Film News

ಸಾಯಿಪಲ್ಲವಿಯವರನ್ನು ಆ ನಿರ್ದೇಶಕ ಅವಮಾನಿಸಿದ್ದರಂತೆ, ಅವರಿಗೆ ಸರಿಯಾಗಿಯೇ ಕೌಂಟರ್ ಕೊಟ್ಟಿದ್ದರಂತೆ ಸಾಯಿ ಪಲ್ಲವಿ….!

ಸಿನಿರಂಗದಲ್ಲಿ ನಟ ಅಥವಾ ನಟಿಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಬಂದಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಕ್ಸಸ್ ಕಂಡುಕೊಳ್ಳುತ್ತಾ ಸಾಗುತ್ತಿರುತ್ತಾರೆ. ಆದರೆ ಕೆಲವರು ಒಳ್ಳೆಯ ಪಾತ್ರವುಳ್ಳ ಸಿನೆಮಾಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ತಮ್ಮದೇ ಆದ ಇಮೇಜ್ ಸಹ ಪಡೆದುಕೊಂಡಿರುತ್ತಾರೆ. ಅಂತಹವರು ಸಿನಿರಂಗದಲ್ಲಿ ಸಿಗೋದು ತುಂಬಾನೆ ಕಡಿಮೆ ಎಂದು ಹೇಳಬಹುದಾಗಿದೆ. ಈ ಸಾಲಿಗೆ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಸಹ ಸೇರುತ್ತಾರೆ ಎನ್ನಬಹುದು.

ನಟಿ ಸಾಯಿಪಲ್ಲವಿ ಮಲಯಾಳಂನ ಪ್ರೇಮಂ  ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅದಕ್ಕೂ ಮುಂಚೆ ಆಕೆ ಈಟಿವಿ ಪ್ರಸಾರವಾಗಿದ್ದ ಢಿ ಎಂಬ ಡ್ಯಾನ್ಸ್ ಪ್ರೋಗ್ರಾಂನಲ್ಲಿ ಕಾಣಿಸಿಕೊಂಡಿದ್ದರು. ಪ್ರೇಮಂ ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಂಡ ಸಾಯಿ ಪಲ್ಲವಿ ಫಿದಾ ಸಿನೆಮಾದ ಮೂಲಕ ಮತಷ್ಟು ಫೇಮಸ್ ಆದರು. ಈ ಸಿನೆಮಾ ಸಹ ಸೂಪರ್‍ ಹಿಟ್ ಪಡೆದುಕೊಂಡಿತ್ತು. ಇನ್ನೂ ಫಿದಾ ಸಿನೆಮಾಗೂ ಮುಂಚೆ ಓರ್ವ ದೊಡ್ಡ ನಿರ್ದೇಶಕ ಸಾಯಿ ಪಲ್ಲವಿಯನ್ನು ತಮ್ಮ ಸಿನೆಮಾಗೆ ಆಯ್ಕೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದರಂತೆ. ಆದರೆ ಆ ಪಾತ್ರ ತುಂಬಾ ಬೋಲ್ಡ್ ಆಗಿದ್ದು, ಎಕ್ಸ್ ಪೋಸಿಂಗ್ ಸಹ ಮಾಡಬೇಕಿತ್ತಂತೆ. ಆದರೆ ಈ ಪಾತ್ರವನ್ನು ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ್ದರಂತೆ. ಬಳಿಕ ಆ ನಿರ್ದೇಶಕ ಸಾಯಿಪಲ್ಲವಿಯನ್ನು ಏಕೆ ರಿಜೆಕ್ಟ್ ಮಾಡಿದ್ದು ಎಂದು ಕೇಳಿದರೇ, ಸಾಯಿ ಪಲ್ಲವಿ ಅಂತಹ ದೃಶ್ಯಗಳಲ್ಲಿ ನಾನು ನಟಿಸೊಲ್ಲ ಅದಕ್ಕಾಗಿ ಒಪ್ಪಲಿಲ್ಲ ಎಂದು ಹೇಳಿದ್ದರಂತೆ.

ಬಳಿಕ ಆ ನಿರ್ದೇಶಕ ಸಿನಿರಂಗದಲ್ಲಿ ಆ ಕ್ಯಾರೆಕ್ಟರ್‍ ಮಾಡೊಲ್ಲ, ಬಿಕಿನಿ ಹಾಕೋಲ್ಲ ಎಂದು ಮಡಿಕಟ್ಟಿಕೊಂಡು ಕುಳಿತರೇ ಅವಕಾಶಗಳು ಬರೊಲ್ಲ, ಒಂದು ವೇಳೆ ಬಂದರೂ ಒಂದೆರೆಡು ಸಕ್ಸಸ್ ಬಂದರೂ, ಎರಡು ಮೂರು ವರ್ಷಗಳಿಗಿಂತ ಸಿನಿರಂಗದಲ್ಲಿ ಹೆಚ್ಚಿನ ಕಾಲ ಇರೋಕೆ ಆಗೊಲ್ಲ ಎಂದು ಹೇಳಿದ್ದರಂತೆ. ಅದಕ್ಕೆ ಸಾಯಿ ಪಲ್ಲವಿಗೆ ಕೋಪ ಬಂದು ನನಗೆ ಇಷ್ಟವಾದ ಪಾತ್ರ ಮಾತ್ರ ಮಾಡುತ್ತೇನೆ. ನನಗೆ ಆಫರ್‍ ಬಂದರೂ, ಬರದೇ ಹೋದರು. ನನಗೆ ಇಷ್ಟವಾದ ಸಿನೆಮಾಗಳಲ್ಲಿ ಮಾತ್ರ ನಟಿಸುತ್ತೇನೆ. ಅವುಗಳಲ್ಲೇ ಸಕ್ಸಸ್ ಸಾಧಿಸಿ ತೋರಿಸುತ್ತೇನೆ ಎಂದು ಆತನಿಗೆ ಸರಿಯಾಗಿ ಕೌಂಟರ್‍ ಕೊಟ್ಟಿದ್ದರಂತೆ. ಆಕೆ ಅಂದುಕೊಂಡಂತೆ ತನಗೆ ಇಷ್ಟವಾದ ಪಾತ್ರಗಳಲ್ಲೇ ನಟಿಸುತ್ತಾ ಸಕ್ಸಸ್ ಪಡೆದುಕೊಂಡು ಸ್ಟಾರ್‍ ಡಂ ಗಿಟ್ಟಿಸಿಕೊಂಡು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡಿದ್ದಾರೆ. ಆದರೆ ಆ ನಿರ್ದೇಶಕ ಯಾರು ಎಂಬುದು ಮಾತ್ರ ತಿಳಿದುಬಂದಿಲ್ಲ.

Most Popular

To Top