Film News

ತಾನು ಅನುಭವಿಸಿದ 90 ದಿನಗಳ ಕರಾಳ ದಿನಗಳನ್ನು ಪುಸ್ತಕದ ಮೂಲಕ ಹೊರಹಾಕಲಿದ್ದಾರೆ ತುಪ್ಪದ ಬೆಡಗಿ ರಾಗಿಣಿ…..!

ಕನ್ನಡ ಸಿನಿರಂಗದಲ್ಲಿ ಬಹುಬೇಡಿಕೆಯುಳ್ಳ ನಟಿಯಾಗಿದ್ದ ತುಪ್ಪದ ಹುಡುಗಿ ಎಂತಲೇ ಖ್ಯಾತಿ ಪಡೆದುಕೊಂಡ ರಾಗಿಣಿ ದ್ವಿವೇದಿ ಸಿನೆಮಾಗಳಲ್ಲಿ ಮುನ್ನುಗ್ಗುತ್ತಿರುವಾಗಲೇ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡು 90 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದರು. ಆಕೆ ಸುಮಾರು 40 ಸಿನೆಮಾಗಳಲ್ಲಿ ನಟಿಸಿದ್ದಾರೆ. ಇದೀಗ ತಾನು ಪೊಲೀಸ್ ಕಸ್ಟಡಿಯಲ್ಲಿ ಅನುಭವಿಸಿದ ಕರಾಳ ದಿನಗಳ ಬಗ್ಗೆ ಪುಸ್ತಕ ಬರೆದಿದ್ದಾಗಿ, ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡುವುದಾಗಿ ರಾಗಿಣಿ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ನಟಿ ರಾಗಿಣಿ ಕನ್ನಡದಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದರು. ಆಕೆಯ 15 ವರ್ಷ ಕೆರಿಯರ್‍ ನಲ್ಲಿ ಸುಮಾರು 40 ಸಿನೆಮಾಗಳಲ್ಲಿ ನಟಿಸಿದ್ದಾರೆ. ವೀರ ಮದಕರಿ, ಕೆಂಪೇಗೌಡ ಸೇರಿದಂತೆ ಅನೇಕ ಹಿಟ್ ಸಿನೆಮಾಗಳ ಆಕೆಯ ಖಾತೆಯಲ್ಲಿವೆ. ಇನ್ನೂ ಆಕೆ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ತುಂಬಾ ಸಂಕಷ್ಟ ಎದುರಿಸಿದರು. ಇನ್ನೂ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಆಕೆ 90 ದಿನಗಳಲ್ಲಿ ಅನುಭವಿಸಿದ ಸಂಕಷ್ಟ, ನೋವು, ಮಹಿಳೆಯರು ಮತ್ತೋರ್ವ ಮಹಿಳೆಯನ್ನು ಯಾಕೆ ಬೆಂಬಲಿಸುವುದಿಲ್ಲ ಎಂಬೆಲ್ಲಾ ವಿಚಾರಗಳನ್ನು ಆಕೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಎಲ್ಲಾ ಕಡೆ ನೆಗೆಟೀವ್ ಎನರ್ಜಿ ತುಂಬಿದೆ. ನಾನು ಸೋಲೋ ಸಿನೆಮಾಗಳನ್ನು ಮಾಡಲು ಹೊರಟಾಗ ಅನೇಕ ನಟರಿಗೆ ಅದು ಅಭದ್ರ ಎಂಬ ಫೀಲ್ ಆಗಿದೆ. ಅನೇಕ ನಿರ್ಮಾಪಕರಿಗೆ ಕರೆ ಮಾಡಿ ಯಾಕೆ ಮಹಿಳಾ ಪ್ರಧಾನ ಸಿನೆಮಾ ಮಾಡುತ್ತೀರಾ, ಆ ನಾಯಕಿಯನ್ನು ಯಾಕೆ ಹಿರೋ ಅಂತೆ ಶೋ ಮಾಡುತ್ತಿರಾ ಎಂದು ಕೇಳುತ್ತಿದ್ದರಂತೆ.

