News

ಬಿಜೆಪಿ ಅಭ್ಯರ್ಥಿ ಯದುವೀರ್ ಬಗ್ಗೆ ವ್ಯಂಗವಾಡಿದ ಯತೀಂದ್ರ, ಅವರಿಗೆ ಜನರ ಮಧ್ಯೆ ಇದ್ದು ಅಭ್ಯಾಸವಿಲ್ಲ ಎಂದ ಸಿದ್ದು ಪುತ್ರ….!

ದೇಶದಲ್ಲಿ ಲೋಕಸಭಾ ಚುನಾವಣಾ ಅಬ್ಬರ ಜೋರಾಗಿದ್ದು, ಕರ್ನಾಟಕದಲ್ಲಿ ಕೆಲವೊಂದು ಪ್ರಮುಖ ಕ್ಷೇತ್ರಗಳಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ. ಮೈಸೂರು ಕ್ಷೇತ್ರ ಸಹ ತುಂಬಾ ಪ್ರತಿಷ್ಟಾತ್ಮಕ ಕಣ ಎಂದೇ ಬಿಂಬಿಸಲಾಗುತ್ತಿದ್ದು, ಬಿಜೆಪಿ ಪಕ್ಷದಿಂದ ಮೈಸೂರು ರಾಜಮನೆಯನದ ಯಧುವೀರ್‍ ಕೃಷ್ಣದತ್ತ ಚಾಮರಾಯ್ ಒಡೆಯರ್‍ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ಬಗ್ಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ವ್ಯಂಗವಾಡಿದ್ದಾರೆ. ಅವರಿಗೆ ಜನರ ಮಧ್ಯೆ ಇದ್ದು ಅಭ್ಯಾಸವಿಲ್ಲ ಎಂದು ಟೀಕಿಸಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳು ದೊಡ್ಡ ಮಟ್ಟದಲ್ಲೇ ಪ್ರಚಾರ ನಡೆಸುತ್ತಿವೆ. ಕಾಂಗ್ರೇಸ್ ಪಕ್ಷದ ಪರ ಸಿದ್ದರಾಮಯ್ಯ ಪುತ್ರ ಯತೀಂದ್ರ ಮೈಸೂರು ಭಾಗದಲ್ಲಿ ಮಿಂಚಿನ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ಭಾಗವಾಗಿ  ಬಿಜೆಪಿ ಅಭ್ಯರ್ಥಿಯನ್ನು ಟೀಕಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜ ಮನೆತನಕ್ಕೆ ಸೇರಿದವರು. ದಂತದ ಗೋಪುರದಲ್ಲಿ ಇದ್ದಂತಹವರು ಅವರಿಗೆ ಜನರ ಮಧ್ಯೆ ಇರೋದು ಗೊತ್ತಿಲ್ಲ. ಅವರಿಗೆ ಜನರ ಸಮಸ್ಯೆಗಳು ಏನು ಅಂತಾ ಗೊತ್ತಿಲ್ಲ. ನೀವ್ಯಾರು ಅರಮನೆ ಮುಂದೆ ಹೋಗಿ ನಿಂತುಕೊಳ್ಳೋಕೆ ಆಗೊಲ್ಲ. ಅವರ ಕಾರ್ಯಕರ್ತರೇ ಹೋಗಿ ಭೇಟಿ ಮಾಡೋಕೆ ಆಗಲ್ಲ, ಇನ್ನೂ ಜನಸಾಮಾನ್ಯರು ಹೇಗೆ ಭೇಟಿ ಮಾಡೋಕೆ ಆಗುತ್ತೆ ಎಂದು ಹೇಳಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಯತೀಂದ್ರ ಕೇಂದ್ರ ನಾಯಕ ಅಮಿತ್ ಶಾ ವಿರುದ್ದ ಸಹ ಮಾತನಾಡಿದ್ದರು. ಅಮಿತ್ ಶಾ ಓರ್ವ ರೌಡಿ, ಗೂಂಡ ಎಂದು ಹೇಳಿ ಬಿಜೆಪಿ ನಾಯಕರ ಆಕ್ರೋಷಕ್ಕೆ ಗುರಿಯಾಗಿದ್ದರು. ಯತೀಂದ್ರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದೂ ಸಹ ಬಿಜೆಪಿ ನಾಯಕರು ಆಗ್ರಹಿಸಿದ್ದರು. ಬಳಿಕ ಯತೀಂದ್ರ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದರು. ಇದೀಗ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯ ಬಗ್ಗೆ ಮಾತನಾಡಿದ್ದಾರೆ. ಇನ್ನೂ ಮೈಸೂರು ಕ್ಷೇತ್ರವನ್ನು ಕಾಂಗ್ರೇಸ್ ಪಕ್ಷ ತುಂಬಾ ಪ್ರತಿಷ್ಟೆಯಾಗಿ ತೆಗೆದುಕೊಂಡಿದೆ ಎಂದೇ ಹೇಳಲಾಗುತ್ತಿದೆ. ಕಾಂಗ್ರೇಸ್ ಪಕ್ಷದಿಂದ ಎಂ.ಲಕ್ಷ್ಮಣ್ ರವರು ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ.

Most Popular

To Top