Film News

ಟಾಪ್ ಲೆಸ್ ವಿಡಿಯೋ ಮೂಲಕ ಶಾಕ್ ಕೊಟ್ಟ ಸಂಯುಕ್ತಾ, ನಿಮ್ಮ ದೇಹ ನಿಮ್ಮ ಆಸ್ತಿ ಎಂದ ಹಾಟ್ ಬ್ಯೂಟಿ…….!

ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಹುಡುಗಿ ಎಂದೇ ಕರೆಯಲಾಗುವ ಸಂಯುಕ್ತಾ ಹೆಗಡೆ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಕಿರಿಕ್ ಪಾರ್ಟಿ ಎಂಬ ಸಿನೆಮಾ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡ ಈ ನಟಿ, ಬಳಿಕ ಸಿನೆಮಾಗಳಲ್ಲಿ ಅಷ್ಟು ಜನಪ್ರಿಯತೆ ಪಡೆದುಕೊಳ್ಳಲಿಲ್ಲ. ಸದ್ಯ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಪ್ರಯತ್ನ ನಡೆಸುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಟಾಪ್ ಲೆಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ನಿಮ್ಮ ದೇಹ, ನಿಮ್ಮ ಆಸ್ತಿ ಎಂದು ಹೇಳಿದ್ದಾರೆ.

ಯಂಗ್ ಬ್ಯೂಟಿ ಸಂಯುಕ್ತಾ ಹೆಗ್ಡೆ ಸೂಪರ್‍ ಹಿಟ್ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ರವರ ಜತೆಗೆ ನಟಿಸಿ ಫೇಂ ಪಡೆದುಕೊಂಡರು. ಬಳಿಕ ತೆಲುಗು, ತಮಿಳು ಸಿನೆಮಾಗಳಲ್ಲೂ ಸಹ ನಟಿಸುವ ಅವಕಾಶಗಳನ್ನು ಪಡೆದುಕೊಂಡರು. ಇನ್ನೂ ಕೆಲವು ತಿಂಗಳ ಹಿಂದೆ ಸಂಯುಕ್ತಾ ಸಿನೆಮಾ ಒಂದರ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಈ ವೇಳೆ ಆಕೆ ಗಾಯಗೊಂಡಿದ್ದರು. ಇದರಿಂದ ಆಕೆ ಸುಮಾರು ಐದು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದರು. ಇದೀಗ ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದ ಮೂಲಕ ಆಕೆ ಟಾಪ್ ಲೆಸ್ ವಿಡಿಯೋ ಮೂಲಕ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಸಂಯುಕ್ತಾ ಹೆಗ್ಡೆ ಒಂದಲ್ಲ ಒಂದು ರೀತಿಯ ಪೋಸ್ಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಆಕೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋ ಸಖತ್  ವೈರಲ್ ಆಗುತ್ತಿದೆ. ಟಾಪ್ ಲೆಸ್ ಆಗಿ ವಿಡಿಯೋದಲ್ಲಿ ದರ್ಶನ ಕೊಟ್ಟಿದ್ದಾರೆ. ನಿಮ್ಮ ದೇಹ, ನಿಮ್ಮ ಆಸ್ತಿ, ನೀವು ಯಾವುದೇ ಸಾಮಾಜಿಕ ಮಾನದಂಡಗಳ ಮಾಲಿಕತ್ವ ಹೊಂದಿಲ್ಲ, ಮಹಿಳೆಯರಿಗೆ ಸ್ವತಂತ್ರ, ಆತ್ಮವಿಶ್ವಾಸಕ್ಕೆ ಅವಕಾಶವಿದೆ. ಶಕ್ತಿ ಎಂಬುದು ಪುರುಷ ಹಾಗೂ ಮಹಿಳೆ ಎನ್ನುವುದು ಅಲ್ಲ ಎಂದು ವಿಡಿಯೋ ಮೂಲಕ ಪಾಠ ಮಾಡಿದ್ದಾರೆ. ಇನ್ನೂ ಸಂಯುಕ್ತಾ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

ಸದ್ಯ ಸಂಯುಕ್ತಾ ಹೆಗ್ಡೆ ಬಿಗ್ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಇನ್ನೂ ಆಕೆ ಕ್ರೀಮ್ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಕಿರಿಕ್ ಪಾರ್ಟಿ ಸಿನೆಮಾದಲ್ಲಿ ರಶ್ಮಿಕಾ ಜೊತೆಗೆ ಸಂಯುಕ್ತಾ ಸಹ ನಟಿಸಿದ್ದಾರೆ. ಆದರೆ ರಶ್ಮಿಕಾ ಪಡೆದುಕೊಂಡಷ್ಟು ಕ್ರೇಜ್ ಸಂಯುಕ್ತಾ ಪಡೆದುಕೊಳ್ಳಲು ವಿಫಲರಾದರೆಂದು ಹೇಳಬಹುದಾಗಿದೆ.

Most Popular

To Top