ಬಾಡಿಶೇಮಿಂಗ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಮೃಣಾಲ್, ಆಕೆಯನ್ನು ಸುಂದರವಾಗಿಲ್ಲ, ದಪ್ಪ ಆಗಿದ್ದೀಯಾ ಎಂದು ಟೀಕಿಸಿದ್ದರಂತೆ…..!

Follow Us :

ಸಿನಿರಂಗದಲ್ಲಿ ಅನೇಕ ಸ್ಟಾರ್‍ ನಟಿಯರು ಒಂದಲ್ಲ ಒಂದು ರೀತಿಯಲ್ಲಿ ಬಾಡಿ ಶೇಮಿಂಗ್ ಅನುಭವಿಸುತ್ತಿರುತ್ತಾರೆ. ಅಂತಹ ಕಹಿ ಅನುಭವಗಳನ್ನು ಆಗಾಗ ಹೊರಹಾಕುತ್ತಿರುತ್ತಾರೆ. ಇದೀಗ ನಟಿ ಮೃಣಾಲ್ ಠಾಕೂರ್‍ ಸಹ ತಾನು ಅನುಭವಿಸಿದ್ದಂತಹ ಬಾಡಿ ಶೇಮಿಂಗ್ ನೋವು ಪಟ್ಟಿರುವ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಆಕೆಯನ್ನು ದಪ್ಪ ಆಗಿದ್ದೀಯಾ, ಸುಂದರವಾಗಿಲ್ಲ ಎಂಬೆಲ್ಲಾ ಮಾತುಗಳ ಮೂಲಕ ಬಾಡಿ ಶೇಮಿಂಗ್ ಮಾಡಿದ್ದರು ಎಂಬ ವಿಚಾರವನ್ನು ಮೃಣಾಲ್ ಸಂದರ್ಶನವೊಂದರಲ್ಲಿ ನೋವು ಹಂಚಿಕೊಂಡಿದ್ದಾರೆ.

ಸೀತಾರಾಮಂ ಸಿನೆಮಾದ ಮೂಲಕ ಓವರ್‍ ನೈಟ್ ಕ್ರೇಜಿ ನಟಿಯಾಗಿ ಫೇಂ ಪಡೆದುಕೊಂಡರು. ಕೊನೆಯದಾಗಿ ಆಕೆ ಹಾಯ್ ನಾನ್ನ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಆಕೆ ವಿಜಯ್ ದೇವರಕೊಂಡ ಜೊತೆಗೆ ಫ್ಯಾಮಿಲಿ ಸ್ಟಾರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಮೃಣಾಲ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಸಮಯದಲ್ಲಿ ತಾನು ಅನುಭವಿಸಿದಂತಹ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ಸಿನೆಮಾಗಳಲ್ಲಿ ನಟಿಸುವ ಸಮಯದಲ್ಲಿ ಆಕೆ ತುಂಬಾನೆ ಸಮಸ್ಯೆ ಎದುರಿಸಿದ್ದರಂತೆ. ಸಿನೆಮಾಗಳಲ್ಲಿ ಅವಕಾಶ ಕೊಟ್ಟರೂ ಸಹ ಬೇರೆಯೊಬ್ಬರೊಂದಿಗೆ ಹೋಲಿಕೆ ಮಾಡುತ್ತಾ ನೀನು ಅವರಂತೆ ನಟಿಸಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದರು. ಆದ್ದರಿಂದಲೇ ನಾನು ಅಲ್ಲೇ ಸ್ಥೀರವಾಗಲು ನಿರ್ಧಾರ ಮಾಡಿಕೊಂಡೆ. ಅಷ್ಟೇಅಲ್ಲದೇ ನನಗೆ ತಾಯಿ, ಸಹೋದರಿ ಪಾತ್ರದಲ್ಲೂ ಸಹ ನಟಿಸಲು ಯಾವುದೇ ಭಯವಿಲ್ಲ ಎಂದಿದ್ದಾರೆ.

ಈ ಹಿಂದೆ ನಡೆದಂತಹ ಈವೆಂಟ್ ಒಂದರಲ್ಲಿ  ಭಾಗಿಯಾಗಿದ್ದಾಗ ನನ್ನ ಬಾಡಿಯನ್ನು ಉದ್ದೇಶಿಸಿ ಕೆಲವೊಂದು ಕಾಮೆಂಟ್ ಮಾಡಿದ್ದರು. ನೀವು ಸೆಕ್ಸಿಯಾಗಿಲ್ಲ. ಆದರೆ ನೀವು ಮಾಡಿದ ಪಾತ್ರ ಸೆಕ್ಸಿಯಾಗಿದೆ. ಆದರೆ ನೀವು ಆ ಪಾತ್ರದಲ್ಲಿ ಸರಿಯಾಗಿ ನಟಿಸಿಲ್ಲ ಎಂದು ದಾರುಣವಾಗಿ ಮಾತನಾಡಿದ್ದರು. ಅದರಲ್ಲೂ ಓರ್ವ ಪೊಟೋಗ್ರಾಫರ್‍ ನೋಡದೇ ಕಾಮೆಂಟ್ ಮಾಡಿದ್ದರು. ಈ ಹಳ್ಳಿ ಹುಡುಗಿ ಯಾರು ಎಂದು ಆತ ಮರಾಠಿಯಲ್ಲಿ ಮಾತನಾಡಿದ್ದರು. ಬಳಿಕ ಆತ ನನಗೆ ಕ್ಷಮೆ ಕೇಳಿದ್ದರು. ನಾನು ಯಾವುದೇ ಪಾತ್ರದಲ್ಲಿ ನಟಿಸಿದರೂ ನಾನು ಅದೇ ರೀತಿ ಇರೋಕೆ ಇಷ್ಟಪಡುತ್ತೇನೆ ಆಗ ಮಾತ್ರ ನಾನು ಆ ಪಾತ್ರವನ್ನು ಸುಲಭವಾಗಿ ಮಾಡಬಹುದು. ಒಂದು ಹಾಡಿನಲ್ಲಿ ನಟಿಸುವಾಗ ತನ್ನ ತೂಕ ಕಡಿಮೆ ಮಾಡುವಂತೆ ಸಲಹೆ ನೀಡಿದ್ದರು. ಆಗ ನಾನು ನನ್ನ ಶರೀರದ ತೂಕದಿಂದ ನನಗೆ ಯಾವುದೇ ಸಮಸ್ಯೆಯಿಲ್ಲ. ನೀವು ಏಕೆ ಆ ರೀತಿ ಫೀಲ್ ಆಗುತ್ತಿರಾ ಎಂದು ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದರಂತೆ. ಈ ರೀತಿ ತಾನು ಆರಂಭದಲ್ಲಿ ಎದುರಿಸಿದಂತಹ ಬಾಡಿ ಶೇಮಿಂಗ್ ಬಗ್ಗೆ ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.