Film News

ನಟನೊಂದಿಗೆ ಲವ್ ಅಫೈರ್ ಬಗ್ಗೆ ಕ್ಲಾರಿಟಿ ಕೊಟ್ಟ ಮಲಯಾಳಂ ಕುಟ್ಟಿ ಐಶ್ವರ್ಯ ಲಕ್ಷ್ಮೀ…!

ಕಳೆದೆರಡು ದಿನಗಳಿಂದ ಮಾಲಿವುಡ್ ಯಂಗ್ ನಟಿ ಐಶ್ವರ್ಯ ಲಕ್ಷ್ಮೀ  ಹಾಗೂ ಯಂಗ್ ನಟ ಅರ್ಜುನ್ ದಾಸ್ ಜೊತೆಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ರೂಮರ್‍ ಜೋರಾಗಿ ಹರಿದಾಡುತ್ತಿದ್ದು, ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಅರ್ಜುನ್ ದಾಸ್ ಜೊತೆಗಿನ ಪೊಟೋ ಒಂದನ್ನು ಸಹ ಆಕೆ ಹಂಚಿಕೊಂಡಿದ್ದರು. ಈ ಕಾರಣದಿಂದ ಆಕೆ ತನ್ನ ಪ್ರಿಯಕರನನ್ನು ಸೋಷಿಯಲ್ ಮಿಡಿಯಾದ ಮೂಲಕ ಪರಿಚಯ ಮಾಡಿದ್ದಾರೆ ಎಂದು ದೊಡ್ಡ ಮಟ್ಟದ ಪ್ರಚಾರ ನಡೆದಿತ್ತು. ಇದೀಗ ಈ ಸುದ್ದಿಯ ಬಗ್ಗೆ ಐಶ್ವರ್ಯ ಕ್ಲಾರಿಟಿ ಕೊಟ್ಟಿದ್ದಾರೆ.

ನಟಿ ಐಶ್ವರ್ಯ ಕಳೆದೆರಡು ದಿನಗಳ ಹಿಂದೆಯಷ್ಟೆ ನಟ ಅರ್ಜುನ್ ದಾಸ್ ಜೊತೆಗೆ ಕ್ಲೋಜ್ ಆಗಿರುವಂತಹ ಪೊಟೋ ಒಂದನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ ಗೆ ಆಕೆ ಹಾರ್ಟ್ ಎಮೋಜಿ ಸಹ ಹಂಚಿಕೊಂಡಿದ್ದ ಕಾರಣದಿಂದ ಅವರಿಬ್ಬರೂ ಪ್ರೀತಿಯಲ್ಲಿದ್ದಾರೆ ಎಂಬ ರೂಮರ್‍ ಗಳು ಹರಿದಾಡಲು ಶುರು ಆಗಿತ್ತು. ಜೊತೆಗೆ ಆ ಪೊಟೋ ಸಹ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಐಶ್ವರ್ಯ ರಿಯಾಕ್ಟ್ ಆಗಿದ್ದಾರೆ. ಎಲ್ಲರೂ ತಿಳಿದುಕೊಳ್ಳುತ್ತಿರುವಂತೆ ನಮ್ಮಿಬ್ಬರ ನಡುವೆ ಯಾವುದೇ ರಿಲೇಷನ್ ಶಿಪ್ ಇಲ್ಲ. ನಾವಿಬ್ಬರೂ ಕೇವಲ ಸ್ನೇಹಿತರಷ್ಟೆ. ನನ್ನ ಈ ಪೋಸ್ಟ್ ಅಷ್ಟೊಂದು ರೇಂಜ್ ನಲ್ಲಿ ವೈರಲ್ ಆಗುತ್ತದೆ ಎಂದು ಊಹಿಸಿರಲಿಲ್ಲ. ಆಕಸ್ಮಿಕವಾಗಿ ಭೇಟಿಯಾದೆವು, ಪೊಟೋ ತೆಗೆದುಕೊಂಡು ಶೇರ್‍ ಮಾಡಿದೆ. ನೀವು ಊಹೆ ಮಾಡಿದಂಗೆ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಷ್ಟೇಅಲ್ಲದೇ ನನಗೆ ಈ ಪೋಸ್ಟ್ ವೈರಲ್ ಆದಾಗಿನಿಂದ ಅರ್ಜುನ್ ದಾಸ್ ಸ್ನೇಹಿತರು ಫ್ಯಾನ್ಸ್ ನನಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇನ್ನಾದರೂ ಈ ಸುದ್ದಿಯನ್ನು ನಿಲ್ಲಿಸಿ. ಅತ ನಿಮ್ಮವನೇ ಎಂದಿದ್ದಾರೆ ಐಶ್ವರ್ಯ. ಇನ್ನೂ ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಯಾವುದೇ ಸುದ್ದಿ ಬರಲಿ ಅದು ಕ್ಷಣ ಮಾತ್ರದಲ್ಲೇ ವೈರಲ್ ಆಗುತ್ತದೆ. ಆ ಸುದ್ದಿ ನಿಜವೇ ಅಥವಾ ಸುಳ್ಳಾ ಎಂಬುದನ್ನು ಸಹ ಯೋಚನೆ ಮಾಡದೇ ಎಲ್ಲಾ ಕಡೆ ಹರಿಬಿಡುತ್ತಿರುತ್ತಾರೆ. ಅದೇ ರೀತಿ ಐಶ್ವರ್ಯ ಹಾಗೂ ಅರ್ಜುನ್ ದಾಸ್ ಲವ್ ಅಫೈರ್‍ ಬಗ್ಗೆ ಸಹ ಕ್ಷಣ ಮಾತ್ರದಲ್ಲೇ ವೈರಲ್ ಆಗಿಬಿಟ್ಟಿದೆ. ಸದ್ಯ ಆಕೆ ಈ ರೂಮರ್‍ ಬಗ್ಗೆ ಕ್ಲಾರಿಟಿ ಕೊಟ್ಟಿದ್ದು, ಇನ್ನಾದರೂ ಈ ಸುದ್ದಿ ನಿಲ್ಲುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಇನ್ನೂ ನಟಿ ಐಶ್ವರ್ಯ ಲಕ್ಷ್ಮೀ ಇತ್ತೀಚಿಗಷ್ಟೆ ಮಟ್ಟಿ ಕುಸ್ತಿ ಹಾಗೂ ಪೊನ್ನಿಯನ್ ಸೆಲ್ವನ್, ಅಮ್ಮು ಎಂಬ ಸಿನೆಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇನ್ನೂ ಆಕೆಗೆ ಪೊನ್ನಿಯನ್ ಸೆಲ್ವನ್ ಸಿನೆಮಾದ ಬಳಿಕ ಆಕೆಗೆ ಮತಷ್ಟು ಅವಕಾಶಗಳು ಹರಿದುಬರುತ್ತಿವೆ. ಇನ್ನೂ ಆಕೆ ಗಾಡ್ಸೆ ಸಿನೆಮಾದಲ್ಲೂ ಸಹ ಆಕೆ ಅದ್ಬುತವಾಗಿ ನಟಿಸಿದ್ದರು. ಇನ್ನೂ ಆಕೆ ವೈದ್ಯೆಯಾಗಿದ್ದು, ಸಿನೆಮಾಗಳ ಮೇಲಿನ ಆಸಕ್ತಿಯ ಕಾರಣದಿಂದ ಆಕೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

Most Popular

To Top