ಪವನ್ ಕಲ್ಯಾಣ್ ಸಿನೆಮಾದ ಶೂಟಿಂಗ್ ಗೆ ಎಂಟ್ರಿ ಕೊಟ್ಟ ಧಮಾಕಾ ಬ್ಯೂಟಿ ಶ್ರೀಲೀಲಾ…..!

Follow Us :

ಸದ್ಯ ಸೌತ್ ಸಿನಿರಂಗದಲ್ಲಿ ಸ್ಯಾಂಡಲ್ ವುಡ್ ನಟಿಯರ ಹವಾ ಜೋರಾಗಿದೆ. ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಈಗಾಗಲೇ ಸೌತ್ ಸಿನಿರಂಗದ ಬಹುಬೇಡಿಕೆ ನಟಿಯಾಗಿದ್ದಾರೆ. ಅದರಲ್ಲೂ ತೆಲುಗಿನಲ್ಲಿ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ರವಿತೇಜ ಅಭಿನಯದ ಧಮಾಕಾ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಶ್ರೀಲೀಲಾ ಇದೀಗ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ರವರ ಉಸ್ತಾದ್ ಭಗತ್ ಸಿಂಗ್ ಸಿನೆಮಾದಲ್ಲೂ ಸಹ ಶ್ರೀಲೀಲಾ ನಟಿಸುತ್ತಿದ್ದು, ಇದೀಗ ಶ್ರೀಲೀಲಾ ಶೂಟಿಂಗ್ ಗೆ ಎಂಟ್ರಿ ಕೊಟ್ಟಿದ್ದಾರೆ.

ತೆಲುಗು ಸಿನಿರಂಗದ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಹಾಗೂ ಖ್ಯಾತ ನಿರ್ದೇಶಕ ಹರೀಶ್ ಶಂಕರ್‍ ನಿರ್ದೇಶನದಲ್ಲಿ ಉಸ್ತಾದ್ ಭಗತ್ ಸಿಂಗ್ ಸಿನೆಮಾ ಸೆಟ್ಟೇರಿದೆ. ಈ ಸಿನೆಮಾವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‍ ನವರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಸುಮಾರು ಮೂರು ವರ್ಷಗಳ ಹಿಂದೆಯೇ ಈ ಸಿನೆಮಾ ತೆರೆಗೆ ತರಲು ಪ್ಲಾನ್ ಮಾಡಲಾಗಿತ್ತು. ಆದರೆ ಪವನ್ ಕಲ್ಯಾಣ್ ರವರಿಗೆ ಸಮಯ ಸಿಗದ ಕಾರಣ ಸಿನೆಮಾ ಪೆಂಡಿಂಗ್ ನಲ್ಲಿಡಲಾಗಿತ್ತು. ಆದರೆ ಇತ್ತೀಚಿಗಷ್ಟೆ ಪವನ್ ಕಲ್ಯಾಣ್ ಈ ಸಿನೆಮಾಗೆ ಗ್ರೀನ್ ಸಿಗ್ನಲ್ ನೀಡಿದ್ದು ಶೂಟೀಂಗ್ ಕೆಲಸಗಳು ಶುರುವಾಗಿದೆ. ಈ ಸಿನೆಮಾಗಾಗಿ ಪವನ್ ಕಲ್ಯಾಣ್ ಸುಮಾರು 25 ದಿನಗಳ ಸಮಯದ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ದಿನಗಳಿಂದ ಹೈದರಾಬಾದ್ ನಲ್ಲಿರುವ ಅಲ್ಯೂಮಿನಿಯಂ ಫ್ಯಾಕ್ಟರಿಯೊಂದರಲ್ಲಿ ಶೂಟಿಂಗ್ ನಡೆಯುತ್ತಿದ್ದು ಈ ಶೂಟಿಂಗ್ ನಲ್ಲಿ ಶ್ರೀಲೀಲಾ ಸಹ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಇದೇ ಲೊಕೇಷನ್ ನಲ್ಲಿ ಶ್ರೀಲೀಲಾ ಪಾತ್ರಕ್ಕೆ ಸಂಬಂಧಿಸಿದ ಕೆಲವೊಂದು ದೃಶ್ಯಗಳ ಶೂಟಿಂಗ್ ಸಹ ನಡೆಯಬೇಕಿದ್ದು ಆ ಕಾರಣದಿಂದ ಶ್ರೀಲೀಲಾ ಭಾಗಿಯಾಗಿದ್ದಾರಂತೆ. ಇನ್ನೂ ಕೆಲವೊಂದು ಮೂಲಕ ಪ್ರಕಾರ ಶ್ರೀಲೀಲಾ ಈ ಸಿನೆಮಾದಲ್ಲಿ ಮೈನ್ ಹಿರೋಯಿನ್ ಆಗಿ ಪವನ್ ಜೊತೆಗೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಮೈನ್ ಹಿರೋಯಿನ್ ಆಗಿ ಪೂಜಾ ಹೆಗ್ಡೆ ಹಾಗೂ ಸೆಕೆಂಡ್ ಹಿರೋಯಿನ್ ಆಗಿ ಶ್ರೀಲೀಲಾ ರವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತಂತೆ. ಆದರೆ ಪೂಜಾ ಹೆಗ್ಡೆ ಡೇಟ್ಸ್ ಕೊರತೆಯಿಂದ ಆಕೆಯ ಸ್ಥಾನದಲ್ಲಿ ಶ್ರೀಲೀಲಾ ರವರನ್ನು ಅಂತಿಮ ಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಮಾತ್ರ ಇನ್ನೂ ಅನೌನ್ಸ್ ಮಾಡಿಲ್ಲ.

ಇನ್ನೂ ಧಮಾಕಾ ಸಿನೆಮಾದ ಬಳಿಕ ಶ್ರೀಲೀಲಾ ಭಾರಿ ಬೇಡಿಕೆ ಪಡೆದುಕೊಂಡಿದ್ದಾರೆ. ಈ ವರ್ಷ ತೆರೆಕಾಣಲಿರುವ ಭಾರಿ ಪ್ರಾಜೆಕ್ಟ್ ಗಳಲ್ಲಿ ಆಕೆ ನಟಿಸುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಅಭಿನಯದ NBK108 ಸಿನೆಮಾದಲ್ಲಿ ಬಾಲಕೃಷ್ಣ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ರಾಮ್ ಹಾಗೂ ನಿತಿನ್ ಜೊತೆಗೂ ಸಹ ಆಕೆ ನಟಿಸುತ್ತಿದ್ದಾರೆ. ಸದ್ಯ ಸೌತ್ ನ ಅನೇಕ ಸ್ಟಾರ್‍ ಹಿರೋಯಿನ್ ಗಳಿಗೆ ಶ್ರೀಲೀಲಾ ಒಳ್ಳೆಯ ಪೈಪೋಟಿಯನ್ನು ನೀಡುತ್ತಿದ್ದಾರೆ ಎನ್ನಬಹುದಾಗಿದೆ.