News

70 ವರ್ಷದ ಮುದುಕಿಯ ಶವದೊಂದಿಗೆ ರಸ್ತೆಯಲ್ಲೇ ಲೈಂಗಿಕ ಕ್ರಿಯೆ ನಡೆಸಿದ ಪಾಪಿ ಪುತ್ರ, ಪಾಪಿ ವಿರುದ್ದ ಕೇಸ್……!

ಕಾಮುಕರಿಗೆ ಕಣ್ಣು, ರಕ್ತ ಸಂಬಂಧ ಸೇರಿದಂತೆ ಯಾವುದೇ ಸಂಬಂಧಗಳ ಬಗ್ಗೆ ಗೌರವ ಇರುವುದಿಲ್ಲ ಎಂಬುದನ್ನು ಒತ್ತಿ ಹೇಳುವಂತಹ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಇಂದೋರ್‍ ನಲ್ಲಿ ರಸ್ತೆಯಲ್ಲೆ ವ್ಯಕ್ತಿಯೊಬ್ಬ ತನ್ನ 70 ವರ್ಷದ ತಾಯಿಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಸಿಕ್ಕಿಬಿದ್ದಿದ್ದು, ಆತನ ವಿರುದ್ದ ಐಪಿಸಿ ಸೆಕ್ಷನ್ 297 ರಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

22 ವರ್ಷ ವಯಸ್ಸಿನ ವ್ಯಕ್ತಿ ಆರೋಪಿಯಾಗಿದ್ದು, ಆತ ಕಳೆದ ಡಿ.1 ರ ಮಧ್ಯರಾತ್ರಿ ಬಡಿ ಗ್ವಾಲ್ವೋಲಿ ಎಂಬ ಪ್ರದೇಶದ ರಸ್ತೆಯಲ್ಲಿ ತನ್ನ ತಾಯಿಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಪಲಾಸಿಯಾ ಪೊಲೀಸ್ ಅಧಿಕಾರಿಗಳು ಪಿಟಿಐ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಆರೋಪಿಯನ್ನು ಇನ್ನೂ ಬಂಧನ ಮಾಡಿಲ್ಲ ಎನ್ನಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ಆರೋಪಿಯನ್ನು ಭೇಟಿಯಾಗಿದ್ದಾರೆ. ಆತ ಮಾನಸಿಕ ಅಸ್ವಸ್ಥನಾಗಿರುವುದಾಗಿ ಮಾದ್ಯಮಗಳಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೃದ್ದೆಯನ್ನು ಸರ್ಕಾರಿ ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು. ಆಕೆಯ ಮೃತದೇಹವನ್ನು ಆರೋಪಿ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದ್ದನಂತೆ. ಈ ವೇಳೆ ರಸ್ತೆಯಲ್ಲಿಯೇ ಆರೋಪಿ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಎನ್ನಲಾಗಿದೆ. ಇನ್ನೂ ಈ ದೃಶ್ಯವನ್ನು ಹತ್ತಿರದ ಹಾಸ್ಟೆಲ್ ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ವಿಡಿಯೋ ಸೆರೆಹಿಡಿದು ಪೊಲೀಸರಿಗೆ ತಿಳಿಸಿದ್ದರಂತೆ. ಬಳಿಕ ವಿಚಾರ ಹೊರಬಂದಿದೆ ಎನ್ನಲಾಗಿದೆ.

Most Popular

To Top