್ಮಿಕಾ ಬಗ್ಗೆ ಈ ವೇಳೆ ಪ್ರಶ್ನೆಯೊಂದು ಎದುರಾಗಿತ್ತು. ಅದಕ್ಕೆ ಉತ್ತರಿಸಿದ ರಕ್ಷಿತ್ ಮದುವೆ ಕ್ಯಾನ್ಸಲ್ ಆದರೂ ಸಹ ನಾವಿಬ್ಬರೂ ಟಚ್ ನಲ್ಲೇ ಇದ್ದೀವಿ. ಇಬ್ಬರೂ ಮಾತನಾಡಿಕೊಳ್ಳುತ್ತೇವೆ. ರಶ್ಮಿಕಾಗೆ ದೊಡ್ಡ ಕನಸುಗಳಿವೆ. ಇದೀಗ ಅವುಗಳನ್ನು ಆಕೆ ಸಾಕಾರ ಗೊಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಕಾಮೆಂಟ್ ಗಳ ಕಾರಣದಿಂದ ಇಬ್ಬರ ನಡುವೆ ಯಾವುದೇ ರೀತಿಯ ವಿಬೇದಗಳಿಲ್ಲ ಎಂದು ಹೇಳಲಾಗುತ್ತಿದೆ. ಜೊತೆಗೆ ರಕ್ಷಿತ್ ಶೆಟ್ಟಿಯವರ ಕಾಮೆಂಟ್ ಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.