Film News

ಕ್ಯಾನ್ಸರ್ ಪೀಡಿತ ಅಪ್ಪು ಅಭಿಮಾನಿಯ ಆಸೆ ಈಡೇರಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್…..!

ಕನ್ನಡ ಸಿನಿರಂಗದ ಸ್ಟಾರ್‍ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‍ ರವರು ನಮ್ಮನ್ನು ಅಗಲಿ ವರ್ಷಗಳು ಕಳೆದರೂ ಸಹ ಅವರು ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಚಿಕ್ಕ ಮಕ್ಕಳಿಂದ ವಯೋವೃದ್ದರವರೆಗೂ ಪುನೀತ್ ರವರಿಗೆ ಅಭಿಮಾನಿಗಳಾಗಿದ್ದಾರೆ. ಅಪ್ಪು ಅಭಿನಯದ ಎಲ್ಲಾ ಸಿನೆಮಾಗಳೂ ಇಡೀ ಕುಟುಂಬ ನೋಡುವಂತ ಸಿನೆಮಾಗಳು ಎಂದರೇ ತಪ್ಪಾಗಲಾರದು. ಇದೀಗ ಅಪ್ಪು ಅಭಿಮಾನಿಯೊಬ್ಬರ ಆಸೆಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್‍ ರವರು ಈಡೇರಿಸಿದ್ದಾರೆ.

ಪುನೀತ್ ರಾಜ್ ಕುಮಾರ್‍ ರವರ ಕನಸುಗಳನ್ನು ಒಂದೊಂದಾಗಿ ನನಸು ಮಾಡುವ ಹೊಣೆಯನ್ನು ಅವರ ಪತ್ನಿ ಅಶ್ವಿನಿ ಹೆಗಲ ಮೇಲೆ ಹೊರುತ್ತಿದ್ದಾರೆ. ಇದೀಗ ಕ್ಯಾನ್ಸರ್‍ ಪೀಡಿತ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ. ಕ್ಯಾನ್ಸರ್‍ ಪೀಡಿತ ಬಾಲಕ 6 ವರ್ಷ ಹರ್ಷ. ಬ್ಲಡ್ ಕ್ಯಾನ್ಸರ್‍ ನಿಂದ ಬಳಲುತ್ತಿದ್ದಾರೆ. ಈ ಬಾಲಕನಿಗೆ ಪುನೀತ್ ರಾಜ್ ಕುಮಾರ್‍ ಎಂದರೇ ತುಂಬಾನೆ ಇಷ್ಟ. ಅಪ್ಪು ಅಗಲಿದ ಬಳಿಕ ಅವರ ಮನೆಗೆ ಹೋಗಬೇಕು ಎಂದು, ಅಶ್ವಿನಿ ಯವರನ್ನು ಭೇಟಿ ಮಾಡಬೇಕು ಎಂದು ಹರ್ಷ ಹಠ ಹಿಡಿದಿದ್ದನಂತೆ. ಹರ್ಷನ ಆಸೆಯ ಬಗ್ಗೆ ತಿಳಿದ ಅಶ್ವಿನಿ ಪುನೀತ್ ರಾಜ್ ಕುಮಾರ್‍ ತಮ್ಮ ಕಾರನ್ನು ಬಾಲಕನ ಮನೆಗೆ ಕಳುಹಿಸಿ ಮನೆಗೆ ಕರೆಸಿಕೊಂಡಿದ್ದಾರೆ. ಬಳಿಕ ಸದಾಶಿವನಗರದಲ್ಲಿರುವ ಪುನೀತ್ ನಿವಾಸಕ್ಕೆ ಆ ಬಾಲ ಅಭಿಮಾನಿ ಬಂದಿದ್ದಾರೆ.

ಚಿತ್ರದುರ್ಗ ಮೂಲದ ಹರ್ಷ ತಂದೆ-ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದು, ತಂದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದರೇ, ತಾಯಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲಕನಿಗೆ ಬ್ಲಡ್ ಕ್ಯಾನ್ಸರ್‍ ಇರುವ ಕಾರಣದಿಂದ ಆತನ ಕೊನೆಯ ಆಸೆಯನ್ನು ಈಡೇರಿಸುವಂತೆ ವೈದ್ಯರು ಪೋಷಕರಿಗೆ ತಿಳಿಸಿದ್ದರಂತೆ. ಬಳಿಕ ಹರ್ಷನ ಬಗ್ಗೆ ಮಾಹಿತಿಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್‍ ರವರಿಗೆ ಕಳುಹಿಸಿದ್ದರಂತೆ. ಮಾಹಿತಿ ತಿಳಿದುಕೊಂಡ ಅಶ್ವಿನಿ ಸಹ ಹರ್ಷನನ್ನು ನ.6 ರಂದು ಮನೆಗೆ ಕರೆಸಿಕೊಂಡು ಧೈರ್ಯ ಹೇಳಿದ್ದಾರೆ. ಅಪ್ಪು ರವರಂತೆ ಅಶ್ವಿನಿ ಸಹ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಾರೆ. ಈ ಹಿಂದೆ ಸಹ ಅಪ್ಪುರವರ ಅಭಿಮಾನಿಯನ್ನು ಮನೆಗೆ ಕರೆಸಿಕೊಂಡು ಉಡುಗೊರೆ ನೀಡಿದ್ದರು. ಇದೀಗ ಕ್ಯಾನ್ಸರ್‍ ಪೀಡಿತ ಮಗುವನ್ನು ಮನೆಗೆ ಕರೆಸಿಕೊಂಡು ಬಾಲಕನ ಆಸೆ ಈಡೇರಿಸಿದ ಅಶ್ವಿನಿಯವರ ಕೆಲಸಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗಿದೆ.

Most Popular

To Top