ಪ್ರೀತಿಯ ವಿಚಾರ ಗಂಡನಿಗೆ ತಿಳಿದಿದೆ ಎಂದು ಪ್ರಿಯಕರನೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ವಿವಾಹಿತೆ….!

ತಮ್ಮ ಪ್ರೀತಿಯ ವಿಚಾರ ಗಂಡನಿಗೆ ತಿಳಿಯಿತು ಎಂಬ ಕಾರಣದಿಂದ ವಿವಾಹಿತೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಈ ಘಟನೆ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದ್ದು,…

ತಮ್ಮ ಪ್ರೀತಿಯ ವಿಚಾರ ಗಂಡನಿಗೆ ತಿಳಿಯಿತು ಎಂಬ ಕಾರಣದಿಂದ ವಿವಾಹಿತೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಈ ಘಟನೆ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದ್ದು, ಸೌಮಿನಿ ದಾಸ್ (20) ಅಬಿಲ್ ಅಬ್ರಾಂ (28) ಆತ್ಮಹತ್ಯೆಗೆ ಶರಣಾದ ಜೋಡಿ ಎಂದು ಹೇಳಲಾಗಿದೆ.

ಪಶ್ಚಿಮ ಬಂಗಾಳ ಮೂಲದ ಸೌಮಿನಿ ದಾಸ್ ನಸಿಂಗ್ ಕೋರ್ಸ್ ಮಾಡಲು ಬೆಂಗಳೂರಿಗೆ ಬಂದಿದ್ದರು. ಮಾರ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾಸ್ಟೆಲ್ ಒಂದರಲ್ಲಿ ಸೌಮಿನಿ ವಾಸವಾಗಿದ್ದರು. ಎರಡನೇ ವರ್ಷದ ನರ್ಸಿಂಗ್ ವಿದ್ಯಾಬ್ಯಾಸ ಮಾಡುತ್ತಿರುವ ಸೌಮಿನಿ ರಜಾ ದಿನಗಳಲ್ಲಿ ಅಬಿಲ್ ಅಬ್ರಾಹಿಂ ರವರು ನಡೆಸುತ್ತಿದ್ದ ನರ್ಸಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಉಂಟಾಗಿದೆ ಎನ್ನಲಾಗಿದೆ. ಈಗಾಗಲೇ ಸೌಮಿನಿಗೆ ಮದುವೆಯಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಗಂಡನ ಮನೆಗೆ ಹೋಗಿದ್ದರು. ಈ ವೇಳೆ ಗಂಡನಿಗೆ ಸೌಮಿನಿ ಲವ್ ಮ್ಯಾಟರ್‍ ತಿಳಿದಿದೆ. ಇದಕ್ಕಾಗಿ ಪತಿಯೊಂದಿಗೆ ಗಲಾಟೆ ಸಹ ನಡೆದಿದೆ ಎನ್ನಲಾಗಿದೆ.

ಇನ್ನೂ ಸೌಮಿನಿ ಹಾಗೂ ಅಬಿಲ್ ಜೊತೆಗೆ ದೊಡ್ಡಗುಬ್ಬಿಯ ಡಿ ಮ್ಯಾಕ್ಸ್ ಅಪಾರ್ಟ್‌ಮೆಂಟ್ ನಲ್ಲಿ ಲಿವಿಂಗ್ ರಿಲೇಷನ್ ಶಿಪ್ ಆರಂಭಿಸಿದ್ದಾರೆ. ಈ ವಿಚಾರ ಸಹ ಸೌಮಿನಿ ಪತಿಗೆ ತಿಳಿದು ಪೋನ್ ಮಾಡಿ ಬೈದಿದ್ದನಂತೆ. ಈ ವಿಚಾರ ಎಲ್ಲರಿಗೂ ಗೊತ್ತಾಗಿದೆ ಇನ್ನು ನಾವು ಬದುಕೋದು ಬೇಡ ಎಂದು ಸೌಮಿನಿ ಹಾಗೂ ಅಬಿಲ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡ, ಭಾನುವಾರ ಮದ್ಯಾಹ್ನ ಇಬ್ಬರೂ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರೂ ನೋವಿನಿಂದ ಕಿರುಚಾಡಿದ್ದಾರೆ. ಇದನ್ನು ಕೇಳಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ.