ಮೊದಲ ಬಾರಿಗೆ ಮಗಳ ಪೊಟೋ ಹಂಚಿಕೊಂಡ ಧ್ರುವ ಸರ್ಜಾ, ಲವ್ ಯೂ ಮಗಳೇ ಎಂದು ಪೊಟೋ ಹಂಚಿಕೊಂಡ ನಟ….!

ಕನ್ನಡ ಸಿನಿರಂಗದ ನಟ ಧ್ರುವಾ ಸರ್ಜಾ ಕಳೆದ ವರ್ಷ ಅ.2 ರಂದು ಹೆಣ್ಣು ಮಗುವಿಗೆ ತಂದೆಯಾದರು. ಧ್ರುವಾ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಮುದ್ದಾದ ಹೆಣ್ಣು ಮಗಳ ಜನನವಾಯಿತು. ಇನ್ನೂ ಮಗಳು ಹುಟ್ಟಿದಾಗಿನಿಂದ ಇಲ್ಲಿಯವರೆಗೂ…

ಕನ್ನಡ ಸಿನಿರಂಗದ ನಟ ಧ್ರುವಾ ಸರ್ಜಾ ಕಳೆದ ವರ್ಷ ಅ.2 ರಂದು ಹೆಣ್ಣು ಮಗುವಿಗೆ ತಂದೆಯಾದರು. ಧ್ರುವಾ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಮುದ್ದಾದ ಹೆಣ್ಣು ಮಗಳ ಜನನವಾಯಿತು. ಇನ್ನೂ ಮಗಳು ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಪೊಟೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರಲಿಲ್ಲ. ಆದರೆ ಇದೀಗ ಮೊದಲ ಬಾರಿಗೆ ತನ್ನ ಮಗಳ ಪೊಟೋ ವನ್ನು ಧ್ರುವಾ ಸರ್ಜಾ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟ ಧ್ರುವಾ ಸರ್ಜಾ ಕುಟುಂಬದಲ್ಲಿ ಮಗಳು ಬಂದ ಮೇಲೆ ಖುಷಿ ಹೆಚ್ಚಾಗಿದೆ ಎನ್ನಲಾಗಿದೆ. ಧ್ರುವಾ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂತಲೂ ಕರೆಯಲಾಗುತ್ತದೆ. ಅದರಲ್ಲೂ ಮಗಳು ಹುಟ್ಟಿದ ಬಳಿಕ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮೊದಲ ಬಾರಿಗೆ ಆತ ತನ್ನ ಮಗಳ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋಗೆ ಲವ್ ಯೂ ಮಗಳೇ ಎಂದು ಕ್ಯಾಪ್ಷನ್ ಸಹ ಹಾಕಿದ್ದಾರೆ. ಇನ್ನೂ ಈ ಪೊಟೋ ನೋಡಿದ ಅಭಿಮಾನಿಗಳು ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ಮಗಳ ಮುಖವನ್ನು ತೋರಿಸದ ಕಾರಣ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಇನ್ನೂ ಮಗಳು ತುಂಬಾ ಕ್ಯೂಟ್ ಆಗಿದ್ದಾಳೆ. ನಮಗೂ ಮುಖ ತೋರಿಸಿ ಎಂದು ಕಾಮೆಂಟ್ ಗಳ ಮೂಲಕ ತಮ್ಮ ಬೇಡಿಕೆಯನ್ನು ತಿಳಿಸುತ್ತಿದ್ದಾರೆ.

ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದುಕೊಂಡಿರುವ ಧ್ರುವಾ ಸರ್ಜಾ ಬಹುನಿರೀಕ್ಷಿತ ಮಾರ್ಟಿನ್ ಎಂಬ ಸಿನೆಮಾದ ಮೂಲಕ ಶೀಘ್ರದಲ್ಲೇ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆ ಹುಟ್ಟಿದೆ. ಇನ್ನೂ ಇತ್ತೀಚಿಗಷ್ಟೆ ಮಾರ್ಟಿನ್ ಸಿನೆಮಾ ಟೀಸರ್‍ ಸಹ ರಿಲೀಸ್ ಆಗಿತ್ತು. ಈ ಟೀಸರ್‍ ತುಂಬಾನೆ ಸದ್ದು ಮಾಡುತ್ತಿದೆ. ಇನ್ನೂ ಪ್ಯಾನ್ ಇಂಡಿಯಾ ಸಿನೆಮಾ ಇದಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವುದು ಪಕ್ಕಾ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಜೊತೆಗೆ ಸಿನಿರಂಗದ ಅನೇಕ ಸಿನೆಮಾಗಳ ರೆಕಾರ್ಡ್‌ಗಳನ್ನೂ ಸಹ ಬ್ರೇಕ್ ಮಾಡಲಿದೆ ಎಂಬ ಆಶಾಭಾವನೆಯನ್ನೂ ಸಹ ಧ್ರುವಾ ಸರ್ಜಾ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಮಾರ್ಟಿನ್ ಟೀಸರ್‍ ಬಿಡುಗಡೆಯಾದ 24 ಗಂಟೆಗಳಲ್ಲೇ ಭಾರಿ ವೀಕ್ಷಣೆ ಪಡೆದುಕೊಂಡಿದೆ. ಅಷ್ಟೇಅಲ್ಲದೇ ಕೆಜಿಎಫ್-2 ಟೀಸರ್‍ ವೀಕ್ಷಣೆಯ ದಾಖಲೆ ಸಹ ಮುರಿಯುತ್ತದೆ ಎಂಬ ನಿರೀಕ್ಷೆ ಸಹ ಇತ್ತು. ಆದರೆ ಕೆಜಿಎಫ್-2 ರೆಕಾರ್ಡ್ ಮುರಿಯುವಲ್ಲಿ ವಿಫಲವಾಗಿದೆ. ಆದರೆ 24 ಗಂಟೆಗಳಲ್ಲಿ 33 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಸ್ಯಾಂಡಲ್ ವುಡ್ ನಲ್ಲಿ 24 ಗಂಟೆಗಳಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಂಡ ಕನ್ನಡದ ಟೀಸರ್‍ ಪಟ್ಟಿಯಲ್ಲಿ ಮಾರ್ಟಿನ್ ಎರಡನೇ ಸ್ಥಾನ ಪಡೆದುಕೊಂಡಿದೆ. ಯೂಟ್ಯೂಬ್ ನಲ್ಲಿ ಈ ಟೀಸರ್‍ 77 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಸದ್ಯ ಈ ಸಿನೆಮಾಗಾಗಿ ಧ್ರುವಾ ಸರ್ಜಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.