Film News

ಮೆಗಾ ಡಾಟರ್ ನಿಹಾರಿಕಾಗೆ ಎರಡನೇ ಮದುವೆಯಂತೆ, ಓರ್ವ ನಟನೊಂದಿಗೆ ಮದುವೆ ಫಿಕ್ಸ್ ಮಾಡಿದ್ದಾರಂಯತೆ?

ಇತ್ತೀಚಿಗೆ ಕೆಲವು ದಿನಗಳಿಂದ ನಿಹಾರಿಕಾ ಕೊಣಿದೆಲಾ ಹಾಗೂ ಚೈತನ್ಯ ಜೊನ್ನಲಗಡ್ಡ ನಡುವೆ ವಿಬೇದಗಳು ಸೃಷ್ಟಿಯಾಗಿದೆ. ಇಬ್ಬರೂ ಬೇರೆಯಾಗಲಿದ್ದಾರೆ ಎಂಬ ರೂಮರ್‍ ಜೋರಾಗಿಯೇ ಹರಿದಾಡುತ್ತಿದೆ. ನಿಹಾರಿಕಾ ಹಾಗೂ ಚೈತನ್ಯ ಜೊತೆಗಿನ ವಿಚ್ಚೇದನದ ರೂಮರ್‍ ಬಳಿಕ ಆಕೆಯ ಸೋಷಿಯಲ್ ಮಿಡಿಯಾ ಪೋಸ್ಟ್ ಗಳ ಮೇಲೆಯೇ ಎಲ್ಲರ ದೃಷ್ಟಿಯಿರುತ್ತದೆ. ಈ ಹಾದಿಯಲ್ಲೇ ಆಕೆ ಹಂಚಿಕೊಳ್ಳುವ ಪೊಸ್ಟ್ ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತದೆ. ಇದೀಗ ಆಕೆಯ ಬಗ್ಗೆ ಮತ್ತೊಂದು ರೂಮರ್‍ ಕೇಳಿಬರುತ್ತಿದೆ. ಇದೀಗ ನಿಹಾರಿಕಾಗೆ ಎರಡನೇ ಮದುವೆ ಮಾಡಲು ಅವರ ಕುಟುಂಬದವರು ಸಿದ್ದವಾಗಿದ್ದಾರೆ ಎಂಬ ಸುದ್ದಿಯೊಂದು ಇದೀಗ ಹರಿದಾಡುತ್ತಿದೆ.

ಮೆಗಾ ಕುಟುಂಬದಿಂದ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಏಕೈಕ ನಟಿ ನಿಹಾರಿಕಾ ಹಿರೋಯಿನ್ ಆಗಿ ಖ್ಯಾತಿ ಪಡೆದುಕೊಳ್ಳಲು ತುಂಬಾನೆ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಮದುವೆಗೂ ಮುಂಚೆಯೇ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಯಾವುದೇ ಸಿನೆಮಾ ಸಕ್ಸಸ್ ಕಾಣಲಿಲ್ಲ. ಸದ್ಯ ಆಕೆ ನಿರ್ಮಾಪಕಿಯಾಗಿ ಹಾಗೂ ವೆಬ್ ಸಿರೀಸ್ ಗಳತ್ತ ಮುಖ ಮಾಡಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ಆಫರ್‍ ಗಳಿಗಾಗಿ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಇನ್ನೂ ಕೆಲವು ದಿನಗಳಿಂದ ನಿಹಾರಿಕಾ ವೈಯುಕ್ತಿಕ ಕಾರಣಗಳಿಂದ ತುಂಬಾನೆ ಸುದ್ದಿಯಾಗುತ್ತಿದ್ದಾರೆ. ನಿಹಾರಿಕಾ ಹಾಗೂ ಚೈತನ್ಯ ಜೊನ್ನಲಗಡ್ಡ ನಡುವೆ ವಿಬೇದಗಳು ಉಂಟಾಗಿ ಇಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡುತ್ತಿವೆ. ಈ ಬಗ್ಗೆ ಇನ್ನೂ ಮೆಗಾ ಕುಟುಂಬದಿಂದ ಯಾವುದೇ ಸ್ಪಷ್ಟನೆ ಬಾರದ ಕಾರಣ ರೂಮರ್‍ ಗಳು ಹರಿದಾಡುವುದು ನಿಂತಿಲ್ಲ.

ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದ್ದು, ನಿಹಾರಿಕಾಗೆ ಮತ್ತೆ ಮದುವೆ ಮಾಡಲು ಪ್ಲಾನ್ ಮಾಡಿದ್ದಾರಂತೆ. ನಿಹಾರಿಕಾ ತಂದೆ ನಾಗಬಾಬು ಆಕೆಗೆ ಎರಡನೇ ಮದುವೆ ಮಾಡಲು ಪ್ಲಾನ್ ಮಾಡಿದ್ದಾರಂತೆ. ಆತ ಬೇರೆ ಯಾರೂ ಅಲ್ಲ ನಿಹಾರಿಕಾ ಬಾವ ನಟ ಸಾಯಿ ಧರಮ್ ತೇಜ್ ಜೊತೆಗೆ ನಿಹಾರಿಕಾಗೆ ಎರಡನೇ ಮದುವೆ ಮಾಡಲಿದ್ದಾರಂತೆ. ಇನ್ನೂ ಈ ಹಿಂದೆಯೇ ನಿಹಾರಿಕಾ ಹಾಗೂ ಸಾಯಿ ಧರಮ್ ತೇಜ್ ಗೆ ಮದುವೆಯಾಗಬೇಕಿತ್ತು. ಆದರೆ ಸಾಯಿ ಧರಮ್ ತೇಜ್ ಗೆ ನಿಹಾರಿಕಾ ಮೇಲೆ ಅಂತಹ ಉದ್ದೇಶವಿಲ್ಲದ ಕಾರಣ ನಾಗಬಾಬು ಚೈನತ್ಯ ಜೊತೆಗೆ ನಿಹಾರಿಕಾ ಮದುವೆ ಮಾಡಿದರು. ಇದೀಗ ನಿಹಾರಿಕಾ ಹಾಗೂ ನಾಗಚೈತನ್ಯ ನಡುವೆ ವಿಬೇದಗಳು ಉಂಟಾಗಿ ಬೇರೆಯಾಗಲಿದ್ದರೆ ಎಂದು ಹೇಳಲಾಗುತ್ತಿದ್ದು, ಇದೀಗ ಮತ್ತೆ ಸಾಯಿ ಧರಮ್ ತೇಜ್ ಜೊತೆಗೆ ಮದುವೆ ಮಾಡಲು ಪ್ಲಾನ್ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಇನ್ನೂ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ನಿಹ ಇದೆ ಎಂಬುದು ಮಾತ್ರ ತಿಳಿದಿಲ್ಲ. ಆದರೆ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಕೆಲವರಂತೂ ಮೆಗಾ ಕುಟುಂಬ ಎಂದರೇ ಆಗದವರು ಈ ರೀತಿಯ ರೂಮರ್‍ ಗಳನ್ನು ಹರಿಬಿಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನೂ ನಿಹಾರಿಕಾ ಮತ್ತೆ ಸಿನೆಮಾಗಳಲ್ಲಿ ನಟಿಸಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಇನ್ನೂ ಆಕೆ ಇತ್ತಿಚಿಗೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಸಹ ಮಾಡುತ್ತಿದ್ದಾರೆ.

Most Popular

To Top