Film News

ರೀಲ್ಸ್ ಮಾಡುತ್ತಾ ಲಿಪ್ ಲಾಕ್ ಮಾಡಿಕೊಂಡ ನಿವೇದಿತಾ ಚಂದನ್, ಸಖತ್ ಟ್ರೋಲ್ ಆದ ಜೋಡಿ…..!

ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಕಪಲ್ ಆಗಿ ತುಂಬಾನೆ ಗಮನ ಸೆಳೆದ ಜೋಡಿಯಲ್ಲಿ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಸಹ ಒಂದಾಗಿದೆ. ಇವರಿಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿರುತ್ತಾರೆ. ಸದಾ ಇನ್ಸ್ಟಾಗ್ರಾಂ ನಲ್ಲಿ ಆಕೆಯ ಅಪ್ಡೇಟ್ ಪ್ರತಿನಿತ್ಯ  ಇದ್ದೇ ಇರುತ್ತದೆ. ನಿವೇದಿತಾ ಹಾಗೂ ಚಂದನ್ ಬಿಗ್ ಬಾಸ್ ಮೂಲಕ ಎಲ್ಲರಿಗೂ ಪರಿಚಿತರಾದರು. ಬಿಗ್ ಬಾಸ್ ನಲ್ಲಿ ಜೋಡಿಯಾಗಿದ್ದ ಇವರು ನಿಜ ಜೀವನದಲ್ಲೂ ಸಹ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಇದೀಗ ಅವರ ಲೇಟೆಸ್ಟ್ ವಿಡಿಯೋ ಒಂದರ ಕಾರಣದಿಂದ ಸಖತ್ ಟ್ರೋಲ್ ಆಗುತ್ತಿದ್ದಾರೆ.

ಬಿಗ್ ಬಾಸ್ ಬ್ಯೂಟಿ ನಿವೇದಿತಾ ಗೌಡ ತಮ್ಮ ಮುದ್ದು, ಮುದ್ದಾದ ಮಾತುಗಳಿಂದ ಅಭಿಮಾನಿಗಳ ಮನಸ್ಸು ಗೆಲ್ಲುತ್ತಾರೆ. ನಟಿ ನಿವೇದಿತಾ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಬಿಗ್ ಬಾಸ್ ಮೂಲಕ ಪರಿಚಯವಾಗಿ ಪ್ರೀತಿಸಿ ಮದುವೆಯಾದರು. ಮದುವೆಯಾದಾಗಿನಿಂದಲೂ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಪೊಟೋಶೂಟ್ಸ್, ರೀಲ್ಸ್, ವಿಡಿಯೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇನ್ನೂ ಈ ಪೋಸ್ಟ್ ಗಳ ಕಾರಣದಿಂದಾಗಿ ಈ ಜೋಡಿ ಟ್ರೋಲ್ ಗಳಿಗೆ ಸಹ ತುತ್ತಾಗುತ್ತಿರುತ್ತಾರೆ. ಆದರೆ ಆ ಟ್ರೋಲ್ಸ್ ಗಳಿಗೆ ಈ ಜೋಡಿ ಕಿವಿಗೊಡುವುದಿಲ್ಲ. ಈ ಹಾದಿಯಲ್ಲೇ ಇದೀಗ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಲಿಪ್ ಲಾಕ್ ಮಾಡಿಕೊಂಡಿದ್ದು, ವಿಡಿಯೋ ಸಖತ್ ಟ್ರೋಲ್ ಆಗುತ್ತಿದೆ.

ಇನ್ನೂ ನಿವೇದಿತಾ ಗೌಡ ತನ್ನ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ತನ್ನ ಪತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಹಾಡೊಂದಕ್ಕೆ ಮೈ ಬಳುಕಿಸಿ ಡ್ಯಾನ್ಸ್ ಮಾಡಿದ್ದಾರೆ. ಜೊತೆಗೆ ಚಂದನ್ ಶೆಟ್ಟಿ ಲಿಪ್ ಕಿಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಈ ವಿಡಿಯೋ ನೋಡಿದ ಅನೇಕರು ಟ್ರೋಲ್ ಸಹ ಮಾಡುತ್ತಿದ್ದಾರೆ. ಕೆಲವರು ಚಂದನ್ ಶೆಟ್ಟಿ ಪಾಪ ಗುರು ಎಂದರೇ ಮತ್ತೊಬ್ಬರು She is so romantic ಎಂದಿದ್ದಾರೆ. ಮತ್ತೆ ಕೆಲವರು ನೀವಿಬ್ಬರೂ ಸಮಾಜಕ್ಕೆ ಏನು ಹೇಳೊಕ್ಕೆ ಹೊರಟಿದ್ದೀರಾ ಎಂದು ಕೊಂಚ ಸ್ಪಷ್ಟನೆ ಕೊಡಿ ಎಂದಿದ್ದಾರೆ. ಮತ್ತೋರ್ವ ಹೇ ಚೈಲ್ಡ್ ಮೊದಲು ಒಳ್ಳೆಯ ಚಡ್ಡಿ ಬಟ್ಟೆ ಹಾಕೋಳ್ಳಿ, ಅಕ್ಕೋ ದುಡ್ಡು ಇಲ್ಲ ಅಂದ್ರೆ ನಿನ್ನ ನಂಬರ್‍ ಕಳಿಸು ನಾನೇ ಕೊಡ್ತೀನಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಫಾಲೋವರ್ಸ್ ಹೊಂದಿರುವ ನಿವೇದಿತಾ ಪೋಸ್ಟ್ ಗಳು ತುಂಬಾನೆ ವೈರಲ್ ಆಗುತ್ತಿರುತ್ತವೆ. ಜೊತೆಗೆ ಅಭಿಮಾನಿಗಳಿಂದ ಮೆಚ್ಚುಗೆ ಸಹ ವ್ಯಕ್ತವಾಗುತ್ತಿರುತ್ತದೆ. ಅದೇ ರೀತಿ ಟ್ರೋಲ್ ಸಹ ಆಗುತ್ತಿರುತ್ತಾರೆ. ಆದರೆ ಆಕೆ ವಿಡಿಯೋ ಹಾಗೂ ಪೊಟೋಸ್ ಹಂಚಿಕೊಳ್ಳುವುದನ್ನು ಬಿಡುತ್ತಿಲ್ಲ.

Most Popular

To Top