Film News

ಸೆಕ್ಸಿಯಾಗಿ ನೃತ್ಯ ಮಾಡಿದ ಕನ್ನಡದ ನಟಿ ಶ್ವೇತಾ ಶ್ರೀವಾಸ್ತವ್, ಸಖತ್ ಟ್ರೋಲ್ ಆದ ವಿಡಿಯೋ….!

ಚಂದನವನದಲ್ಲಿ ಅನೇಕ ನಟಿಯರು ಸಿನೆಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದರೂ ಸಹ ಅಭಿಮಾನಿಗಳಲ್ಲಿ ಮಾತ್ರ ಇಂದಿಗೂ ಕ್ರೇಜ್ ಹೊಂದಿರುತ್ತಾರೆ. ಸಿನೆಮಾಗಳಿಂದ ದೂರವಾದ ಬಳಿಕ ತಮ್ಮ ವೈಯುಕ್ತಿಕ ಜೀವನಕ್ಕೆ ಹೆಚ್ಚು ಒತ್ತು ನೀಡುತ್ತಿರುತ್ತಾರೆ. ಆದರೆ ತಮ್ಮ ಅಭಿಮಾನಿಗಳಿಗೆ ಬೇಸರವಾಗದಂತೆ ಸೋಷಿಯಲ್ ಮಿಡಿಯಾ ವೇದಿಕೆಯನ್ನು ಬಳಸಿಕೊಂಡು ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದೇ ಮಾದರಿಯಲ್ಲಿ ಸಖತ್ ಟ್ರೋಲ್ ಸಹ ಆಗುತ್ತಿದೆ.

ಸ್ಯಾಂಡಲ್ ವುಡ್ ನಟಿ ಶ್ವೇತಾ ಶ್ರೀವಾಸ್ತವ್ ಬೆಂಗಳೂರಿನಲ್ಲಿ ಹುಟ್ಟಿ, ಇಲ್ಲೇ ತಮ್ಮ ವಿದ್ಯಾಭ್ಯಾಸವನ್ನೂ ಸಹ ಮುಗಿಸಿದ್ದರು. ಇನ್ನೂ  ಸಿಂಪಾಲ್ಲಾಗ್ ಒಂದು ಲವ್ ಸ್ಟೋರಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ರಕ್ಷಿತ್ ಶೆಟ್ಟಿ ಜೊತೆ ಈ ಸಿನೆಮಾದಲ್ಲಿ ನಟಿಸಿದ್ದು, ಆಕೆಯ ಡೈಲಾಗ್ ಗಳಿಗೆ ಅಭಿನಯಕ್ಕೆ ಅನೇಕರು ಫಿದಾ ಆಗಿ ಆಕೆಯ ಅಭಿಮಾನಿಗಳಾಗಿಬಿಟ್ಟರು. ಇನ್ನೂ ಶ್ವೇತಾ ಅನೇಕ ಕಿರುತೆರೆ ಕಾರ್ಯಕ್ರಮಗಳಲ್ಲೂ ಸಹ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಕಳೆದ 2013ರಲ್ಲಿ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಆಕೆಯ ಕ್ರೇಜ್ ಸಹ ಹೆಚ್ಚಾಯಿತು. ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಸಿನೆಮಾಗಳಿಂದ ದೂರವಿದ್ದ ಶ್ವೇತಾ ಇದೀಗ ಮತ್ತೆ ಸಿನೆಮಾಗಳತ್ತ ಮುಖ ಮಾಡಿದ್ದಾರೆ.

ನಟಿ ಶ್ವೇತಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಪೊಟೋಶೂಟ್ಸ್, ವಿಡಿಯೋಗಳು, ಫಿಟ್ ನೆಸ್ ವಿಡಿಯೋಗಳ ಜೊತೆಗೆ ತನ್ನ ಮಗಳೊಂದಿಗೆ ಇರುವ ಪೊಟೊಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಶ್ವೇತಾ ತನ್ನ ಮುದ್ದಿನ ಮಗಳಾದ ಅಶ್ಮಿತಾ ಜೊತೆಗೆ ದೇವಸ್ತಾನ ಭೇಟಿ, ಟ್ರಾವೆಲ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. 37 ವರ್ಷದ ಶ್ವೇತಾ ಆಗಾಗ ಸೆಕ್ಸಿಯಾಗಿ ಹಾಟ್ ಆಗಿ ನೃತ್ಯ ಮಾಡುವ ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಟಿಪ್ ಟಿಪ್ ಬರ್ಸಾ ಪಾನಿ ಎಂಬ ಹಾಡಿಗೆ ಸೆಕ್ಸಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಆಕೆ ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿದೆ. ಜೊತೆಗೆ ಅದೇ ಮಾದರಿಯಲ್ಲಿ ಟ್ರೋಲ್ ಗೆ ಸಹ ಗುರಿಯಾಗಿದೆ ಎನ್ನಲಾಗಿದೆ.

ಇನ್ನೂ ನಟಿ ಶ್ವೇತಾ ಹಂಚಿಕೊಂಡ ಮಸ್ತ್ ಡ್ಯಾನ್ಸ್ ವಿಡಿಯೋಗೆ ಅನೇಕರು ಫೈರ್‍ ಎಮೋಜಿಗಳನ್ನು ಹಾಕಿ, ಹಾರ್ಟ್ ಎಮೋಜಿಗಳನ್ನು ಹಾಕಿ ಮೆಚ್ಚುಗೆ ಸೂಚಿಸಿದ್ದಾರೆ. ಮತ್ತೆ ಕೆಲವರು ಈ ವಿಡಿಯೋಗೆ ಟ್ರೋಲ್ ಸಹ ಮಾಡಿದ್ದಾರೆ. ಮದುವೆ ಮಕ್ಕಳಾದ ಮೇಲೂ ಈ ರೀತಿಯಲ್ಲಿ ಡ್ಯಾನ್ಸ್ ಆಡುವುದರು ಸರಿಯಲ್ಲ. ಈ ರೀತಿಯಲ್ಲಿ ಡ್ಯಾನ್ಸ್ ಮಾಡಿ ಬಿಗ್ ಬಾಸ್ ಗೆ ಹೋಗಬೇಕಾ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರೂ ಈ ಟ್ರೋಲ್ ಗಳಿಗೆ ಕೌಂಟರ್‍ ಸಹ ಕೊಟ್ಟಿದ್ದಾರೆ. ಇನ್ನೂ ಶ್ವೇತಾ ಕೊನೆಯದಾಗಿ ರಾಘವೇಂದ್ರ ಸ್ಟೋರ್ಸ್ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಚಿಕ್ಕಿಯ ಮೂಗುತಿ ಎಂಬ ಮಹಿಳಾ ಪ್ರಧಾನ ಸಿನೆಮಾದಲ್ಲೂ ಸಹ ಶ್ವೇತಾ ಶ್ರೀವಾಸ್ತವ್ ನಟಿಸಲಿದ್ದಾರೆ.

Most Popular

To Top