ಒಳ್ಳೆಯ ಒಪೆನಿಂಗ್ಸ್ ಪಡೆದುಕೊಂಡ ದರ್ಶನ್ ಕಾಟೇರಾ ಸಿನೆಮಾ, ಅಂಬಾರಿ ಆನೆ ಅರ್ಜುನನಿಗೆ ಕಾಟೇರಾ ಸಿನೆಮಾ ಅರ್ಪಣೆ….!

Follow Us :

ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಕಾಟೇರಾ ಸಿನೆಮಾ ಡಿ.28 ರ ಮಧ್ಯರಾತ್ರಿಯಿಂದಲೇ ಪ್ರದರ್ಶನ ಕಂಡಿದೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದ್ದು, ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರ ನಿರೀಕ್ಷೆಯಂತೆ ಸಿನೆಮಾ ಸಹ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಇನ್ನೂ ಈ ಸಿನೆಮಾದಲ್ಲಿ ದರ್ಶನ್ ಪ್ರಾಣಿ ಪ್ರೀತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಮೈಸೂರಿನ ಮೃಗಾಲಯ ಸೇರಿದಂತೆ ವಿವಿಧ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಸಹ ದತ್ತು ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾಟೇರಾ ಸಿನೆಮಾವನ್ನು ಮೈಸೂರಿನ ಅಂಬಾರಿಯನ್ನು ಹೊರುತ್ತಿದ್ದ ಅರ್ಜುನನಿಗೆ ಅರ್ಪಣೆ ಮಾಡಿದ್ದಾರೆ.

ಕಾಟೇರಾ ಸಿನೆಮಾ ಆರಂಭವಾಗುವುದಕ್ಕೂ ಮುಂಚೆ ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೃತ್ಯ ಮತ್ತು ದೈವ ಜೀವ ಅರ್ಜುನ ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ ಎಂದು ಬರೆಯಲಾಗಿದ್ದು, ಆ ಮೂಲಕ ಕಾಟೇರಾ ಸಿನೆಮಾ ಅರ್ಜುನನಿಗೆ ಅರ್ಪಣೆ ಮಾಡಿ ಗೌರವ ನೀಡಲಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಕಾಟೇರಾ ಸಿನೆಮಾ ತುಂಬಾನೆ ನಿರೀಕ್ಷೆ ಮೂಡಿಸಿತ್ತು. ಸಿನೆಮಾ ಥಿಯೇಟರ್‍, ಮಾಲ್ ಗಳ ಮುಂದೆ ಜನಸಾಗರವೇ ತುಂಬಿತ್ತು. ಸಿನೆಮಾ ಥಿಯೇಟರ್‍ ಗಳ ಮುಂಭಾಗ ದರ್ಶನ್ ಕಟೌಟ್ ಗಳನ್ನು ಹಾಕಿ ಕಟೌಟ್ ಗೆ ಹಾರ ಹಾಕಿ, ಥಿಯೇಟರ್‍  ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಜೊತೆಗೆ ಡಿ ಬಾಸ್ ಡಿಬಾಸ್ ಎಂದು ಜಯಕಾರಗಳನ್ನು ಸಹ ಕೂಗುತ್ತಾ ಕುಣಿದು ಕುಪ್ಪಳಿಸಿದ್ದಾರೆ.

ಇನ್ನೂ ಕಾಟೇರಾ ಸಿನೆಮಾ ಘೋಷಣೆಯಾದಾಗಿನಿಂದ ತುಂಬಾನೆ ನಿರೀಕ್ಷೆ ಮೂಡಿಸಿತ್ತು. ಸಿನೆಮಾದ ಪೋಸ್ಟರ್‍ ಟ್ರೈಲರ್‍ ಮತಷ್ಟು ನಿರೀಕ್ಷೆ ಹುಟ್ಟಿಸಿತ್ತು. ಸಿನೆಮಾ ಬಿಡುಗಡೆಯಾದ ದಿನದಂದು ಸುಮಾರು 1600 ಶೋಗಳ ಪ್ರದರ್ಶನವಾಗಿದೆ. ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿ ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದೆ. ಇನ್ನೂ ಕಾಟೇರಾ ಸಿನೆಮಾ 1974 ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ಭೀಮನಹಳ್ಳಿ ಎಂಬ ಊರಿನಲ್ಲಿ ಕುಲಮೆ ಕೆಲಸ ಮಾಡುವ ಯುವಕನೇ ಕಾಟೇರಾ. ಈ ಊರಿನಲ್ಲಿ ಜಮೀನುದಾರರ ದಬ್ಬಾಳಿಗೆ ಹೆಚ್ಚಾಗಿರುತ್ತದೆ. ರೈತರಿಗೆ ಜಮೀನುದಾರರು ಮಾಡುವ ಅನ್ಯಾಯಕ್ಕೆ ಕಾಟೇರಾ ಏನು ಮಾಡುತ್ತಾನೆ ಎಂಬ ಕಥೆಯೊಂದಿಗೆ ಸಿನೆಮಾ ಸಾಗುತ್ತದೆ.