ಕ್ಯೂಟ್ ಅಂಡ್ ಫನ್ನಿ ಲುಕ್ಸ್ ಕೊಟ್ಟ ಹಾಟ್ ಬ್ಯೂಟಿ ಪ್ರಣಿತಾ, ತಾಯಿಯಾದರೂ ಸಹ ಸಖತ್ ಹಾಟ್ ಆಗಿ ಪೋಸ್ ಕೊಟ್ಟ ಬ್ಯೂಟಿ….!

Follow Us :

ಚಂದನವನದ ಬಹುಬೇಡಿಕೆ ನಟಿ ಪ್ರಣಿತಾ ಸೌತ್ ಸಿನಿರಂಗದ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷವೇ ಆಕೆ ಉದ್ಯಮಿ ನಿತನ್ ರಾಜ್ ಎಂಬಾತನೊಂದಿಗೆ ಮದುವೆಯಾದರು. ಮದುವೆ, ಪ್ರೆಗೆನ್ಸಿ ಕಾರಣದಿಂದ ಸಿನೆಮಾಗಳಿಂದ ದೂರವುಳಿದ ಈಕೆ ಇದೀಗ ಸಿನೆಮಾಗಳತ್ತ ಮುಖ ಮಾಡಿದ್ದು, ಪುಲ್ ಬ್ಯುಸಿಯಾಗಿದ್ದಾರೆ. ಇನ್ನೂ ಸಿನೆಮಾಗಳ ಜೊತೆಗೆ ಆಕೆ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಕನ್ನಡ ಸಿನಿರಂಗದ ನಟಿ ಪ್ರಣಿತಾ ಸುಭಾಷ್ ತೆಲುಗಿನಲ್ಲೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಿ‌ಟ್ಟಿಸಿಕೊಂಡಿದ್ದಾರೆ. ಸೌಂದರ್ಯ, ನಟನೆಯ ಮೂಲಕ ಅನೇಕ ನಟರೊಂದಿಗೆ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ನಿತಿನ್ ರಾಜು ಎಂಬ ಉದ್ಯಮಿಯನ್ನು ಮದುವೆಯಾದರು. 2021ರಲ್ಲಿ ಮದುವೆಯಾದ ಈಕೆ 2022 ಜೂನ್ 10 ರಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮಗು ಆದ ಬಳಿಕ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ತನ್ನ ಅಭಿಮಾನಿಗಳಿಗಾಗಿ ತನ್ನ ಮಗಳೊಂದಿಗೆ ಅನೇಕ ವಿಡಿಯೋಗಳು, ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದರು. ಇನ್ನೂ ಮದುವೆಯಾದರೂ ಸಹ ಆಕೆ ಹಾಟ್ ನೆಸ್ ಮಾತ್ರ ಏನು ಕಡಿಮೆಯಾಗಿಲ್ಲ ಎಂಬುದನ್ನು ಆಕೆಯ ಪೊಟೋಗಳನ್ನು ನೋಡಿದರೇ ತಿಳಿಯಬಹುದಾಗಿದೆ.

ನಟಿ ಪ್ರಣಿತಾ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬ್ಯುಸಿಯಾಗುತ್ತಿದ್ದಾರೆ. ಇನ್ನೂ ಪ್ರಣಿತಾ ಸದ್ಯ ತನ್ನ ಫ್ಯಾಮಿಲಿಯೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಪತಿಯನ್ನು ಮಗಳನ್ನು ನೋಡಿಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗಾಗಿ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಕ್ಯಾಜುವಲ್ ಡ್ರೆಸ್ ಧರಿಸಿ ಕೆಲವೊಂದು ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಕ್ಯಾಜುವಲ್ ಡ್ರೆಸ್ ನಲ್ಲೂ ಸಹ ಪ್ರಣಿತಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕೆ ಅಭಿಮಾನಿಗಳು ಕ್ರೇಜಿ ಅಂಡ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಸದ್ಯ ಸೆಕೆಂಡ್  ಇನ್ನಿಂಗ್ಸ್ ಶುರು ಮಾಡಿರುವ ಪ್ರಣಿತಾ, ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ  ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಆಕೆ ಯಾವ ಸಿನೆಮಾಗಳ ಮೂಲಕ ಮತ್ತೆ ಸದ್ದು ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಆಕೆ ಕನ್ನಡದ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.