ಅದ್ದೂರಿಯಾಗಿ ನಡೆದ ಹರಿಪ್ರಿಯಾ-ವಸಿಷ್ಟ ಸಿಂಹ ಮದುವೆ, ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳ ಶುಭಾಷಯಗಳ ಸುರಿಮಳೆ….!

ಸುಮಾರು ದಿನಗಳಿಂದ ನಿಗೂಡವಾಗಿ ಪ್ರೀತಿಸುತ್ತಿದ್ದ ಸ್ಯಾಂಡಲ್ ವುಡ್ ನ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ರವರು ಕೆಲವು ದಿನಗಳ ಹಿಂದೆಯಷ್ಟೆ ತಮ್ಮ ಪ್ರೀತಿಯ ಬಗ್ಗೆ ಹೇಳಿದ್ದರು. ಇದೀಗ ಅವರು ಮದುವೆ ಅದ್ದೂರಿಯಾಗಿ ನೆರವೇರಿದೆ.…

ಸುಮಾರು ದಿನಗಳಿಂದ ನಿಗೂಡವಾಗಿ ಪ್ರೀತಿಸುತ್ತಿದ್ದ ಸ್ಯಾಂಡಲ್ ವುಡ್ ನ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ರವರು ಕೆಲವು ದಿನಗಳ ಹಿಂದೆಯಷ್ಟೆ ತಮ್ಮ ಪ್ರೀತಿಯ ಬಗ್ಗೆ ಹೇಳಿದ್ದರು. ಇದೀಗ ಅವರು ಮದುವೆ ಅದ್ದೂರಿಯಾಗಿ ನೆರವೇರಿದೆ. ಸಿನೆಮಾ ರಂಗದ ಸೆಲೆಬ್ರೆಟಿಗಳು, ಆತ್ಮೀಯರು, ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿದಿದ್ದಾರೆ. ಇನ್ನೂ ನೂತನ ದಂಪತಿಗೆ ಎಲ್ಲಾ ಕಡೆಯಿಂದ ಶುಭಾಷಯಗಳ ಸುರಿಮಳೆಯಾಗುತ್ತಿದೆ.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಮದುವೆ ಅದ್ದೂರಿಯಾಗಿ ನೆರವೇರಿದೆ. ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲೇ ಮದುವೆಯಾಗಬೇಕು ಎಂಬುದು ವಸಿಷ್ಟರವರ ಆಸೆಯಾಗಿದ್ದು, ಅದರಂತೆ ಅದೇ ಜಾಗದಲ್ಲಿ ಮದುವೆ ನಡೆದಿದೆ. ಇನ್ನೂ ಸುಮಾರು ತಿಂಗಳಿಂದ ಹರಿಪ್ರಿಯಾ ಹಾಗೂ ವಸಿಷ್ಟ ಪ್ರೀತಿಸುತ್ತಿದ್ದರು. ಈ ವಿಚಾರ ಮನೆಯವರಿಗೆ ತಿಳಿಸಿ ಕಳೆದ ವರ್ಷ ನಿಶ್ಚಿತಾರ್ಥ ಸಹ ನೆರವೇರಿತ್ತು. ಇನ್ನೂ ನಿನ್ನೆ (ಜ.25) ರಂದು ಅರಿಶಿಣ ಶಾಸ್ತ್ರ ಸಹ ಅದ್ದೂರಿಯಾಗಿ ನಡೆದಿದೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಪ್ರಿಯಾ ಹಂಚಿಕೊಮಡಿದ್ದರು. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಇನ್ನೂ ಜ.26 ಗುರುವಾರದಂದು ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿದೆ. ಈ ಮದುವೆಗೆ ಸಿನಿರಂಗದ ಅನೇಕ ಗಣ್ಯರು ಸಾಕ್ಷೀಭೂತರಾಗಿದ್ದಾರೆ. ಇನ್ನೂ ವಸಿಷ್ಟ ಸಿಂಗ ಹಾಗೂ ಹರಿಪ್ರಿಯಾ ಮದುವೆಗೆ ಬಂದ ಡಾಲಿ ಧನಂಜಯ್ ನವ ದಂಪತಿಗೆ ಶುಭ ಹಾರೈಸಿದ್ದಾರೆ. ಈಗ ತಾನೆ ಗೆಳಯ ತಾಳಿ ಕಟ್ಟಿದ, ಅವನಿಗೆ ವಿಶ್ ಮಾಡಿ ತುಂಬಾ ಖುಷಿಯಾಗಿದೆ. ಅವರ ಲವ್ ಬಗ್ಗೆ ನನಗೆ ಏನು ಗೊತ್ತಿರಲಿಲ್ಲ. ಶೂಟಿಂಗ್ ನಡುವೆ ಆ ವಿಚಾರದ ಬಗ್ಗೆ ತಲೆ ಓಡುತ್ತಿರಲಿಲ್ಲ ಎಂದು ಡಾಲಿ ತಿಳಿಸಿದ್ದರೇ, ನಟಿ ಅಮೃತಾ ಅಯ್ಯಂಗಾರ್‍ ಸಹ ಶುಭ ಕೋರಿದ್ದಾರೆ. ಹರಿಪ್ರಿಯಾ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ. ಅವರ ಸಂಸಾರ ಸುಖಕರವಾಗಿರಲಿ ಎಂದು ವಿಶ್ ಮಾಡುತ್ತಿದ್ದೇನೆ, ಚಿತ್ರರಂಗದಲ್ಲಿನ ಜೋಡಿಗಳು ಈ ಮಾದರಿಯಲ್ಲಿ ಮದುವೆಯಾದರೆ ತುಂಬಾನೆ ಖುಷಿಯಾಗುತ್ತದೆ ಎಂದಿದ್ದಾರೆ.

ಇನ್ನೂ ಹರಿಪ್ರಿಯಾ-ವಸಿಷ್ಟ ಮದುವೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಸೆಲೆಬ್ರೆಟಿಗಳೂ ಶುಭಾಷಗಳನ್ನು ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಇನ್ನೂ ಇಬ್ಬರಿಗೂ ಸಿನಿರಂಗದಲ್ಲಿ ಬಹುಬೇಡಿಕೆಯಿದ್ದು, ಅನೇಕ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.