ಸಂಪ್ರದಾಯಬದ್ದವಾಗಿ ನಡೆದ ಅಮಲಾಪಾಲ್ ಸೀಮಂತ ಕಾರ್ಯಕ್ರಮ, ಟ್ರೆಡಿಷನಲ್ ಲುಕ್ಸ್ ನಲ್ಲಿ ಮುದ್ದಾಗಿ ಕಾಣಿಸಿದ ಅಮಲಾಪಾಲ್….!

Follow Us :

ಡಸ್ಕಿ ಬ್ಯೂಟಿ ಅಮಲಾಪಾಲ್ ಸಿನಿರಂಗದಲ್ಲಿ ವಿಭಿನ್ನ ನಟಿಯೆಂದೇ ಹೇಳಬಹುದು. ಪಾತ್ರ ಡಿಮ್ಯಾಂಡ್ ಮಾಡಿದ್ರೆ ಆಕೆ ನ್ಯೂಡ್ ಆಗಿ ಸಹ ನಟಿಸಲು ಸಿದ್ದವಾಗಿರುತ್ತಾರೆ. ಅದಕ್ಕೆ ಆಮೆ ಎಂಬ ಸಿನೆಮಾ ಉತ್ತಮ ಉದಾಹರಣೆ ಎನ್ನಬಹುದು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಎರಡನೇ ಮದುವೆಯಾಗಿ ಗರ್ಭಿಣಿಯಾಗಿರುವ ಸುದ್ದಿಯನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದರು. ಬಳಿಕ ಬ್ಯಾಕ್ ಟು ಬ್ಯಾಖ್ ಬೇಬಿ ಬಂಪ್ ಪೊಟೋಸ್ ಮೂಲಕ ಸದ್ದು ಮಾಡುತ್ತಿದ್ದರು. ಇದೀಗ ಆಕೆಯ ಸೀಮಂತ ಕಾರ್ಯಕ್ರಮದ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟಿ ಅಮಲಾಪಾಲ್ ಕಳೆದ 2014ರಲ್ಲಿ ನಿರ್ದೇಶಕ ಎ.ಎಲ್.ವಿಜಯ್ ಎಂಬಾತನೊಂದಿಗೆ ವಿವಾಹವಾಗಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಇಬ್ಬರೂ ವಿಚ್ಚೇದನ ಪಡೆದುಕೊಂಡು ಬೇರೆಯಾದರು. ಬಳಿಕ ಅಮಲಾಪಾಲ್ ಸುಮಾರು ವರ್ಷಗಳ ಕಾಲ ಒಂಟಿಯಾಗಿಯೇ ಜೀವನ ಸಾಗಿಸಿದ್ದರು. ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರು. ಕಳೆದ ನವೆಂಬರ್‍ ಮಾಹೆಯಲ್ಲಿ ಅಮಲಾಪಾಲ್ ಹಾಗೂ ಜಗತ್ ದೇಸಾಯಿ ಮದುವೆ ನಡೆಯಿತು. ಕೇರಳದ ಕೊಚ್ಚಿಯಲ್ಲಿ ಈ ಜೋಡಿಯ ಮದುವೆ ನೆರವೇರಿತು. ಸುಮಾರು ದಿನಗಳ ಕಾಲ ಒಂಟಿಯಾಗಿದ್ದ ಅಮಲಾಪಾಲ್ ತನ್ನ ಬಾಯ್ ಫ್ರೆಂಡ್ ಜಗತ್ ದೇಸಾಯಿ ಎಂಬಾತನನ್ನು ವಿವಾಹವಾದರು. ಮದುವೆಯಾದ ಎರಡು ತಿಂಗಳಲ್ಲೇ ಆಕೆ ಗರ್ಭಿಣಿ ಎಂಬ ಸುದ್ದಿಯನ್ನು ಪ್ರಕಟಿಸಿದ್ದರು. ಜೊತೆಗೆ ಆಕೆ ಹಂಚಿಕೊಂಡ ಬೇಬಿ ಬಂಪ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಇನ್ನೂ ಇತ್ತೀಚಿಗೆ ನಟಿ ಅಮಲಾಪಾಲ್ ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತ್ತು. ಈ ಪೊಟೋಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಅಮಲಾಪಾಲ್ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಂಪ್ರದಾಯಬದ್ದವಾಗಿ ಸೀರೆಯನ್ನು ಧರಿಸಿ ಬ್ಯೂಟಿಪುಲ್ ಆಗಿ ಪೋಸ್ ಕೊಟ್ಟಿದ್ದಾರೆ. ದಂಪತಿ ಇಬ್ಬರೂ ಮೇಡ್ ಫಾರ್‍ ಈಚ್ ಅದರ್‍ ಎಂಬಂತೆ ತುಂಬಾ ಕ್ಯೂಟ್ ಆಗಿದ್ದಾರೆ. ಇನ್ನೂ ಅಮಲಾಪಾಲ್ ಸೀಮಂತ ಕಾರ್ಯಕ್ರಮದ ಪೊಟೋಗಳು ನೋಡಿದ ಅಭಿಮಾನಿಗಳು ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಈ ಹಿಂದೆ ಮಾಡ್ರನ್ ಡ್ರೆಸ್ ಗಳಲ್ಲಿ ಬೇಬಿ ಬಂಪ್ ಪೊಟೋಶೂಟ್ಸ್ ಹಂಚಿಕೊಂಡ ಅಮಲಾಪಾಲ್ ಇದೀಗ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಅಮಲಾಪಾಲ್ ಕೊನೆಯದಾಗಿ ಆಡು ಜೀವಿತಂ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.