ಕಾಸ್ಟಿಂಗ್ ಕೌಚ್ ಬಗ್ಗೆ ಸಂಚಲನಾತ್ಮಕ ಹೇಳಿಕೆ ಕೊಟ್ಟ ವಿದ್ಯಾ ಬಾಲನ್, ಕಾಫಿಗೆ ಕರೆದು ರೂಂಗೆ ಬಾ ಎಂದರಂತೆ…!

Follow Us :

ಹಿಂದಿ ಸಿನಿರಂಗದ ಬಹುಬೇಡಿಕೆ ನಟಿಯರಲ್ಲಿ ವಿದ್ಯಾಬಾಲನ್ ಸಹ ಒಬ್ಬರಾಗಿರುತ್ತಾರೆ. ಡರ್ಟಿ ಪಿಕ್ಚರ್‍, ಷೆರ್‍ನಿ, ಕಹಾನಿ ಮೊದಲಾದ ಸಿನೆಮಾಗಳ ಮೂಲಕ ಫೇಮಸ್ ಆದ ನಟಿ ವಿದ್ಯಾಬಾಲನ್ ಸದ್ಯ ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟಿದ್ದಾರೆ. ಇತ್ತಿಚಿಗೆ ಸಿನಿರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಟಿಯರು ಬಾಯ್ಬಿಡುತ್ತಿದ್ದಾರೆ. ಮಿಟೂ ಅಭಿಯಾನ ಬಂದ ಬಳಿಕ ಕಾಸ್ಟಿಂಗ್ ಕೌಚ್ ತುಂಬಾನೆ ನಡೆಯುತ್ತಿವೆ. ಇದೀಗ ವಿದ್ಯಾಬಾಲನ್ ಸಹ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

ನಟಿ ವಿದ್ಯಾಬಾಲನ್ ಸಹ ಕಾಸ್ಟಿಂಗ್ ಕೌಚ್ ಅನುಭವವನ್ನು ಎದುರಿಸಿದ್ದಾರಂತೆ.  ಆಕೆಯ ಕೆರಿಯರ್‍ ನಲ್ಲಿ ಅನುಭವಿಸಿದ ಕೆಲವೊಂದು ಸಮಸ್ಯೆಗಳ ಒಪೆನ್ ಆಗಿದ್ದಾರೆ. ದಕ್ಷಿಣ ಸಿನೆಮಾಗಳಲ್ಲಿ ಕೆಲಸ ಮಾಡಲು ಪ್ರಯತ್ನಗಳನ್ನು ಮಾಡುತ್ತಿದ್ದೆ. ಆಗ ಒಂದು ಜಾಹಿರಾತಿಗಾಗಿ ಡೈರೆಕ್ಟರ್‍ ಅನ್ನು ಭೇಟಿಯಾಗಲು ಚೆನೈಗೆ ಹೋಗಿದ್ದೆ. ಅಲ್ಲಿ ಕಾಫಿ ಶಾಪ್ ನಲ್ಲಿ ಮಾತನಾಡಿಕೊಳ್ಳೋಣ ಎಂದು ಹೇಳಿದ್ರೆ, ಆತ ಮಾತ್ರ ರೂಂ ಗೆ ಹೋಗಿ ಮಾತಾಡೋಣ ಎಂದು ಕೇಳಿದ್ದ. ಆಗ ಆತನಿಗಿರುವ ಆಲೋಚನೆ ನನಗೆ ತಿಳಿಯಿತು. ಆಗ ನಾನು ಆ ರೂಂ ಲಾಕ್ ಮಾಡದೇ ಕೊಂಚ ತೆರೆದೆ ಇಟ್ಟಿದ್ದೆ. ಅದರಿಂದ ಆತ ಏನು ಮಾತನಾಡದೇ ಐದು ನಿಮಿಷಗಳ ಬಳಿಕ ಅಲ್ಲಿಂದ ಹೊರಟು ಹೋದ. ಆ ಸಮಯದಲ್ಲಿ ನಾನು ಬುದ್ದಿವಂತಿಕೆಯಿಂದ ಆಲೋಚನೆ ಮಾಡಿ ಆತನಿಂದ ತಪ್ಪಿಸಿಕೊಂಡೆ ಎಂದು ವಿದ್ಯಾಬಾಲನ್ ಹೇಳಿದ್ದಾರೆ. ಆದರೆ ಆ ನಿರ್ದೇಶಕ ಯಾರು ಎಂಬ ವಿಚಾರವನ್ನು ಮಾತ್ರ ಆಕೆ ತಿಳಿಸಿಲ್ಲ.

ಅಷ್ಟೇಅಲ್ಲದೇ ಇಂದಿಗೂ ಸಹ ಆ ಘಟನೆ ನನಗೆ ಮರೆಯಲು ಆಗುತ್ತಿಲ್ಲ. ಅದಾದ ಬಳಿಕವೂ ಸಹ ಇಂತಹುದೇ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಅದರಿಂದ ನಾನು ತುಂಬಾ ಮಾನಸಿಕ ಹಿಂಸೆಯನ್ನು ಸಹ ಅನುಭವಿಸಿದ್ದೆ. ಅದರಿಂದ ಹೊರಬರಲು ತುಂಬಾನೆ ಕಷ್ಟಪಟ್ಟೆ ಎಂದು ತಮಗಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ವಿದ್ಯಾ ಬಾಲನ್ ಮಾತನಾಡಿದ್ದಾರೆ. ಅಷ್ಟೇಅಲ್ಲದೇ ಆಕೆ ಬಾಡಿ ಶೇಮಿಂಗ್ ಸಹ ಎದುರಿಸಿದ್ದರಂತೆ. ಇನ್ನೂ ಕಳೆದ 2005 ರಲ್ಲಿ ವಿದ್ಯಾ ಬಾಲನ್ ಪರಿಣಿತ ಎಂಬ ಸಿನೆಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಆದರೆ ಆಕೆ ಡರ್ಟಿ ಪಿಕ್ಚರ್‍ ಎಂಬ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡು ತುಂಬಾನೆ ಫೇಂ ಸಹ ಆಗಿದ್ದರು.ಇನ್ನೂ ವಿದ್ಯಾಬಾಲನ್ ಕೆಲವು ದಿನಗಳ ಹಿಂದೆಯಷ್ಟೆ ನ್ಯೂಡ್ ಆಗಿ ಕಾಣಿಸಿಕೊಂಡಿದ್ದರು. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.