Film News

ಮತ್ತೊಂದು ಇಂಟ್ರಸ್ಟಿಂಗ್ ಪೋಸ್ಟ್ ಮಾಡಿದ ಸಮಂತಾ, ಗುಡ್ ನ್ಯೂಸ್ ಕೊಡಲಿದ್ದಾರೆಯೇ?

ಸ್ಟಾರ್‍ ನಟಿ ಸಮಂತಾ ಕಡಿಮೆ ಸಮಯದಲ್ಲೇ ಭಾರಿ ಫೇಂ ಪಡೆದುಕೊಂಡ ನಟಿಯಾಗಿದ್ದಾರೆ. ಸದ್ಯ ಸಮಂತಾ ಬಹುಬೇಡಿಕೆಯಿರುವ ನಟಿಯಾಗಿದ್ದು, ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದಾರೆ. ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಸಮಂತಾ ಸಿಂಗಲ್ ಆಗಿಯೇ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿಗೆ ಆಕೆ ಕೆಲವೊಂದು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದು, ಈ ಕಾರಣದಿಂದ ಸಮಂತಾ ಶೀಘ್ರದಲ್ಲೆ ಗುಡ್ ನ್ಯೂಸ್ ಕೊಡಲಿದ್ದಾರೆಯೆ, ಆಕೆ ಮತ್ತೆ ಪ್ರೀತಿಗೆ ಬಿದ್ದಿದ್ದಾರೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ಸಮಂತಾ ಹಾಗೂ ನಾಗಚೈತನ್ಯ ಸುಮಾರು ವರ್ಷಗಳ ಕಾಲ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಕೆಲವೇ ವರ್ಷಗಳಲ್ಲಿ ಅವರಿಬ್ಬರ ನಡುವೆ ವಿಬೇದಗಳು ಉಂಟಾಗಿ ವಿಚ್ಚೇದನ ಪಡೆದುಕೊಂಡರು. ಇನ್ನೂ ವಿಚ್ಚೇದನದ ಬಳಿಕ ನಾಗಚೈತನ್ಯ ಹಾಗೂ ಸಮಂತಾ ಅವರವರ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳಿಂದ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡುತ್ತಲೇ ಇದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಸಹ ಸುದ್ದಿ ಮಾತ್ರ ಹರಿದಾಡುತ್ತಲೇ ಇದೆ. ಇನ್ನೂ ಈ ಬಗ್ಗೆ ಅನೇಕ ಭಾರಿ ಶೋಭಿತಾ ಹಾಗೂ ಚೈತನ್ಯ ಸಹ ಎಲ್ಲಾ ರೂಮರ್‍ ಎಂದು ಹೇಳಿದ್ದಾರೆ. ಆದರೂ ಸಹ ಈ ರೂಮರ್‍ ಮಾತ್ರ ಹರಿದಾಡುವುದು ನಿಂತಿಲ್ಲ.

ಇದೀಗ ಸಮಂತಾ ಸಹ ಎರಡನೇ ಮದುವೆಗೆ ಸಿದ್ದವಾಗುತ್ತಿದ್ದಾರೆ ಎಂಬ ಮಾತುಗಳು ಜೋರಾಗಿಯೇ ಹರಿದಾಡುತ್ತಿವೆ. ಆದರೆ ಸಮಂತಾ ಈ ಬಗ್ಗೆ ಅದೆಲ್ಲವೂ ಸುಳ್ಳು ಎಂದು ಅನೇಕ ಬಾರಿ ಹೇಳಿದ್ದಾರೆ. ಈ ರೂಮರ್‍ ಗೆ ಮತಷ್ಟು ಬಲ ಕೊಡುವಂತೆ ಸ್ಯಾಮ್ ಒಂದು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಈ ಪೋಸ್ಟ್ ಕಾರಣದಿಂದ ಸಮಂತಾ ಪ್ರೀತಿಗೆ ಬಿದ್ದಿದ್ದಾರೆಯೇ ಎಂಬ ಅನುಮಾನಗಳು ಹುಟ್ಟುವಂತೆ ಮಾಡಿದ್ದಾರೆ. ಸಾವಿನಿಂದ ನಮ್ಮನ್ನು ಏನು ಕಾಪಾಡುವುದಿಲ್ಲ. ಕನಿಷ್ಟ ಪ್ರೀತಿಯಿಂದ ಜೀವನ ಕಾಪಾಡಿಕೊಳ್ಳೋನಾ, ಪ್ರೀತಿಯಿಂದಲೇ ಜೀವನ ಚೆನ್ನಾಗಿರುತ್ತದೆ ಎಂಬ ಅರ್ಥದಲ್ಲಿ ಸಮಂತಾ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕಾರಣದಿಂದ ಸಮಂತಾ ಮತ್ತೇ ಪ್ರೀತಿಗೆ ಬಿದ್ದಿದ್ದಾರೆಯೇ ಎಂಬ ಅನುಮಾನಗಳನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಸಮಂತಾ ಶೀಘ್ರದಲ್ಲಿ ಗುಡ್ ನ್ಯೂಸ್ ಕೊಡುತ್ತಾರೆಯೇ ಎಂಬ ಕಾಮೆಂಟ್ ಗಳು ಹರಿದು ಬರುತ್ತಿವೆ. ಇನ್ನೂ ವಿಚ್ಚೇದನದ ಬಳಿಕ ಸಮಂತಾ ಏನೇ ಪೋಸ್ಟ್ ಮಾಡಿದರೂ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತದೆ. ಸದ್ಯ ಸಮಂತಾ ಖುಷಿ, ಸಿಟಾಡೆಲ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಲವ್ ಸ್ಟೋರಿ ಎಂಬ ಸಿನೆಮಾದಲ್ಲೂ ನಟಿಸಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

Most Popular

To Top