Film News

ನಾನು ಸಂತೋಷವಾಗಿರುವುದು ನನ್ನ ಮಗನಿಗಾಗಿಯೇ ಎಂದ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್….!

ಕನ್ನಡ ಸಿನಿರಂಗದ ಸ್ಟಾರ್‍ ನಟರಾಗಿದ್ದ ಚಿರಂಜೀವಿ ಸರ್ಜಾ ದುರ್ಮರಣದ ನೋವನ್ನು ಆತನ ಪತ್ನಿ ಮೇಘನಾ ರಾಜ್ ತನ್ನ ಮಗನ ಮೂಲಕ ಮರೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಸಿನೆಮಾಗಳಲ್ಲಿ ಸಹ ಬ್ಯುಸಿಯಾಗಿದ್ದಾರೆ. ಜೊತೆಗೆ ತನ್ನ ಮಗ ರಾಯನ್ ಜೊತೆಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಸಿನೆಮಾಗಳ ಜೊತೆ ಜೊತೆಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ತತ್ಸಮ ತದ್ಭವ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಆ ಮೂಲಕ ಸಿನಿರಂಗಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ.

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಸದ್ಯ ತತ್ಸಮ ತದ್ಭವ ಸಿನೆಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಸಿನೆಮಾ ಪನ್ನಗಾಭರಣ ನಿರ್ದೇಶನ ಮಾಡುತ್ತಿದ್ದು, ಪ್ರಜ್ವಲ್ ದೇವರಾಜ್ ಹಿರೋ ಆಗಿ ನಟಿಸುತ್ತಿದ್ದಾರೆ. ಪ್ರಜ್ವಲ್ ರವರಿಗೆ ಜೋಡಿಯಾಗಿ ಮೇಘನಾ ರಾಜ್ ನಟಿಸಿದ್ದಾರೆ. ಇನ್ನೂ ಈ ಸಿನೆಮಾದ ಪ್ರಚಾರದ ನಡುವೆ ಆಕೆ ಮಗನ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನೆಮಾ ಹಾಗೂ ನನ್ನ ಮಗ ರಾಯನ್ ನ್ನು ನೋಡಿಕೊಳ್ಳುವುದು ತುಂಬಾನೆ ಕಷ್ಟ. ತಾಯಿಯಾಗಿರುವುದು ದೊಡ್ಡ ಕೆಲಸ ಹಾಗೂ ಕಷ್ಟದ ಕೆಲಸ ಸಹ. ಇದೀಗ ನಾನು ಸಿನೆಮಾ ಹಾಗೂ ಮಗನ ಲಾಲನೆಯನ್ನು ನಿಭಾಯಿಸಿಕೊಂಡು ಬರುತ್ತಿದ್ದೆನೆ. ತನ್ನ ತಾಯಿ ಹಾಗೂ ಮನೆಯಲ್ಲಿ ಸಹಾಯ ಮಾಡುವವರು ಇದ್ದಾರೆ. ಅವರು ಸಹ ನೋಡಿಕೊಳ್ಳುತ್ತಾರೆ. ನಾನೊಬ್ಬಳೆ ನೋಡಿಕೊಳ್ಳಳು ಆಗುವುದಿಲ್ಲ. ಇನ್ನೂ ಅದೆಷ್ಟೊ ಮಂದಿ ಯಾವುದೇ ಸಹಾಯವಿಲ್ಲದೆ ಮನೆ, ಮಕ್ಕಳು ಜೊತೆಗೆ ಕೆಲಸ ಸಹ ಮಾಡುತ್ತಿರುತ್ತಾರೆ ಅಂತವರನ್ನು ನೋಡಿ ನಾನು ಸಹ ಮಾಡಬಲ್ಲೆ ಎಂಬ ಮನಸ್ಥಿತಿಗೆ ಬಂದಿದ್ದೇನೆ ಎಂದಿದ್ದಾರೆ.

ಇನ್ನೂ ಅನೇಕರು ರಾಯನ್ ಸಿನೆಮಾಗಳಲ್ಲಿ ನಟಿಸುತ್ತಾರಾ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಮೊದಲು ರಾಯನ್ ಶಾಲೆಗೆ ಹೋಗಿ ಕಲಿಯಲಿ. ಬಳಿಕ ಸಿನೆಮಾಗಳಲ್ಲಿ ನಟಿಸುವ ಬಗ್ಗೆ ಅವನಿಷ್ಟ. ಇನ್ನೂ ಜೀವನ ಉತ್ತಮವಾಗಿ ಸಾಗುತ್ತಿದ್ದಾಗ ಆ ದೇವರಿಗೆ ಹೊಟ್ಟಿ ಉರಿಯಾಗಿ ಒಂದನ್ನು ಕಿತ್ತುಕೊಳ್ಳುತ್ತಾನೆ. ನನಗೆ ನನ್ನ ಮಗನ ಸಂತೋಷ ಮುಖ್ಯ. ರಾಯನ್ ಬೆಳೆಯುತ್ತಾ ಅವನ ದೃಷ್ಟಿಯಲ್ಲಿ ಅವನ ತಾಯಿ ಸಂತೋಷವಾಗಿರಬೇಕು. ಅವನ ಮುಂದೆ ನನ್ನ ಯಾವುದೇ ನೋವನ್ನು ಸಹ ವ್ಯಕ್ತಪಡಿಸುವುದಿಲ್ಲ. ನನಗೆ ಎಷ್ಟೇ ಕಷ್ಟ ಇದ್ದರೂ ಸಹ ನನ್ನ ತಂದೆ ತಾಯಿ ನನ್ನ ಮುಂದೆ ನೋವು ತೋರಿಸುವುದಿಲ್ಲ. ನಾನು ಹಾಗೆ ಬೆಳೆದಿರುವಾಗ ನಾನು ಸಹ ನನ್ನ ಮಗನನ್ನು ಅದೇ ರೀತಿ ಬೆಳೆಸುತ್ತೇನೆ. ನಾನು ಇರುವುದು ನನ್ನ ಮಗನಿಗಾಗಿ, ನನ್ನ ಮಾನಸಿಕ ನೆಮ್ಮದಿಗಾಗಿ ಮಾತ್ರ ನಗುತ್ತಿದ್ದೇನೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಕೆ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Most Popular

To Top