Film News

ಬಾಹುಬಲಿ ಪ್ರಭಾಸ್ ಅಭಿಮಾನಿಸುವ ನಟಿ ಆಕೆಯಂತೆ, ಆದರೆ ಆಕೆಯೊಂದಿಗೆ ಒಂದು ಸಿನೆಮಾದಲ್ಲೂ ನಟಿಸಿಲ್ಲ, ಆಕೆ ಯಾರು ಗೊತ್ತಾ?

ಟಾಲಿವುಡ್ ಸ್ಟಾರ್‍ ನಟ ಪ್ರಭಾಸ್ ಬಾಹುಬಲಿ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿಬಿಟ್ಟರು. ಕೇವಲ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಸಹ ಅಭಿಮಾನಿಗಳನ್ನು ಪ್ರಭಾಸ್ ಹೊಂದಿದ್ದಾರೆ. ಸುಮಾರು 20 ವರ್ಷಗಳಿಂದ ಸಿನಿರಂಗದಲ್ಲಿ ಆಕ್ಟೀವ್ ಆಗಿರುವಂತಹ ಪ್ರಭಾಸ್ ನಟಿಸಿದ್ದು ಕೇವಲ 21 ಸಿನೆಮಾಗಳಲ್ಲಿ ಮಾತ್ರ. ಇದೀಗ ಪ್ರಭಾಸ್ ಸಾಲು ಸಾಲು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಸಲಾರ್‍ ಸಿನೆಮಾದ ಮೂಲಕ ಭಾರಿ ಸಕ್ಸಸ್ ಪಡೆದುಕೊಂಡರು. ಇದೀಗ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿರುವ ಪ್ರಭಾಸ್ ರವರೇ ಆ ನಟಿಯನ್ನು ತುಂಬಾ ಅಭಿಮಾನಿಸುತ್ತಾರಂತೆ. ಸದ್ಯ ಈ ಸುದ್ದಿ ಇಂಟ್ರಸ್ಟಿಂಗ್ ಆಗಿ ಹರಿದಾಡುತ್ತಿದೆ.

ರೆಬೆಲ್ ಸ್ಟಾರ್‍ ಪ್ರಭಾಸ್ ಸಲಾರ್‍ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಈ ಸಿನೆಮಾ ಭಾರಿ ಸಕ್ಸಸ್ ಕಂಡಿದ್ದು, ಅವರ ಮುಂದಿನ ಪ್ಯಾನ್ ಇಂಡಿಯಾ ಸಿನೆಮಾ ಕಲ್ಕಿ 2898ಎಡಿ ಸಿನೆಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಸಿನೆಮಾ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದು, ಪ್ರಬಾಸ್ ಜೊತೆಗೆ ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೊಣೆ ಜೋಡಿಯಾಗಿದ್ದಾರೆ. ನಟ ಪ್ರಭಾಸ್ ಜೊತೆಗೆ ಸ್ಟಾರ್‍ ನಟಿಯರೂ ಅಭಿನಯಿಸಬೇಕು ಎಂದು ತುಂಬಾನೆ ಇಷ್ಟಪಡುತ್ತಿರುತ್ತಾರೆ. ಅಂತಹ ಅವಕಾಶ ಬಂದರೇ ಯಾವುದೇ ನಟಿ ಮಿಸ್ ಮಾಡಿಕೊಳ್ಳುವುದಿಲ್ಲ ಎನ್ನಲಾಗುತ್ತದೆ. ಅಂತಹ ಕ್ರೇಜ್ ಇರುವಂತಹ ಪ್ರಭಾಸ್ ರವರು ಓರ್ವ ನಟಿಯನ್ನು ತುಂಬಾನೆ ಇಷ್ಟಪಡುತ್ತಾರಂತೆ. ಸದ್ಯ ಈ ಸುದ್ದಿ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ಅಷ್ಟಕ್ಕೂ ಪ್ರಭಾಸ್ ಅಭಿಮಾನಿಸುವ ನಟಿಯಾರು ಎಂಬ ವಿಚಾರಕ್ಕೆ ಬಂದರೇ, ಆಕೆ ಮತ್ಯಾರು ಅಲ್ಲ ನ್ಯಾಚುರಲ್ ಸ್ಟಾರ್‍ ಸಾಯಿ ಪಲ್ಲವಿ. ಸೌತ್ ಸಿನಿರಂಗದಲ್ಲಿ ಲೇಡಿ ಪವರ್‍ ಸ್ಟಾರ್‍ ಎಂದೇ ಕರೆಯಲಾಗುವ ಸಾಯಿ ಪಲ್ಲವಿ ಎಂದರೇ ಪ್ರಭಾಸ್ ರವರಿಗೆ ತುಂಬಾನೆ ಇಷ್ಟವಂತೆ. ಈ ಸುದ್ದಿಯನ್ನು ಈ ಹಿಂದೆ ನಡೆದಂತಹ ಸಂದರ್ಶನವೊಂದರಲ್ಲಿ ಪ್ರಭಾಸ್ ರವರೇ ಹೇಳಿದ್ದರು. ಸಾಯಿ ಪಲ್ಲವಿ ನಟನೆ ನನಗೆ ತುಂಬಾನೆ ಇಷ್ಟ ಎಂದು ಹೇಳಿದ್ದರು. ಆಕೆಯೊಂದಿಗೆ ನಟಿಸಬೇಕೆಂಬ ಆಸೆ ಸಹ ಇದೆ ಎಂದಿದ್ದರು. ಆದರೆ ಪ್ರಭಾಸ್ ರವರ ಎತ್ತರದ ಕಾರಣದಿಂದ ಆಕೆಯೊಂದಿಗೆ ನಟಿಸೋಕೆ ಆಗುತ್ತಿಲ್ಲ ಎಂದೂ ಸಹ ಪ್ರಭಾಸ್ ಹೇಳಿದ್ದರು. ಸದ್ಯ ಪ್ರಭಾಸ್ ರವರ ರಾಜಾ ಸಾಬ್ ಎಂಬ ಸಿನೆಮಾದ ನಟಿಯ ಬಗ್ಗೆ ತುಂಬಾನೆ ಚರ್ಚೆ ನಡೆಯುತ್ತಿದೆ. ಈ ಹಾದಿಯಲ್ಲೇ ಸಾಯಿಪಲ್ಲವಿಯ ಬಗ್ಗೆ ಪ್ರಭಾಸ್ ಮಾಡಿದಂತಹ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Most Popular

To Top