ಸೀರೆಯಲ್ಲಿ ಬೊಂಬೆಯಂತೆ ಮುದ್ದಾಗಿ ಕಾಣಿಸಿಕೊಂಡ ಪ್ರಣಿತಾ ಸುಭಾಷ್, ಕೋಹಿನೂರ್ ಡೈಮಂಡ್ ಇಲ್ಲೇ ಇದೆ ಎಂದ ಫ್ಯಾನ್ಸ್…!

ಸ್ಯಾಂಡಲ್ ವುಡ್ ಯಂಗ್ ಬ್ಯೂಟಿ ಪ್ರಣಿತಾ ಸುಭಾಷ್ ಕಳೆದೆರಡು ವರ್ಷಗಳ ಹಿಂದೆಯಷ್ಟೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಮದುವೆ, ಮಗು ಕಾರಣದಿಂದ ಸಿನೆಮಾಗಳಿಂದ ದೂರವುಳಿದ ಈಕೆ ಇದೀಗ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಆಕೆ ಸಿನೆಮಾಗಳಿಂದ ದೂರ ಉಳಿದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲೇ ಇದ್ದರು. ಇದೀಗ ಮತ್ತೆ ಆಕೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಆಗಿದ್ದಾರೆ. ಇದೀಗ ಪ್ರಣಿತಾ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದು, ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಯಂಗ್ ಅಂಡ್ ಗ್ಲಾಮರಸ್ ಬ್ಯೂಟಿ ಪ್ರಣಿತಾ ಸುಭಾಷ್ ಸ್ಯಾಂಡಲ್ ವುಡ್ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡರು. ಬಳಿಕ ತೆಲುಗು ಸಿನೆಮಾಗಳಲ್ಲಿ ಸಹ ನಟಿಸಿ ಆಕೆ ತೆಲುಗಿನಲ್ಲೂ ಅಭಿಮಾನಿಗಳನ್ನು ಪಡೆದುಕೊಂಡರು. ಬಾವ ಎಂಬ ತೆಲುಗು ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಅತ್ತಾರಿಂಟಿಕಿ ದಾರೇದಿ ಎಂಬ ಸಿನೆಮಾದ ಮೂಲಕ ಭಾರಿ ಫೇಮಸ್ ಆದರು. ತೆಲುಗಿನಲ್ಲೂ ಸಹ ಒಳ್ಳೆಯ ಅವಕಾಶಗಳನ್ನು ಪಡೆದುಕೊಂಡರು. ಕಳೆದ 2021 ರಲ್ಲಿ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜ್ ಎಂಬಾತನನ್ನು ವಿವಾಹವಾದರು. ಇವರ ಮದುವೆ ಸೀಕ್ರೇಟ್ ಆಗಿಯೇ ನಡೆದಿತ್ತು. ಕಳೆದ ವರ್ಷ ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಇದೀಗ ತಾಯಿಯಾಗಿ, ನಟಿಯಾಗಿಯೂ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಇನ್ನೂ ಪತಿಯ ಅನುಮತಿಯೊಂದಿಗೆ ಮತ್ತೆ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

ಇನ್ನೂ ನಟಿ ಪ್ರಣಿತಾ ಸುಭಾಷ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ಪ್ರಣಿತಾ ಸದ್ದು ಮಾಡುತ್ತಿರುತ್ತಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಆಕೆ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಮತ್ತೊಮ್ಮೆ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸೀರೆಯಲ್ಲಿ ಆಕೆ ಕೋಹಿನೂರ್‍ ವಜ್ರದಂತೆ ಮಿಂಚಿದ್ದಾರೆ. ಆಕೆಯ ಮುದ್ದಾದ ನೋಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಆಕರ್ಷಕವಾದ ಆಭರಣಗಳನ್ನು ಧರಿಸಿದ್ದ ಮತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಲೈಕ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ನಟಿ ಪ್ರಣಿತಾ ಸುಭಾಷ್ ಟ್ರೆಡಿಷನಲ್ ಲುಕ್ಸ್ ನೋಡಿ ಫಿದಾ ಅಭಿಮಾನಿಗಳು ಕೋಹಿನೂರ್‍ ಡೈಮಂಡ್ ಬೇರೆಲ್ಲೂ ಇಲ್ಲೂ ಇಲ್ಲೇ ಇದೆ, ನೀವು ಸದಾ ಇದೇ ರೀತಿಯಲ್ಲಿ ಕಾಣಿಸಿಕೊಳ್ಳಬೇಕೆಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಪ್ರಣಿತಾ ಮಲಯಾಳಂ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ದಿಲೀಪ್ ಕುಮಾರ್‍ ರವರ 148 ಸಿನೆಮಾದ ಮೂಲಕ ಮಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.