ಆ ಸಿನೆಮಾದ ಮೇಲೆ ಇಷ್ಟ ಇಲ್ಲದೇನೆ ನಟಿಸಿದ್ದೇನೆ ಎಂದ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ, ವೈರಲ್ ಆದ ಕಾಮೆಂಟ್ಸ್……!

Follow Us :

ಬಾಲಿವುಡ್ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡ ಸ್ಟಾರ್‍ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಆಕೆಗೆ ಬಾಲಿವುಡ್ ಸಿನಿರಂಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಡಸ್ಕಿ ಸೌಂದರ್ಯದ ಮೂಲಕ ಬಾಲಿವುಡ್ ಸಿನಿರಂಗವನ್ನು ಆಳಿದಂತಹ ಈ ಬ್ಯೂಟಿ ಇದೀಗ ಹಾಲಿವುಡ್ ಸಿನೆಮಾಗಳಲ್ಲಿ ನಟಿಸುತ್ತಾ ಪುಲ್ ಬ್ಯುಸಿಯಾಗಿದ್ದಾರೆ. ಆಕೆ ನಟಿಸುವ ಸಿನೆಮಾಗಳಲ್ಲಿ ಬೋಲ್ಡ್ ನೆಸ್ ತುಂಬಾನೆ ಇರುತ್ತದೆ. ಇದೀಗ ಆಕೆ ತಮ್ಮ ಸಿನೆಮಾಗಳ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದು, ಆ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ಒಂದಲ್ಲ ಒಂದು ವಿಚಾರದ ಕಾರಣದಿಂದಾಗಿ ಸುದ್ದಿಯಾಗುತ್ತಿದ್ದಾರೆ. ಆಕೆ ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಬಾಲಿವುಡ್ ಸಿನಿರಂಗವನ್ನು ವಿಮರ್ಶೆ ಮಾಡುತ್ತಿದ್ದಾರೆ. ಈ ಹಿಂದೆ RRR ಸಿನೆಮಾ ನೋಡಲಿಲ್ಲ ಎಂದು, ತಾನು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ನಿರ್ದೇಶಕರೊಬ್ಬರ ಮೇಲೆ ಆರೋಪಗಳನ್ನು ಮಾಡಿ ಸುದ್ದಿಯಾದರು. ಇದೀಗ ಮತ್ತೊಮ್ಮೆ ಬೋಲ್ಡ್ ಕಾಮೆಂಟ್ ಗಳನ್ನು ಮಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಸಿನಿರಂಗದಲ್ಲಿ ಕೆಲವು ಸೆಲೆಬ್ರೆಟಿಗಳಿಗೆ ಇಷ್ಟವಿಲ್ಲದೇ ಇದ್ದರೂ ಕೆಲವೊಂದು ಸಿನೆಮಾಗಳಲ್ಲಿ ನಟಿಸಬೇಕಾಗಿರುತ್ತದೆ. ದೊಡ್ಡ ಸ್ಟಾರ್‍ ಗಳಿಗೂ ಸಹ ಇಂತಹದು ತಪ್ಪಿದ್ದಲ್ಲ. ನಿರ್ದೇಶಕರ ಭಯದಿಂದಲೋ ಅಥವಾ ಬೇರೆ ಕಾರಣದಿಂದಲೀ ಆ ಸಿನೆಮಾದಲ್ಲಿ ನಟಿಸಬೇಕಾಗುತ್ತದೆ. ಇದೀಗ ಪ್ರಿಯಾಂಕಾ ಚೋಪ್ರಾ ಸಹ ಅಂತಹ ಸನ್ನಿವೇಶವನ್ನು ಎದುರಿಸಿದ್ದಾಗಿ ಬೋಲ್ಡ್ ಕಾಮೆಂಟ್ ಮಾಡಿದ್ದಾರೆ.

ಇನ್ನೂ ಪ್ರಿಯಾಂಕಾ ಚೋಪ್ರಾ ತನಗೆ ಇಷ್ಟವಿಲ್ಲದ ಸಿನೆಮಾದಲ್ಲಿ ನಟಿಸಿದ್ದಾಗಿ ಹೇಳಿದ್ದಾರೆ. ಆದರೆ ಆ ಸಿನೆಮಾ ಯಾವುದು ಎಂಬ ವಿಚಾರವನ್ನು ಮಾತ್ರ ಹೊರಹಾಕಿಲ್ಲ. ಆ ಸಿನೆಮಾದಿಂದ ಆಕೆಗಾದ ಅನುಭವವನ್ನು ಮಾತ್ರ ಹಂಚಿಕೊಂಡಿದ್ದಾರೆ. ಆ ಸಿನೆಮಾದಲ್ಲಿ ನಟಿಸಿದ ಅನುಭವ ತುಂಬಾ ಕೆಟ್ಟದಾಗಿತ್ತು. ಆ ಸಿನೆಮಾ ಮಾಡುತ್ತಿದ್ದಾಗ ನನಗೆ ತುಂಬಾ ಅಸಹ್ಯ ಎನ್ನಿಸಿತ್ತು ಎಂದು ಆಕೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ಸಿನೆಮಾದ ಹೆಸರನ್ನು ಮಾತ್ರ ಆಕೆ ಹೇಳಿಲ್ಲ. ಸೆಟ್ಸ್ ನಲ್ಲಿ ಅನೇಕ ಗಂಟೆಗಳ ಕಾಲ ಕಾಯಬೇಕಿತ್ತು. ಬಳಿಕ ನೋಡಿದ್ರೆ ನನಗೆ ಕೊಟ್ಟ ಡೈಲಾಗ್ ಗಳು ತುಂಬಾ ಕೆಟ್ಟದಾಗಿರುತ್ತಿತ್ತು. ಸೆನ್ಸ್ ಇಲ್ಲದಂತಹ ಡೈಲಾಗ್ಸ್ ಹಂಚಿಕೊಳ್ಳುತ್ತಾರೆ. ನಾನು ಬೊಂಬೆಯಂತೆ ಕೂರುತ್ತಿದ್ದೆ ಆ ಸಿನೆಮಾ ನನಗೆ ಇಷ್ಟವಾಗಿಲ್ಲ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಪ್ರಿಯಾಂಕಾ ಚೋಪ್ರಾ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಸದ್ಯ ಆಕೆ ಹಾಲಿವುಡ್ ನಲ್ಲಿ ಸ್ಥೀರವಾಗಿದ್ದಾರೆ. ಇತ್ತಿಚಿಗಷ್ಟೆ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದರ ಜೊತೆಗೆ ಆಕೆ ಲವ್ ಅಗೈನ್ ಎಂಬ ರೊಮ್ಯಾಂಟಿಕ್ ಸಿನೆಮಾದಲ್ಲೂ ಸಹ ನಟಿಸಿದ್ದರು. ಆಕೆಯ ಕೈಯಲ್ಲಿ ಮತಷ್ಟು ಹಾಲಿವುಡ್ ಸಿನೆಮಾಗಳಿದ್ದು, ಕೆರಿಯರ್‍ ಅನ್ನು ಬ್ಯುಸಿಯಾಗಿಟ್ಟುಕೊಂಡಿದ್ದಾರೆ.