ಶರ್ವಾನಂದ್ ನಿಶ್ಚಿತಾರ್ಥದಲ್ಲಿ ಸಿದ್ದಾರ್ಥ್-ಅದಿತಿ ಸಖತ್ ಸದ್ದು, ಲವ್ ರೂಮರ್ ಬಗ್ಗೆ ಮತ್ತೊಂದು ಸುಳಿವಿರಬಹುದಾ?

Follow Us :

ಸಿನಿರಂಗದಲ್ಲಿ ಲವ್, ಮದುವೆ, ಬ್ರೇಕಪ್ ನಡೆಯುತ್ತಲೇ ಇರುತ್ತವೆ. ಜೊತೆಗೆ ಲವ್ ಅಪೈರ್‍ ಗಳ ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ. ಈ ಹಾದಿಯಲ್ಲೇ ಸುಮಾರು ದಿನಗಳಿಂದ ಸೌತ್ ಸಿನಿರಂಗದ ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ ಸಮಾರಂಭದಲ್ಲಿ ಸಿದ್ದಾರ್ಥ್ ಹಾಗೂ ಅದಿತಿ ಜೋಡಿಯಾಗಿ ಕಾಣಿಸಿಕೊಂಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇತ್ತೀಚಿಗೆ ನಟಿ ಸಿದ್ದಾರ್ಥ್ ಹಾಗೂ ಅದಿತಿ ರವರ ಬಗ್ಗೆ ಅನೇಕ ರೂಮರ್‍ ಗಳು ಹರಿದಾಡುತ್ತಿವೆ. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ, ಸದ್ಯ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬೆಲ್ಲಾ ಸುದ್ದಿಗಳು ಕೇಳಿಬರುತ್ತಲೇ ಇದೆ. ಲವರ್‍ ಬಾಯ್ ಎಂದು ಖ್ಯಾತಿ ಪಡೆದುಕೊಂಡ ನಟ ಸಿದ್ದಾರ್ಥ್ ಹೈದರಾಬಾದ್ ಬ್ಯೂಟಿ ಅದಿತಿ ರಾವ್ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿಗೆ ಇದೀಗ ಮತ್ತೊಂದು ಸಾಕ್ಷಿ ಸಿಕ್ಕಿದೆ ಎನ್ನಲಾಗುತ್ತಿದೆ. ಈ ಹಿಂದೆ ಮುಂಬೈ ಹೋಟೆಲ್ ನಲ್ಲಿ ಇಬ್ಬರೂ ಕ್ಯಾಮೆರಾ ಕಣ್ಣೀಗೆ ಬಿದಿದ್ದರು. ಜೊತೆಗೆ ಅದಿತಿ ಹುಟ್ಟುಹಬ್ಬಕ್ಕೆ ಸಿದ್ದಾರ್ಥ್ ವಿಶೇಷವಾಗಿ ಶುಭ ಕೋರಿದ್ದರು. ಇನ್ನೂ ರೂಮರ್‍ ಗಳು ಕೇಳಿಬರುತ್ತಿದ್ದರೂ ಸಹ ಈ ಬಗ್ಗೆ ಇವರಿಬ್ಬರಲ್ಲಿ ಯಾರೂ ಸಹ ಸ್ಪಂಧಿಸಿಲ್ಲ. ಇದೀಗ ಮತ್ತೊಂದು ಸುದ್ದಿ ಈ ಜೋಡಿಯ ಬಗ್ಗೆ ಹರಿದಾಡುತ್ತಿದೆ.

ಇನ್ನೂ ಜ.26 ರಂದು ನಟ ಶರ್ವಾನಂದ್ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮಕ್ಕೆ ನಟ ರಾಮ್ ಚರಣ್, ಉಪಾಸನಾ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಹಾಜರಾಗಿದ್ದರು. ಇದೇ ಸಮಾರಂಭಕ್ಕೆ ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಸಹ ಹಾಜರಾಗಿದ್ದರು. ಈಗಾಗಲೇ ಅವರಿಬ್ಬರ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಗಳು ಹರಿದಾಡುತ್ತಿದ್ದರೆ. ಇದೀಗ ಶರ್ವಾನಂದ್  ಹಾಗೂ ರಕ್ಷಿತಾ ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕೆ ಹಾಜರಾಗಿರುವ ಸಿದ್ದಾರ್ಥ್ ಹಾಗೂ ಅದಿತಿ ಇಬ್ಬರೂ ಜೋಡಿಯಂತೆ ಕಾಣಿಸಿಕೊಂಡಿದ್ದಾರೆ. ಇನ್ನೂ ಅವರಿಬ್ಬರು ಕಾಣಿಸಿಕೊಂಡ ರೀತಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ ಎನ್ನಲಾಗುತ್ತಿದೆ. ಸದ್ಯ ಅವರಿಬ್ಬರು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅವರಿಬ್ಬರ ನಡುವೆ ಇರುವಂತಹ ಅಫೈರ್‍ ನಿಜ ಇರಬಹುದೇ ಎಂದು ಶಾಕ್ ಆಗುತ್ತಿದ್ದಾರೆ ಎಂದು ಹೇಳಲಾಗಿದೆ.

ನಟ ಸಿದ್ದಾರ್ಥ್ ಈ ಹಿಂದೆ ಅನೇಕ ನಟಿಯರೊಂದಿಗೆ ಡೇಟಿಂಗ್ ನಡೆಸಿದ್ದರು ಎಂಬ ಸುದ್ದಿಗಳು ಸಹ ಕೇಳಿಬಂದಿತ್ತು. ಶ್ರುತಿ ಹಾಸನ್, ಸಮಂತಾ ಜೊತೆಗೆ ಡೇಟಿಂಗ್ ನಡೆಸಿದ್ದರು. ಕೆಲವೊಂದು ಕಾರಣಗಳಿಂದ ಅವರು ಬೇರೆಯಾದರು. ಇದೀಗ ಮಹಾಸಮುದ್ರಂ ಸಿನೆಮಾದ ಬಳಿಕ ಸಿದ್ದಾರ್ಥ್ ಹಾಗೂ ಅದಿತಿ ನಡುವೆ ಪ್ರೇಮಾಂಕುರ ಏರ್ಪಟ್ಟಿದೆ ಎಂಬ ರೂಮರ್‍ ಹುಟ್ಟಿಕೊಂಡಿದೆ. ಇದೀಗ ಅವರಿಬ್ಬರೂ ಶರ್ವಾನಂದ್ ನಿಶ್ಚಿತಾರ್ಥದಲ್ಲಿ ಕಾಣಿಸಿಕೊಂಡಿದ್ದು ರೂಮರ್‍ ಗಳಿಗೆ ಮತಷ್ಟು ಬಲ ಬಂದಂತಾಗಿದೆ.