Film News

ಅಂಡರ್ ವಾಟರ್ ನಲ್ಲಿ ರೊಮ್ಯಾನ್ಸ್ ಮಾಡಿದ ನಿವೇದಿತಾ-ಚಂದನ್ ಶೆಟ್ಟಿ, ವೈರಲ್ ಆದ ವಿಡಿಯೋ…..!

ಚಂದನವನದಲ್ಲಿ ಕ್ಯೂಟ್ ಕಪಲ್ ಆಗಿ ತುಂಬಾನೆ ಗಮನ ಸೆಳೆದ ಜೋಡಿಯಲ್ಲಿ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಸಹ ಒಂದಾಗಿದೆ. ಇವರಿಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿರುತ್ತಾರೆ. ಸದಾ ಇನ್ಸ್ಟಾಗ್ರಾಂ ನಲ್ಲಿ ಆಕೆಯ ಅಪ್ಡೇಟ್ ಪ್ರತಿನಿತ್ಯ ಇದ್ದೇ ಇರುತ್ತದೆ. ನಿವೇದಿತಾ ಹಾಗೂ ಚಂದನ್ ಬಿಗ್ ಬಾಸ್ ಮೂಲಕ ಎಲ್ಲರಿಗೂ ಪರಿಚಿತರಾದರು. ಬಿಗ್ ಬಾಸ್ ನಲ್ಲಿ ಜೋಡಿಯಾಗಿದ್ದ ಇವರು ನಿಜ ಜೀವನದಲ್ಲೂ ಸಹ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ದೊಡ್ಡ ಫಾಲೋಯಿಂಗ್ ಹೊಂದಿದ್ದಾರೆ ಈ ಜೋಡಿ. ಇದೀಗ ಅವರು ಹಂಚಿಕೊಂಡ ಲೇಟೆಸ್ಟ್ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ನಿವೇದಿತಾ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಬಿಗ್ ಬಾಸ್ ಮೂಲಕ ಪರಿಚಯವಾಗಿ ಪ್ರೀತಿಸಿ ಮದುವೆಯಾದರು. ಮದುವೆಯಾದಾಗಿನಿಂದಲೂ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಪೊಟೋಶೂಟ್ಸ್, ರೀಲ್ಸ್, ವಿಡಿಯೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇನ್ನೂ ಈ ಪೋಸ್ಟ್ ಗಳ ಕಾರಣದಿಂದಾಗಿ ಈ ಜೋಡಿ ಟ್ರೋಲ್ ಗಳಿಗೆ ಸಹ ತುತ್ತಾಗುತ್ತಿರುತ್ತಾರೆ. ಆದರೆ ಆ ಟ್ರೋಲ್ಸ್ ಗಳಿಗೆ ಈ ಜೋಡಿ ಕಿವಿಗೊಡುವುದಿಲ್ಲ. ಈ ಹಾದಿಯಲ್ಲೇ ಇದೀಗ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅಂಡರ್‍ ವಾಟರ್‍ ನಲ್ಲಿ ರೊಮ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ವಿಮರ್ಶೆಗಳನ್ನು ಸಹ ಬರುತ್ತಿವೆ.

ಚಂದನ್ ಶೆಟ್ಟಿ ಹಾಗೂ ನಿವೇದಿಯಾ ಅಂಡರ್‍ ವಾಟರ್‍ ನಲ್ಲಿ ವಿಡಿಯೋ ಒಂದನ್ನು ಶೂಟ್ ಮಾಡಿದ್ದಾರೆ. ಇಬ್ಬರೂ ರೊಮ್ಯಾಂಟಿಕ್ ಆಗಿ ಕಿಸ್ ಮಾಡಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅವರ ಅಭಿಮಾನಿಗಳು ವಿಡಿಯೋ ನೊಡಿ ಮೆಚ್ಚುಗೆ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ವಿಡಿಯೋ ಹೊರಬಂದ ಕಡಿಮೆ ಸಮಯದಲ್ಲೇ ಲಕ್ಷಾಂತರ ವೀಕ್ಷಣೆ ಸಹ ಕಂಡಿದೆ. ಈ ವಿಡಿಯೋ ಎಷ್ಟರ ಮಟ್ಟಿಗೆ ಮೆಚ್ಚುಗೆ ಪಡೆದುಕೊಳ್ಳುತ್ತಿದೆಯೋ ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿದೆ. ಗಂಡ ಹೆಂಡತಿ ರೊಮ್ಯಾನ್ಸ್ ಖಾಸಗಿಯಾಗಿರಬೇಕು. ಅದನ್ನು ಈ ರೀತಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಬಾರದು ಎಂದು ನೆಗೆಟೀವ್ ಕಾಮೆಂಟ್ಸ್ ಗಳನ್ನು ಸಹ ಹರಿಬಿಡುತ್ತಿದ್ದಾರೆ.

ಇನ್ನೂ ನಿವೇದಿತಾ ತನ್ನ ಇನ್ಸ್ಟಾ ಖಾತೆಯಲ್ಲಿ 16 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳು, ಚಂದನ್ ಶೆಟ್ಟಿಯವರಿಗೆ ಹತ್ತು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ನಿವೇದಿತಾ ಕಿರುತೆರೆಯ ಜೊತೆಗೆ ಸಿನೆಮಾಗಳಲ್ಲಿ ಸಹ ಬ್ಯುಸಿಯಾಗಿದ್ದಾರೆ. ಜೊತೆಗೆ ಚಂದನ್ ಶೆಟ್ಟಿ ಸಹ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top