ಕನ್ನಡದ ನಟಿ ಚೈತ್ರಾ ಆಚಾರ್ ಬಿಕಿನಿ ಅವತಾರಾ, ಬೋಲ್ಡ್ ಕಾಮೆಂಟ್ ಮಾಡಿದ ಶೈನ್ ಶೆಟ್ಟಿ…..!

Follow Us :

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ನಟಿಯರು ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಪ್ರದಾಯಬದ್ದವಾಗಿ ಕಾಣಿಸಿಕೊಳ್ಳುವಂತಹ ನಟಿಯರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕನ್ನಡದ ನಟಿ ಚೈತ್ರಾ ಆಚಾರ್‍ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಸ್ವಿಮ್ಮಿಂಗ್ ಪೂಲ್ ನಲ್ಲಿ ಆಕೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಕನ್ನಡದ ಯಂಗ್ ಬ್ಯೂಟಿ ಚೈತ್ರಾ ಆಚಾರ್‍ 2019 ರಲ್ಲೇ ಮಹಿರಾ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡಿದರು. ಬಳಿಕ ಆಕೆ ಅನೇಕ ಸಿನೆಮಾಗಳ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಜೊತೆಗೆ ಎಲ್ಲರಂತೆ ಆಕೆ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸಾಲು ಸಾಲು ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಆಕೆಯ ಬೋಲ್ಡ್ ಪೊಟೋಗಳನ್ನು ಠೀಕೆ ಮಾಡಿದವರಿಗೆ ಬೋಲ್ಡ್ ಆಗಿಯೇ ಕೌಂಟರ್‍ ಕೊಡುತ್ತಿರುತ್ತಾರೆ. ಈ ಹಾದಿಯಲ್ಲೇ ಚೈತ್ರಾ ಇದೀಗ ಸ್ವಿಮ್ ಸ್ಯೂಟ್ ನಲ್ಲಿ ಬೋಲ್ಡ್ ಅಂಡ್ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ.

ನಟಿ ಚೈತ್ರಾ ಆಚಾರ್‍ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಬೋಲ್ಡ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಸ್ವಿಮ್ ಸ್ಯೂಟ್ ನಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗೆ ಆಕೆ ಇಂಟ್ರಸ್ಟಿಂಗ್ ಕಾಮೆಂಟ್ ಸಹ ಮಾಡಿದ್ದಾರೆ. ನಂಗೆ ಸ್ವಿಮ್ಮಿಂಗ್ ಬರೊಲ್ಲ, ಆದರೇ ಪೋಸ್ ಕೊಡ್ತೀನಿ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೊಟೋಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಇನ್ನೂ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಆಕೆಯ ಬೋಲ್ಡ್ ನೆಸ್ ಗೆ ಫಿದಾ ಆದಂತಹ ಬಿಗ್ ಬಾಸ್ ವಿನ್ನರ್‍ ಶೈನ್ ಶೆಟ್ಟಿ ಸಹ ರಿಯಾಕ್ಟ್ ಆಗಿದ್ದು, ಚೈತ್ರಾ ಆಚಾರ್‍ ಫ್ಲವರ್‍ ಅಲ್ಲ ಫೈಯರ್‍ ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಒಟ್ಟಿನಲ್ಲಿ ಚೈತ್ರಾ ಆಚಾರ್‍ ಸ್ವಿಮ್ ಸ್ಯೂಟ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಇನ್ನೂ ಚೈತ್ರಾ ಆಚಾರ್‍ ಕೈಯಲ್ಲಿ ಅನೇಕ ಸಿನೆಮಾಗಳಿವೆ. ಸ್ಟ್ರಾಬೆರಿ, ಬ್ಲಿಂಕ್, ಸಪ್ತಸಾಗರದಾಚೆ ಎಲ್ಲೋ, ಟೋಬಿ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಚೈತ್ರಾ ಆಚಾರ್‍ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಗಳ ಮೂಲಕ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿರುತ್ತಾರೆ.