ಮತ್ತೊಮ್ಮೆ ಐಶ್ವರ್ಯ-ಅಭಿಷೇಕ್ ವಿಚ್ಚೇದನ ರೂಮರ್, ಆ ಪೊಟೋ ಕಾರಣದಿಂದ ವಿಚ್ಚೇದನದ ರೂಮರ್ ವೈರಲ್……!

ಸೋಷಿಯಲ್ ಮಿಡಿಯಾ ಬಳಕೆ ಹೆಚ್ಚಾದಂತೆ ಕೆಲವೊಂದು ರೂಮರ್‍ ಗಳು ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಅದರಲ್ಲೂ ಸಿನೆಮಾ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಸುದ್ದಿಯೇನಾದರೂ ಬಂದರೇ ಸಾಕು ಬಿರುಗಾಳಿಯಂತೆ ಹಬ್ಬಿಬಿಡುತ್ತದೆ. ಈ ಸಾಲಿಗೆ ಬಾಲಿವುಡ್ ಸ್ಟಾರ್‍…

ಸೋಷಿಯಲ್ ಮಿಡಿಯಾ ಬಳಕೆ ಹೆಚ್ಚಾದಂತೆ ಕೆಲವೊಂದು ರೂಮರ್‍ ಗಳು ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಅದರಲ್ಲೂ ಸಿನೆಮಾ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಸುದ್ದಿಯೇನಾದರೂ ಬಂದರೇ ಸಾಕು ಬಿರುಗಾಳಿಯಂತೆ ಹಬ್ಬಿಬಿಡುತ್ತದೆ. ಈ ಸಾಲಿಗೆ ಬಾಲಿವುಡ್ ಸ್ಟಾರ್‍ ಜೋಡಿ ಐಶ್ವರ್ಯ ಹಾಗೂ ಅಭಿಷೇಕ್ ಸಹ ಸೇರುತ್ತಾರೆ. ಬಾಲಿವುಡ್ ಸ್ಟಾರ್‍ ಕಪುಲ್ ಅಂಡ್ ಮೋಸ್ಟ್ ಬ್ಯೂಟಿಪುಲ್ ಕಪುಲ್ ಎಂದೇ ಕರೆಯಲಾಗುವ ಅಭಿಷೇಖ್ ಬಚ್ಚನ್ ಹಾಗೂ ಐಶ್ವರ್ಯ ರೈ ರವರು ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಮತ್ತೊಮ್ಮೆ ಹರಿದಾಡುತ್ತಿದೆ.

ಬಾಲಿವುಡ್ ನ ಬೆಸ್ಟ್ ಜೋಡಿ ಎಂದೇ ಕರೆಯಲಾಗುವ ಐಶ್ವರ್ಯ ಹಾಗೂ ಅಭಿಷೇಕ್ ಸುಮಾರು 20 ವರ್ಷಗಳಿಂದ ಸಂತೋಷವಾಗಿ ವೈವಾಹಿಕ ಜೀವನ ಸಾಗಿಸುತ್ತಿದ್ದಾರೆ. ಈ ಜೋಡಿಗೆ ಆರಾಧ್ಯ ಎಂಬ ಮುದ್ದಾದ ಮಗಳೂ ಸಹ ಇದ್ದಾಳೆ. ಸುಮಾರು ದಿನಗಳಿಂದ ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಬಳಿಕ ಈ ಸುದ್ದಿ ತಣ್ಣಗಾಗಿತ್ತು. ಇದೀಗ ಮತ್ತೊಮ್ಮೆ ಈ ಜೋಡಿಯ ವಿಚ್ಚೇದನ ರೂಮರ್‍ ವೈರಲ್ ಆಗುತ್ತಿದೆ. ಸದ್ಯ ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸುದ್ದಿ ಹರಿದಾಡಲು ಒಂದು ಪೊಟೋ ಕಾರಣ ಎನ್ನಲಾಗುತ್ತಿದೆ.

ಸುಮಾರು ದಿನಗಳಿಂದ ಐಶ್ವರ್ಯ ಹಾಗೂ ಅಭಿಷೇಕ್ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಆದರೆ ಈ ರೂಮರ್‍ ಗಳಿಗೆ ಅವರು ಸ್ಪಂಧಿಸಲಿಲ್ಲ. ಇದೀಗ ಮತ್ತೊಮ್ಮೆ ರೂಮರ್‍ ವೈರಲ್ ಆಗಿದೆ. ಈ ರೂಮರ್‍ ಹಾಟ್ ಟಾಪಿಕ್ ಆಗಿದೆ. ಬಾಲಿವುಡ್ ಕ್ರಿಟಿಕ್ ಉಮೈರ್‍ ಸಂಧೂ ಸಹ ಐಶ್ವರ್ಯ ರೈ ತನ್ನ ಪತಿ ಅಭಿಷೇಕ್ ಬಚ್ಚನ್ ಜೊತೆ ಸಂತೋಷವಾಗಿಲ್ಲ ಎಂದು ಟ್ವೀಟ್ ಮಾಡಿದ್ದರು. ಇದೀಗ ಕಾರ್ಯಕ್ರಮವೊಂದರಲ್ಲಿ ಅಭಿಷೇಕ್ ಬಚ್ಚನ್ ಭಾಗಿಯಾಗಿದ್ದು, ಈ ವೇಳೆ ತನ್ನ ಕೈಗಿದ್ದ ವೆಡ್ಡಿಂಗ್ ರಿಂಗ್ ಮಿಸ್ ಆಗಿತ್ತು. ಈ ಕಾರಣದಿಂದ ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ರೂಮರ್‍ ಹುಟ್ಟಿಕೊಂಡಿದೆ. ಜೊತೆಗೆ ಅಭಿಷೇಕ್ ಐಸ್ವರ್ಯ ರೈ ರನ್ನು ಇನ್ಸ್ಟಾದಲ್ಲಿ ಅನ್ ಫಾಲೋ ಮಾಡಿದ್ದಾರೆ ಎಂಬ ರೂಮರ್‍ ಗಳೂ ಸಹ ಹುಟ್ಟಿಕೊಂಡಿದೆ.

ಸದ್ಯ ಅಭಿಷೇಕ್ ರವರ ಆ ಪೊಟೋ ರೂಮರ್‍ ಹುಟ್ಟಿಕೊಳ್ಳಲು ಕಾರಣವಾಗಿದ್ದು, ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲ ಸುಳ್ಳು ಸುದ್ದಿಗಳು, ಫೇಕ್ ರೂಮರ್‍ ಗಳು ಎಂದು ಅಭಿಮಾನಿಗಳು ತಳ್ಳಿಹಾಕುತ್ತಿದ್ದಾರೆ. ಆದರೆ ಕೆಲವರು ಮಾತ್ರ ಈ ಸುದ್ದಿ ನಿಜ ಇರಬಹುದೆಂದು ಭಾವಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟತೆ ಸಿಗಬೇಕಾದರೇ ಐಶ್ವರ್ಯ ಅಥವಾ ಅಭಿಷೇಕ್ ಕ್ಲಾರಿಟಿ ನೀಡಬೇಕಿದೆ.