Film News

ಶ್ರೀಲಂಕಾ ವೆಕೇಷನ್ ನಲ್ಲಿ ಬೋಲ್ಡ್ ಬ್ಯೂಟಿ ಶ್ರದ್ದಾ ದಾಸ್, ಬಿಕಿನಿಯಲ್ಲಿ ಮತ್ತೇರಿಸುವ ಪೋಸ್ ಕೊಟ್ಟ ಬ್ಯೂಟಿ…..!

ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕವೇ ಅನೇಕ ನಟಿಯರು ಭಾರಿ ಫಾಲೋಯಿಂಗ್ ಪಡೆದುಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ನಟಿ ಶ್ರದ್ದಾ ದಾಸ್ ಸಹ ಸೇರುತ್ತಾರೆ. ಆಕೆ ನಟಿಯಾಗಿ ಕ್ರೇಜ್ ಪಡೆದುಕೊಂಡಿದ್ದಕ್ಕಿಂತ ಸೋಷಿಯಲ್ ಮಿಡಿಯಾದಲ್ಲೇ ಹೆಚ್ಚು ಕ್ರೇಜ್ ಪಡೆದುಕೊಂಡರು ಎನ್ನಬಹುದಾಗಿದೆ. ದಿನೇ ದಿನೇ ಮತಷ್ಟು ಹಾಟ್ ಆಗಿ ಪೋಸ್ ಕೊಡುತ್ತಿದ್ದಾರೆ. ಇದೀಗ ಸಮ್ಮರ್‍ ವೆಕೇಷನ್ ಗೆ ಹಾರಿದ ಶ್ರದ್ದಾ ದಾಸ್ ನೆವರ್‍ ಬಿಪೋರ್‍ ಎಂಬಂತೆ ಬಿಕಿನಿಯಲ್ಲ ಹಾಟ್ ಪೋಸ್ ಕೊಟ್ಟಿದ್ದು, ಶ್ರೀಲಂಕಾದಲ್ಲಿ ಸೌಂದರ್ಯದ ಸುನಾಮಿಯನ್ನು ಸೃಷ್ಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಬೋಲ್ಡ್ ಬ್ಯೂಟಿ ಶ್ರದ್ದಾ ದಾಸ್ ಸಿದ್ದು ಫ್ರಂ ಶ್ರೀಕಾಕುಳಂ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆ ಸಕ್ಸಸ್ ಕಂಡುಕೊಳ್ಳಲಿಲ್ಲ. ಬಳಿಕ ಬೋಲ್ಡ್ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಆಕೆ ಅನೇಕ ಸಿನೆಮಾಗಳಲ್ಲಿ ರೊಮ್ಯಾಂಟಿಕ್ ಅಂಡ್ ಕ್ಯಾರೆಕ್ಟರ್‍ ಪಾತ್ರಗಳಲ್ಲಿ ಕಾಣಿಸಿಕೊಂಡರು. ಅಂತಹ ಪಾತ್ರಗಳನ್ನು ಮಾಡಿದ ಅನೇಕ ಸಿನೆಮಾಗಳು ಭಾರಿ ಸಕ್ಸಸ್ ಕಂಡಿವೆ. ಈ ಹಿನ್ನೆಲೆಯಲ್ಲಿ ಆಕೆ ಅಂತಹ ಪಾತ್ರಗಳಿರುವ ಸಿನೆಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಆಕೆ ಕೊನೆಯದಾಗಿ ಏಕ್ ಮಿನಿ ಕಥ ಎಂಬ ಸಿನೆಮಾದ ಮೂಲಕ ಕಾಣಿಸಿಕೊಂಡರು ಈ ಸಿನೆಮಾ ಒಳ್ಳೆಯ ಜಯ ಗಳಿಸಿತ್ತು. ಆರ್ಯ-2, ಗುಂಟೂರು ಟಾಕೀಸ್, ಡಾರ್ಲಿಂಗ್ ಮೊದಲಾದ ಸಿನೆಮಾಗಳ ಮೂಲಕ ಆಕೆಗೆ ಮತಷ್ಟು ಕ್ರೇಜ್ ದೊರೆಯಿತು. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ರಂಜಿಸುತ್ತಲೇ ಇರುತ್ತಾರೆ.

ಇನ್ನೂ ನಟಿ ಶ್ರದ್ದಾ ದಾಸ್ ಶ್ರೀಲಂಕಾ ವೆಕೇಷನ್ ನಲ್ಲಿದ್ದಾರೆ. ಸಮ್ಮರ್‍ ವೆಕೇಷನ್ ಗಾಗಿ ಆಕೆ ಶ್ರೀಲಂಕಾಗೆ ಹೋಗಿದ್ದು, ಸ್ವಿಮ್ಮಿಂಗ್ ಪೂಲ್ ಬಳಿಕ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಬಿಕಿನಿಯಲ್ಲಿ ತನ್ನ ದೇಹದ ಸೌಂದರ್ಯ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಬಿಕಿನಿಯಲ್ಲಿ ಸೌಂದರ್ಯವನ್ನು ಪ್ರದರ್ಶನಮಾಡುತ್ತಾ ಬೋಲ್ಡ್ ನೆಸ್ ಎಂಬ ಪದಕ್ಕೆ ಅಸೂಯೆ ಹುಟ್ಟುವಂತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಒಂದೊಂದು ಪೋಸ್ ಸೋಷಿಯಲ್ ಮಿಡಿಯಾದಲ್ಲಿ ಬ್ಲಾಸ್ಟ್ ಆಗುತ್ತಿವೆ. ಅದರಲ್ಲೂ ಎದೆಯ ಸೌಂದರ್ಯಕ್ಕೆ ಪಡ್ಡೆಹುಡುಗರು ಮತ್ತೇರಿಸಿಕೊಳ್ಳುತ್ತಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಶ್ರದ್ದಾ ದಾಸ್ ಇತ್ತಿಚಿಗೆ ಕಿರುತೆರೆಯಲ್ಲೂ ಸಹ ಸದ್ದು ಮಾಡುತ್ತಿದ್ದಾರೆ. ಡಿ ಜೋಡಿ ಎಂಬ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಶ್ರದ್ದಾ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಶೋ ನಲ್ಲೂ ಸಹ ಶ್ರದ್ದಾ ಗ್ಲಾಮರಸ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಆಗಾಗ ಭರ್ಜರಿಯಾಗಿ ಕುಣಿಯುತ್ತಿರುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಶ್ರದ್ದಾ ಸದಾ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ಆಕರ್ಷಣೆ ಮಾಡುವುದರ ಜೊತೆಗೆ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿರುತ್ತಾರೆ.

Most Popular

To Top