ಆ ವಿಡಿಯೋ ಶೇರ್ ಮಾಡಿ ವಿವಾದ ಸೃಷ್ಟಿಸಿದ ನಟಿ ಕಸ್ತೂರಿ, ಹುಡುಗಿಯರ ವೈಯುಕ್ತಿಕ ವಿಡಿಯೋ ಹಂಚಿಕೊಂಡ ನಟಿ……!

Follow Us :

ಒಂದು ಕಾಲದಲ್ಲಿ ಸ್ಟಾರ್‍ ನಟಿಯಾಗಿ ಸದ್ದು ಮಾಡಿದ ನಟಿ ಕಸ್ತೂರಿ ಗೃಹಲಕ್ಷ್ಮಿ ಎಂಬ ತೆಲುಗು ಸೀರಿಯಲ್ ಮೂಲಕ ದೊಡ್ಡ ಅಭಿಮಾನಿ ಬಳಗ ಸಾಧಿಸಿಕೊಂಡಿದ್ದಾರೆ. ಆಕೆಯನ್ನು ಕಸ್ತೂರಿ ಇಂಡಸ್ಟ್ರಿಯಲ್ಲಿ ಫೈರ್‍ ಬ್ರಾಂಡ್ ಎಂದು ಹೇಳಲಾಗುತ್ತದೆ. ಯಾವುದೇ ವಿಚಾರವಿದ್ದರೂ ಸಹ ಆಕೆ ನೇರವಾಗಿಯೇ ತಮ್ಮ ಅಭಿಪ್ರಾಯವನ್ನು ಹೇಳಿಬಿಡುತ್ತಾರೆ. ಇದೀಗ ಹುಡುಗಿಯರ ವೈಯುಕ್ತಿಕ ವಿಡಿಯೋ ಒಂದನ್ನು ಹಂಚಿಕೊಂಡು ವಿವಾದಕ್ಕೆ ಗುರಿಯಾಗಿದ್ದಾರೆ.

ನಟಿ ಕಸ್ತೂರಿ ಕೆರಿಯರ್‍ ನಲ್ಲಿ ಬ್ಯುಸಿಯಾಗಿದ್ದರೂ ಸಹ ಬಿಡುವು ಸಿಕ್ಕಾಗ ಸೋಷಿಯಲ್ ಮಿಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಪ್ಯಾನ್ ಇಂಡಿಯಾ ಸಿನೆಮಾ ಆದಿಪುರುಷ್ ಸಿನೆಮಾದಲ್ಲಿ ಪ್ರಭಾಸ್ ಬಗ್ಗೆ ಕಾಮೆಂಟ್ ಮಾಡಿ ಪ್ರಭಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡಲಾಗಿತ್ತು. ಇದೀಗ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ ನಟಿ ಕಸ್ತೂರಿ. ಆಕೆ ಟ್ವಿಟರ್‍ ನಲ್ಲಿ ವಿಡಿಯೋ ಒಂದನ್ನು ಶೇರ್‍ ಮಾಡಿ ಆ ಮೂಲಕ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಅಷ್ಟಕ್ಕೂ ಕಸ್ತೂರಿ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ, ವಿವಾದ ಶುರುವಾಗುವಷ್ಟು ವಿಡಿಯೋದಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,

ನಟಿ ಕಸ್ತೂರಿ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಇಬ್ಬರು ಹುಡುಗಿಯರು ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿಸುತ್ತಿದ್ದರು. ಈ ವಿಡಿಯೋ ಅನ್ನು ಆಕೆ ಹಂಚಿಕೊಂಡು ಚೆನ್ನಾಗಿ ಕುಡಿಯಿರಿ ಹುಡುಗಿಯರಾ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ವಿಡಿಯೋ ವಾಟ್ಸಾಪ್ ನಲ್ಲಿ ಬಂದಿದ್ದು ಎಂದು ಹೇಳಿದ್ದಾರೆ. ಇನ್ನೂ ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ. ಆಕೆಯ ಈ ಕೆಲಸಕ್ಕೆ ಅನೇಕರು ತೀವ್ರ ವಿರೋಧ ಮಾಡುತ್ತಾ ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಅದು ಅವರವರ ವೈಯುಕ್ತಿಕ ವಿಚಾರ ಅದನ್ನು ನೀವು ಏಕೆ ಶೇರ್‍ ಮಾಡಿದ್ದು ಎಂದು ಪ್ರಶ್ನೆಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ನಿಮ್ಮ ಪೋಸ್ಟ್ ಅನೇಕರನ್ನು ತಪ್ಪು ದಾರಿ ಹಿಡಿಸುವಂತಿದೆ. ಹುಡುಗಿಯರು ಕುಡಿಯುವುದನ್ನು ಪ್ರೋತ್ಸಾಹ ಮಾಡುತ್ತೀದ್ದೀಯಾ ಅಥವಾ ವಿರೋಧ ಮಾಡುತ್ತಿದ್ದೀರಾ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಈ ವಿಡಿಯೋಗೆ ಖ್ಯಾತ ಗಾಯಕಿ ಚಿನ್ಮಯಿ ಸಹ ರಿಯಾಕ್ಟ್ ಆಗಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕಾದರೇ ಅಂತಹ ವಿಡಿಯೋ ಹಂಚಿಕೊಳ್ಳುವ ಅವಶ್ಯಕತೆ ಇರಲಿಲ್ಲ ಎಂದು ಕಸ್ತೂರಿ ವಿರುದ್ದ ಆಗ್ರಹಿಸಿದ್ದಾರೆ. ಇನ್ನೂ ಚಿನ್ಮಯಿ ಪೋಸ್ಟ್ ಗೆ ಅನೇಕ ನೆಟ್ಟಿಗರೂ ಸಹ ಬೆಂಬಲ ನೀಡಿದ್ದಾರೆ. ಒಟ್ಟಿನಲ್ಲಿ ನಟಿ ಕಸ್ತೂರಿ ಹಂಚಿಕೊಂಡ ವಿಡಿಯೋ ಕಾರಣದಿಂದ ಆಕೆ ದೊಡ್ಡ ಮಟ್ಟದಲ್ಲೇ ವಿಮರ್ಶೆಗಳನ್ನು ಎದುರಿಸುವಂತಾಗಿದೆ.