ಶೂಟಿಂಗ್ ಸೆಟ್ ನಲ್ಲಿ ಅಸಭ್ಯವಾಗಿ ವರ್ತಿಸಿದವನ ಕೆನ್ನಗೆ ಭಾರಿಸಿದ ಬೋಲ್ಡ್ ಬ್ಯೂಟಿ ನೋರಾ ಫತೇಹಿ…..!

Follow Us :

ನಾರ್ತ್ ಅಂಡ್ ಸೌತ್ ನಲ್ಲಿ ಹಾಟ್ನೆಸ್ ಗೆ ಬ್ರಾಂಡ್ ಅಂಬಾಸಿಡರ್‍ ಎಂತಲೇ ಕರೆಯಲಾಗುವ ನಟಿ ನೋರಾ ಫತೇಹಿ ಬಾಲಿವುಡ್ ನ ಅನೇಕ ಸಿನೆಮಾ ಗಳಲ್ಲಿ ಹಾಟ್ ಹಾಡುಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡರು. ತೆಲುಗಿನ ಪ್ಯಾನ್ ಇಂಡಿಯಾ ಸಿನೆಮಾ ಬಾಹುಬಲಿ ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ಮೂಲಕ ಭಾರಿ ಫೇಂ ಪಡೆದುಕೊಂಡರು. ಡ್ಯಾನ್ಸರ್‍, ಮಾಡಲ್ ಹಾಗೂ ಸಿಂಗರ್‍ ಆಗಿಯೂ ಆಕೆ ತನ್ನ ತಾಕತ್ತು ಏನು ಎಂಬುದನ್ನು ತೋರಿಸಿದ್ದಾರೆ. ಇದೀಗ ಆಕೆ ತಮ್ಮ ಕೆರಿಯರ್‍ ನಲ್ಲಿ ಎದುರಾದ ಕಹಿ ಘಟನೆಯ ಬಗ್ಗೆ ಮಾತನಾಡಿದ್ದಾರೆ.

ಆದರೆ ಆಕೆ ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ ಗಳ ಮೂಲಕ ತುಂಬಾನೇ ಫೇಂ ಪಡೆದುಕೊಂಡರು. ಹಿಂದಿ ಸಿನೆಮಾಗಳ ಜೊತೆಗೆ ಕೆಲವೊಂದು ಸೌತ್ ಸಿನೆಮಾಗಳಲ್ಲೂ ಸಹ ಕೆಲವೊಂದು ಐಟಂ ಸಾಂಗ್ ಗಳಲ್ಲಿ ನೃತ್ಯ ಮಾಡಿ ಸೌತ್ ನಲ್ಲೂ ಫೇಂ ಸಂಪಾದಿಸಿಕೊಂಡರು.  ಟಾಲಿವುಡ್ ಗೆ ಟೆಂಪರ್‍ ಸಿನೆಮಾದಲ್ಲಿ ಐಟಂ ಸಾಂಗ್ ಮಾಡುವ ಮೂಲಕ ಎಂಟ್ರಿ ಕೊಟ್ಟರು. ಬಾಹುಬಲಿ, ಕಿಕ್-2, ಷೇರ್‍, ಲೋಫರ್‍, ಊಪಿರಿ ಮೊದಲಾದ ಸಿನೆಮಾಗಳಲ್ಲಿ ಸ್ಪೇಷಲ್ ಹಾಡುಗಳ ಮೂಲಕ ಸೌತ್ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡರು. ಸದ್ಯ ಬಾಲಿವುಡ್ ಸಿನೆಮಾಗಳಲ್ಲಿ ನೋರಾ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯದಲ್ಲೂ ಸಹ ಪುಲ್ ಆಕ್ಟೀವ್ ಆಗಿದ್ದು, ಬೋಲ್ಡ್ ಪೊಟೋಗಳು ವಿಡಿಯೋ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ತನ್ನ ಕೆರಿಯರ್‍ ಆರಂಭದಲ್ಲಿ ಎದುರಿಸಿದ ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.

ದಿ ಕಪಿಲ್ ಶರ್ಮಾ ಶೋ ತುಂಬಾನೆ ಫೇಂ ಪಡೆದುಕೊಂಡಿದೆ. ಈ ಶೋನಲ್ಲಿ ಭಾಗಿಯಾಗಿದ್ದ ನೋರಾ ಫತೇಹಿ ಶೂಟಿಂಗ್ ಸೆಟ್ ನಲ್ಲಿ ನಡೆದ ಕೆಟ್ಟ ಘಟನೆಯ ಬಗ್ಗೆ ಮಾತನಾಡಿದ್ದಾರೆ. ರೋರ್‍ ಟೈಗರ್‍ ಆಫ್ ದಿ ಸುಂದರ್‍ ಬನ್ಸ್ ಸಿನೆಮಾದ ಶೂಟಿಂಗ್ ಸಮಯದಲ್ಲಿ ಸಹನಟನೊಬ್ಬ ಆಕೆಯೊಂದಿಗೆ ಅಸಭ್ಯಕರವಾಗಿ ವರ್ತಿಸಿದ್ದನಂತೆ. ಆ ಸಮಯದಲ್ಲಿ ಆಕೆ ಆತನ ಕೆನ್ನೆಗೆ ಸರಿಯಾಗಿ ಬಾರಿಸಿದ್ದರಂತೆ. ಈ ಸಮಯದಲ್ಲಿ ಅವರಿಬ್ಬರ ನಡುವೆ ಗಲಾಟೆ ಜೋರಾಗಿಯೇ ನಡೆದಿತ್ತಂತೆ. ಬಳಿಕ ನಿರ್ದೇಶಕ ಮಧ್ಯಪ್ರವೇಶಿಸಿ ಇಬ್ಬರಿಗೂ ಸಮಾಧಾನ ಮಾಡಿ ಗಲಾಟೆ ತಿಳಿಗೊಳಿಸಿದ್ದರು. ಈ ಗಲಾಟೆ ನಡೆದಾಗ ನಾನು ತುಂಬಾನೆ ನೋವು ಅನುಭವಿಸಿದ್ದೆ ಎಂದು ನೋರಾ ಹೇಳಿದ್ದರು. ಇನ್ನೂ ನೋರಾ ಫತೇಹಿ ಕ್ರಾಕ್ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಇದೇ ಫೆ.23 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಇದೆ. ವಿದ್ಯುತ್ ಜಮವಾಲ್, ಅರ್ಜುನ್ ರಾಂಪಾಲ್, ಅಮಿ ಜಾಕ್ಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.