Film News

ಜೂನಿಯರ್ ಎನ್.ಟಿ.ಆರ್ ರವರಿಗೆ ಅಕ್ರಮ ಸಂಬಂಧ ಇದೆ ಎಂದು ಪೋಸ್ಟ್, ಪೋಸ್ಟ್ ಮಾಡಿದವನ್ನು ಪುಟ್ ಬಾಲ್ ಆಡಿಕೊಂಡ ಎನ್.ಟಿ.ಆರ್ ಫ್ಯಾನ್ಸ್….!

ಟಾಲಿವುಡ್ ಸಿನಿರಂಗದ ನಂದಮೂರಿ ಕುಟುಂಬದ ಸ್ಟಾರ್‍ ನಟ ಯಂಗ್ ಟೈಗರ್‍ ಎನ್.ಟಿ.ಆರ್‍ RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಇಮೇಜ್ ದಕ್ಕಿಸಿಕೊಂಡಿದ್ದಾರೆ. RRR ಸಿನೆಮಾದ ಬಳಿಕ ಜೂನಿಯರ್‍ ಎನ್.ಟಿ.ಆರ್‍ ಇಡೀ ವಿಶ್ವದಾದ್ಯಂತ ಕ್ರೇಜ್ ಪಡೆದುಕೊಂಡಿದ್ದಾರೆ. ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಜೂನಿಯರ್‍ ಎನ್.ಟಿ.ಆರ್‍ ರವರ ಬಗ್ಗೆ ಬಾಲಿವುಡ್ ಫಿಲಂ ಕ್ರಿಟಿಕ್ ಎಂದು ಹೇಳಿಕೊಳ್ಳುವ ಒಬ್ಬಾತ ಎನ್.ಟಿ.ಆರ್‍ ರವರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದು, ಆತನನ್ನು ಎನ್.ಟಿ.ಆರ್‍ ಅಭಿಮಾನಿಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಓವರ್‍ಸೀಸ್ ಸೆನ್ಸಾರ್‍ ಬೋರ್ಡ್ ಮೆಂಬರ್‍ ಹಾಗೂ ಸಿನೆಮಾ ಕ್ರಿಟಿಕ್ ಎಂದು ಹೇಳಿಕೊಳ್ಳುವಂತಹ ಉಮೈರ್‍ ಸಂಧು ಎಂಬ ವ್ಯಕ್ತಿ ತಾನು ಪ್ರಚಾರ ಗಿಟ್ಟಿಸಿಕೊಳ್ಳಲು ಸ್ಟಾರ್‍ ನಟ, ನಟಿಯರು ಹಾಗೂ ನಿರ್ದೇಶಕರೂ ಸೇರಿದಂತೆ ಅನೇಕರ ಬಗ್ಗೆ ಅವರ ವೈಯುಕ್ತಿಕ ವಿಚಾರಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುತ್ತಾನೆ. ಆ ಮೂಲಕ ತಾನು ಫೇಮಸ್ ಆಗಲು ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ. ಸೌತ್ ಅಂಡ್ ನಾರ್ತ್ ಸಿನಿರಂಗದ ಅನೇಕ ಸೆಲೆಬ್ರೆಟಿಗಳ ಬಗ್ಗೆ ಸುಳ್ಳು ವದಂತಿಗಳನ್ನು ಟ್ವಿಟರ್‍ ಮೂಲಕ ಹರಡುತ್ತಾನೆ. ಇದೀಗ ಆತ ಜೂನಿಯರ್‍ ಎನ್.ಟಿ.ಆರ್‍ ರವರ ಬಗ್ಗೆ ಸಹ ಸುಳ್ಳು ವದಂತಿಯೊಂದನ್ನು ಹರಿಬಿಟ್ಟಿದ್ದಾನೆ. ಜೂನಿಯರ್‍ ಎನ್.ಟಿ.ಆರ್‍ ರವರಿಗೆ ಬೇರೊಬ್ಬ ಹುಡುಗಿಯೊಂದಿಗೆ ಅಫೈರ್‍ ಇದೆ ಎಂದು ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದಾನೆ.

ಜೂನಿಯರ್‍ ಎನ್.ಟಿ.ಆರ್‍ ಗೆ ಬೇರೊಬ್ಬ ಹುಡುಗಿಯೊಂದಿಗೆ ಅಫೈರ್‍ ಇದೆ. ಇತ್ತೀಚಿಗೆ ಅವರ ಪತ್ನಿ ಪೋನ್ ಪರೀಕ್ಷೆ ಮಾಡಿದಾಗ ಈ ವಿಚಾರ ಹೊರಬಂದಿದೆ. ಜೊತೆಗೆ ಟಾಲಿವುಡ್ ನ ಎಲ್ಲಾ ಹಿರೋಗಳು ಅದೇ ರೀತಿ ಅಕ್ರಮ ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಈ ಟ್ವೀಟ್ ಇದೀಗ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಎಂಟ್ರಿ ಕೊಟ್ಟಿದ್ದಾರೆ. ಟ್ರೋಲ್ಸ್ ಹಾಗೂ ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಕೆಲವರಂತೂ ಅಸಭ್ಯಕರವಾದ ಮಾತುಗಳಿಂದ ಆತನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಜೂನಿಯರ್‍ ಎನ್.ಟಿ.ಆರ್‍ ಏನು ಎಂಬುದು ನಮಗೆ ಗೊತ್ತು, ಆ ಬಗ್ಗೆ ನೀನು ಬಂದು ಹೇಳಬೇಕಿಲ್ಲ. ನೀನು ಅಭಿಮಾನಿಗಳ ಮುಂದೆ ಬಂದರೇ ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಚ್ಚರದಿಂದ ಇರು ಎಂದು ಟ್ರೋಲ್ಸ್ ಮಾಡುತ್ತಿದ್ದಾರೆ.

ಇನ್ನೂ ಜೂನಿಯರ್‍ ಎನ್.ಟಿ.ಆರ್‍ ಗ್ಲೋಬಲ್ ಸ್ಟಾರ್‍ ಫೇಂ ಪಡೆದುಕೊಂಡಿದ್ದಾರೆ. ಸದ್ಯ ಆತ ಕೊರಟಾಲ ಶಿವ ನಿರ್ದೇಶನದಲ್ಲಿ ದೇವರ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಯ ಮೇಲೆ ಅಬ್ಬರಿಸಲಿದೆ. ಈ ಗಾಗಲೇ  ಈ ಸಿನೆಮಾದ ಪೋಸ್ಟರ್‍ ಸಹ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ. ಇದೀಗ ಶೂಟಿಂಗ್ ನಿಂದ ಕೊಂಚ ಬಿಡುವು ಸಿಕ್ಕ ಹಿನ್ನೆಲೆಯಲ್ಲಿ ಎನ್.ಟಿ.ಆರ್‍ ತಮ್ಮ ಕುಟುಂಬದೊಂದಿಗೆ ವೇಕೇಷನ್ ಗೆ ಹಾರಿದ್ದಾರೆ.

Most Popular

To Top