Film News

ಹುಟ್ಟುಹಬ್ಬದ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಇನ್ನಾದರೂ ವಿಲನ್ ಆಗೋಣ ಎಂದ ನಟ…..!

ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್‍ ದರ್ಶನ್ ರವರಿಗೆ ಇಂದು (ಫೆ.16) ಹುಟ್ಟುಹಬ್ಬದ ಸಂಭ್ರಮ. ತಮ್ಮ ಅಭಿಮಾನದ ನಟನಿಗೆ ಸೋಷಿಯಲ್ ಮಿಡಿಯಾದಲ್ಲಿ ಶುಭಾಷಯಗಳ ಸುರಿಮಳೆಯಾಗುತ್ತಿದೆ. ಫೆ.15 ರ ಮಧ್ಯರಾತ್ರಿಯೇ ದರ್ಶನ್ ಅಭಿಮಾನಿಗಳು ಅವರ ಮನೆಯ ಮುಂದೆ ಜಮಾಯಿಸಿದ್ದು, ಈ ಹಿಂದೆ ದರ್ಶನ್ ನೀಡಿದ ಮಾತಿನಂತೆ ಅಕ್ಕಿ ಹಾಗೂ ಧಾನ್ಯಗಳನ್ನುಉಡುಗೊರೆಯಾಗಿ ನೀಡಿದ್ದಾರೆ. ಇದೇ ವೇಳೆ ತಮ್ಮ ಡೆವಿಲ್ ಸಿನೆಮಾದ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

ಇನ್ನೂ ದರ್ಶನ್ ರವರ ಹುಟ್ಟುಹಬ್ಬದಂದು ಡೆವಿಲ್ ಸಿನೆಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಸಿನೆಮಾದ ಡೈಲಾಗ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಮನೆಯಲ್ಲೊಂದು ಪುಟ್ಟ ಪಾಪು ಇರುವುದು, ಪೊಟೋ ತೆಗೆದರೇ ಅದಕ್ಕೆ ಬಲು ಕೋಪ ಬರುವುದು, ಪೊಟೋ ತೆಗೆದ ಪಾಪು ಕೈ ಮುರಿದು ಬಿಡುವುದು, ಸರ್ಸು ಪಾಪು ಹೆಸರು ಕೇಳಲ್ವ, ಡೆವಿಲ್ ಎಂದು ಡೈಲಾಗ್ ಇದೆ. ಇನ್ನೂ ದರ್ಶನ್ ರವರ ಈ ಸಿನೆಮಾದಲ್ಲಿನ ಲುಕ್ ನೋಡಿ ಅನೇಕರಿಗೆ ವಿಲನ್ ಶೇಡ್ ಕಂಡಿದೆ. ಚಿತ್ರದ ಟೈಟಲ್ ಸಹ ಅದೇ ರೀತಿಯಲ್ಲಿದೆ. ಇದೀಗ ದರ್ಶನ್ ರವರು ಈ ಸಿನೆಮಾದ ಬಗ್ಗೆ ಮಾಹಿತಿ ನೀಡಿದ್ದಾರೆ. ದರ್ಶನ್ ರವರ ಆರ್‍.ಆರ್‍.ನಗರದ ನಿವಾಸದಲ್ಲಿ ಮಾತನಾಡುತ್ತಾ, ನನ್ನ 25 ವರ್ಷದ ಪ್ರಯಾಣ ಅಷ್ಟೊಂದು ಸುಲಭವಾಗಿರಲಿಲ್ಲ. ತುಂಬಾ ಸ್ಟ್ರಗಲ್ ಆದ ಮೇಲೆ ಈ ಸಕ್ಸಸ್ ಸಿಕ್ಕಿದೆ. ಡೆವಿಲ್ ಸಿನೆಮಾದಲ್ಲಿ ವಿಲನಿಶ್ ಲುಕ್ ಇದೆ. ಇಷ್ಟು ದಿನ ಒಳ್ಳೆಯವರಾಗಿದ್ದು ಸಾಕು, ಇನ್ನಾದರೂ ವಿಲನ್ ಆಗೋಣ ಎಂದು ದರ್ಶನ್ ಹೇಳಿದ್ದು, ಅವರ ಮಾತುಗಳನ್ನು ಕೇಳಿ ಅಭಿಮಾನಿಗಳು ಸರ್ಪ್ರೈಸ್ ಫೀಲ್ ಆಗಿದ್ದಾರೆ.

ಇನ್ನೂ ದರ್ಶನ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಫೆ.17 ರಂದು ಬೆಳ್ಳಿ ಪರ್ವ ಎಂಬ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್‍ ಗಳು ಭಾಗಿಯಾಗಲಿದ್ದಾರೆ. ಇನ್ನೂ ದರ್ಶನ್ ರವರ ಕಾಟೇರಾ ಸಿನೆಮಾ ಭಾರಿ ಹಿಟ್ ಪಡೆದುಕೊಂಡಿದೆ. ಶೀಘ್ರದಲ್ಲೇ ದರ್ಶನ್ ಡೆವಿಲ್ ದಿ ಹಿರೋ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಜೊತೆಗೆ ಬರೊಬ್ಬರಿ 9 ಸಿನೆಮಾಗಳ ಮಾತುಕತೆ ಸಹ ನಡೆಯುತ್ತಿದೆ. ಅನೇಕ ನಿರ್ದೇಶಕರು ದರ್ಶನ್ ರವರ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

Most Popular

To Top