ಈ ಎಲ್ಲಾ ಮಾತುಗಳನ್ನು ಕೇಳಿ ನಾನು ಮತಷ್ಟು ಬೆಳೆಯಬೇಕು ಎಂದುಕೊಂಡೆ. ಇನ್ನೂ ಜನರು ನಮ್ಮ ಕೆಳಗೆ ಎಳೆಯಲು ಕಾಯುತ್ತಿರುತ್ತಾರೆ. ಕೆಲವರಂತೂ ಬೆಳೆಯುತ್ತಿರವವರನ್ನು ಏನಾದರೂ ಮಾಡಿ ತುಳಿಯಬೇಕೆಂಬುದೇ ಗುರಿಯಾಗಿರುತ್ತದೆ. ಅಂತಹ ಕೆಟ್ಟ ಅಭ್ಯಾಸ ಏಕೆ ಎಂದು ನನಗೆ ಅರ್ಥ ಆಗುತ್ತಿಲ್ಲ. ದಿನಕ್ಕೆ 24 ಗಂಟೆ ಮಾತ್ರ, ಅದರಲ್ಲಿ ನೆಗೆಟಿವಿಟಿ ಬಗ್ಗೆ ಯೋಚನೆ ಮಾಡಿ ಸಮಯ ಯಾಕೆ ವ್ಯರ್ಥ ಮಾಡಬೇಕು. ಇನ್ನೂ ನಾನು ತುಂಬಾ ಸೆನ್ಸಿಟಿವ್, ನಾನು ಅನುಭವಿಸಿದ ಕೆಟ್ಟ ಗಳಿಗೆಳಿಂದ ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಅನೇಕ ಬಾರಿ ಒಬ್ಬಳೇ ಜೋರಾಗಿ ಅತ್ತಿರುವೆ, ಕೆಲಸ ಬಿಡೋಣ ಎಂದುಕೊಂಡಿದ್ದೆ ಎಂದಿದ್ದಾರೆ. ಅಷ್ಟೇಅಲ್ಲದೇ ಕೆಲವ ಮಹಿಳೆಯರು ಅವರನ್ನು ಅವರೇ ಕಡೆಗಣಿಸಿಕೊಳ್ಳುತ್ತಾರೆ. ನಮ್ಮನ್ನು ನಾವು ಪ್ರೀತಿಸುವ ಜೊತೆಗೆ ಮಹಿಳೆ ಮತ್ತೊಬ್ಬ ಮಹಿಳೆಯ ಪರ ನಿಲ್ಲಬೇಕು. ಆದರೆ ನಾಯಕಿಯರು ಹಾಗೆ ಮಾಡುವುದನ್ನು ನಾನು ನೋಡಿಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ.

ಇನ್ನೂ ನಾನು 90 ದಿನಗಳ ಕಾಲ ಕಸ್ಟಡಿಯಲ್ಲಿರುವಾಗ ಜೀವನದಲ್ಲಿ ಎಂದೂ ಕಾಣದ ನೋವನ್ನು ಕಂಡೆ. ದೊಡ್ಡ ಪಾಠ ಕಲಿತೆ, ನನ್ನ ಶತ್ರುಗಳಿಗೂ ಸಹ ಆ ಕಷ್ಟ ಬೇಡ ಎಂದು ಪ್ರಾರ್ಥನೆ ಮಾಡುತ್ತೇನೆ. ಇನ್ನೂ ಈ ಬಗ್ಗೆ ನಾನು ಪ್ರತಿಯೊಂದು ಕ್ಷಣವನ್ನು ಬರೆಯುತ್ತಿದೆ. ಇದನ್ನು ಪುಸ್ತಕ ಮಾಡಲು ತೀರ್ಮಾನಿಸಿದ್ದೇನೆ. ಓದಲು ಇದು ತುಂಬಾ ಆಸಕ್ತಿ ಹಾಗೂ ನೂರಕ್ಕೆ ನೂರರಷ್ಟು ಸತ್ಯ ಇರುತ್ತದೆ. ನಾನು ಇಷ್ಟು ದಿನಗಳ ಕಾಲ ಮೌನ ಆಗಿದ್ದೇನೆ ಎಂದರೇ ಅದಕ್ಕೆ ಒಂದು ಕಾರಣವಿದೆ. ಅದು ಶೀಘ್ರದಲ್ಲೇ ಹೊರಬರಲಿದೆ ಎಂದು ಹೇಳಿದ್ದಾರೆ. ಇನ್ನೂ ಆಕೆಯ ಈ ಪುಸ್ತಕ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top