Film News

ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿಕಿನಿ ತೊಟ್ಟು ಹಾಟ್ ಪೋಸ್ ಕೊಟ್ಟ ಫೈರ್ ಬ್ರಾಂಡ್ ಕಸ್ತೂರಿ, ವೈರಲ್ ಆದ ಪೊಟೋಸ್….!

ಸಿನೆಮಾ ಆಗಲಿ ಅಥವಾ ಸೀರಿಯಲ್ ಗಳಲ್ಲಾಗಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಳ್ಳುವ ಅನೇಕ ನಟಿಯರು ಸೋಷಿಯಲ್ ಮಿಡಿಯಾದಲ್ಲಂತೂ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ನಟಿ ಕಸ್ತೂರಿ ಸಹ ಸೇರಿಕೊಳ್ಳುತ್ತಾರೆ. ಗೃಹಲಕ್ಷ್ಮಿ ಎಂಬ ತೆಲುಗು ಸೀರಿಯಲ್ ಮೂಲಕ ದೊಡ್ಡ ಅಭಿಮಾನಿ ಬಳಗ ಸಾಧಿಸಿಕೊಂಡ ಕಸ್ತೂರಿ ಇಂಡಸ್ಟ್ರಿಯಲ್ಲಿ ಫೈರ್‍ ಬ್ರಾಂಡ್ ಎಂದು ಹೇಳಲಾಗುತ್ತದೆ. ಸೋಷಿಯಲ್ ಮಿಡಿಯಾದಲ್ಲಂತೂ ಕಸ್ತೂರಿ ಸಖತ್ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಬಿಕಿನಿಯಲ್ಲಿ ಹಾಟ್ ಪೋಸ್ ಕೊಟ್ಟಿದ್ದು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಯಾಗಿದೆ.

ಗೃಹಲಕ್ಷ್ಮೀ ಸೀರಿಯಲ್ ನಲ್ಲಿ ಸಂಪ್ರದಾಯಬದ್ದವಾಗಿ ಅಮಾಯಕಿಯಂತೆ ಕಾಣಿಸಿಕೊಳ್ಳುವ ಈಕೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನೆವರ್‍ ಬಿಫೋರ್‍ ಎಂಬಂತೆ ಹಾಟ್ ಪೋಸ್ ಕೊಡುತ್ತಾರೆ. ಇನ್ನೂ ಆಕೆಯನ್ನು ಡೇರಿಂಗ್ ಅಂಡ್ ಡ್ಯಾಷಿಂಗ್ ನಟಿಯೆಂದೂ ಸಹ ಕರೆಯುತ್ತಾರೆ. ಯಾವುದೇ ವಿಚಾರವಿರಲಿ ಕಸ್ತೂರಿ ನಿರ್ಭಯವಾಗಿ ನೇರವಾಗಿ ಕೌಂಟರ್‍ ನೀಡುತ್ತಿರುತ್ತಾರೆ. ಜೊತೆಗೆ ಆಕೆ ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಬಿಕಿನಿ ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ಆಕೆ ಹಂಚಿಕೊಂಡಿದ್ದಾರೆ.

ಕಸ್ತೂರಿ ಹಂಚಿಕೊಂಡ ವಿಡಿಯೋದಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆ ಈ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ವೈರಲ್ ಆಗುತ್ತಿದೆ. ಇನ್ನೂ ಆಕೆಯ ಈ ಲುಕ್ಸ್ ಕಂಡ ಅನೇಕರು ನೆಟ್ಟಿಗರೂ ಸಹ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಅನೇಕ ನೆಟ್ಟಿಗರು ಈ ಬಗ್ಗೆ ಅಸಹನ ವ್ಯಕ್ತಪಡಿಸಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ನಿಮ್ಮ ಮೇಲೆ ನಮಗೆ ಒಳ್ಳೆಯ ಅಭಿಪ್ರಾಯವಿಟ್ಟು, ಆದರೆ ನೀವು ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ನಿಮ್ಮ ಮೇಲಿನ ಗೌರವನ್ನು ಕಳೆದುಕೊಳ್ಳಬೇಡಿ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಕಸ್ತೂರಿ ಸಹ ಈ ಕಾಮೆಂಟ್ ಗಳಿಗೆ ಕೌಂಟರ್‍ ಕೊಟ್ಟಿದ್ದಾರೆ. ನಿಮ್ಮ ಆಲೋಚನೆಗೆ ಧನ್ಯವಾದಗಳು, ಸ್ವಿಮ್ಮಿಂಗ್ ಎಂಬುದು ವ್ಯಾಯಾಮದ ಒಂದು ಭಾಗವಾಗಿದೆ. ನೀವು ಸಹ ಟ್ರೈ ಮಾಡಿ ಎಂದಿದ್ದಾರೆ. ಇನ್ನೂ ಆಕೆಯ ಕೌಂಟರ್‍ ಗೆ ಕೆಲವರು ಸಪೋರ್ಟ್ ಮಾಡುತ್ತಿದ್ದರೇ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಟಿ ಸೌತ್ ನ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಆಕೆ ಟಾಪ್ ನಟಿಯಾಗಿದ್ದರು. ಆಕೆ ಹೆಚ್ಚು ತಮಿಳು ಸಿನೆಮಾಗಳಲ್ಲೇ ನಟಿಸಿದ್ದರು. ಸಿನೆಮಾಗಳಿಂದ ದೂರವಾದ ಬಳಿಕ ಆಕೆ ಸೀರಿಯಲ್ ಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

Most Popular

To Top