Film News

ವೇದಿಕೆಯಲ್ಲಿ ರಶ್ಮಿಕಾ ಪಕ್ಕದಲ್ಲಿರುವಾಗ ಚಪ್ಪಲಿ ತೆಗೆದು ಎಸೆದ ಆಲಿಯಾ ಭಟ್, ಆ ಕಾರಣದಿಂದಲೇ ಆಲಿಯಾ ಚಪ್ಪಲಿ ಎಸೆದ್ರಾ?

ಕಳೆದ ವರ್ಷ ಡಿಸೆಂಬರ್‍ 1 ರಂದು ತೆರೆಕಂಡ ಅನಿಮಲ್ ಸಿನೆಮಾ ಭಾರಿ ಸಕ್ಸಸ್ ಕಂಡಿದೆ. ಈ ಸಿನೆಮಾದಲ್ಲಿ ಸ್ಟಾರ್‍ ನಟ ರಣಬೀರ್‍ ಕಪೂರ್‍ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದಾರೆ. ಅದರಲ್ಲೂ ನಟಿ ತೃಪ್ತಿ ಡಿಮ್ರಿ ಮಾತ್ರ ಸಂಪೂರ್ಣ ಬೆತ್ತಲಾಗಿ ನಟಿಸಿ ರಾತ್ರೋರಾತ್ರಿ ಸೂಪರ್‍ ಸ್ಟಾರ್‍ ಆದರು. ಈ ಸಿನೆಮಾ ವರ್ಲ್ಡ್ ವೈಡ್ ಬರೊಬ್ಬರಿ 900 ಕೋಟಿ ಕಲೆಕ್ಷನ್ ಮಾಡಿದೆ ಎಂದೂ ಸಹ ಹೇಳಲಾಗಿದೆ. ಈ ಸಿನೆಮಾದ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ಪಕ್ಕದಲ್ಲಿರುವಾಗಲೇ ಆಲಿಯಾ ಚಪ್ಪಲಿ ತೆಗೆದು ಎಸೆದಿದ್ದು ಭಾರಿ ಟ್ರೋಲ್ ಆಗುತ್ತಿದೆ. ಅಷ್ಟಕ್ಕೂ ಆಲಿಯಾ ಚಪ್ಪಲಿ ಎಸೆದಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ,

ಅನಿಮಲ್ ಸಿನೆಮಾದಲ್ಲಿ ಕೆಲವೊಂದು ಅಶ್ಲೀಲವಾದ ದೃಶ್ಯಗಳಿವೆ ಎಂದು ಸಿನೆಮಾ ಟ್ರೈಲರ್‍ ಬಿಡುಗಡೆಯಾದಾಗಿನಿಂದಲೂ ಭಾರಿ ಟ್ರೋಲ್ ಆಗುತ್ತಿತ್ತು. ಈ ನಡುವೆ ಈ ಸಿನೆಮಾ ಭಾರಿ ಸಕ್ಸಸ್ ಕಂಡಿದೆ. ನಟಿ ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ಡಿಮ್ರಿಯ ಬೋಲ್ಡ್ ನೆಸ್ ಮಿತಿಮೀರಿದೆ ಎಂದೇ ಹೇಳಬಹುದು. ಇನ್ನೂ ರಣಬೀರ್‍ ಕಪೂರ್‍ ಪತ್ನಿ ಆಲಿಯಾ ಭಟ್ ಈ ಸಿನೆಮಾದಲ್ಲಿನ ತನ್ನ ಪತಿಯ ಪಾತ್ರವನ್ನು ಮನಸಾರೆ ಹೊಗಳಿದ್ದರು. ಇನ್ನೂ ಈ ಸಿನೆಮಾದ ಸಕ್ಸಸ್ ಪಾರ್ಟಿಯೊಂದನ್ನು ಕೆಲವು ದಿನಗಳ ಹಿಂದೆಯಷ್ಟೆ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಈ ಪಾರ್ಟಿಗೆ ರಶ್ಮಿಕಾ ಮಂದಣ್ಣ ಸಹ ಹೈದರಾಬಾದ್ ನಿಂದ ಮುಂಬೈಗೆ ಬಂದಿದ್ದರು. ಕಾರ್ಯಕ್ರಮದಲ್ಲಿ ರಣಬಿರ್‍ ರಶ್ಮಿಕಾ ರನ್ನು ನೋಡಿ ಪುಲ್ ಖುಷಿಯಾಗಿದ್ದರು. ಜೊತೆಗೆ ರಶ್ಮಿಕಾ ನಟನೆಯ ಶ್ಲಾಘನೆ ವ್ಯಕ್ತವಾಗುತ್ತಿದ್ದಂತೆ ರಣಬೀರ್‍ ಪ್ರೀತಿಯಿಂದ ಆಲಿಯಾ ಮುಂದೆಯೇ ರಶ್ಮಿಕಾಗೆ ಮುತ್ತಿಟ್ಟಿದ್ದಾರೆ. ಇದು ಸಹ ಸಖತ್ ಟ್ರೋಲ್ ಆಗುತ್ತಿತ್ತು.

ಇದೀಗ ಮತ್ತೊಂದು ಘಟನೆಯ ಬಗ್ಗೆ ಸಹ ಟ್ರೋಲ್ ಆಗುತ್ತಿದೆ. ಆಲಿಯಾ ಭಟ್ ಹಾಗೂ ರಶ್ಮಿಕಾ ವೇದಿಕೆಯ ಮೇಲೆ ನಾಟು ನಾಟು ಹಾಡಿಗೆ ನೃತ್ಯ ಮಾಡಿದ್ದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆಲಿಯಾ ಹಾಗೂ ರಶ್ಮಿಕಾ ಇಬ್ಬರೂ ಅಕ್ಕಪಕ್ಕ ದಲ್ಲಿರುವಾಗ ತಮ್ಮ ಹೈಹೀಲ್ಸ್ ಚಪ್ಪಲಿಯನ್ನು ಕೈಯಿಂದ ತೆಗೆದು ಎಸೆದಿದ್ದಾರೆ. ರಶ್ಮಿಕಾ ಹೈಹೀಲ್ಸ್ ನಲ್ಲೇ ಸ್ಟೇಪ್ಸ್ ಹಾಕಿದ್ದಾರೆ. ಆದರೆ ಆಲಿಯಾ ಭಟ್ ಚಪ್ಪಲಿ ಎಸೆದಿದ್ದು ಏಕೆ ಎಂಬ ಅನುಮಾನ ಮೂಡಿದೆ. ಈ ಹಿಂದೆ ಅನೇಕ ಬಾರಿ ರಶ್ಮಿಕಾ ಚಪ್ಪಲಿಯಲ್ಲೇ ನೃತ್ಯ ಮಾಡಿದ್ದರು. ಆದರೆ ಈ ಬಾರಿ ಆಲಿಯಾ ತನ್ನ ಚಪ್ಪಲಿ ಎಸೆದಿರುವುದು ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರಿಂದ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

Most Popular

To Top