ತ್ರಿಷಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟ ಬೈಲ್ವಾನ್, ಆ ಇಬ್ಬರು ನಟರಿಂದ ಮದುವೆ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರಂತೆ ತ್ರಿಷಾ…..!

ಸೌತ್ ಸಿನಿರಂಗದಲ್ಲಿ ತನ್ನದೇ ಆದ ಕ್ರೇಜ್ ಸಂಪಾದಿಸಿಕೊಂಡ ನಟಿ ತ್ರಿಷಾ ಅನೇಕ ಹಿಟ್ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಎಂತಹುದೇ ಪಾತ್ರವಾದರೂ ಆಕೆ ಆ ಪಾತ್ರಕ್ಕೆ ಜೀವ ತುಂಬಿ ನಟಿಸುವ ಮೂಲಕ ಹೈಲೈಟ್ ಆಗುತ್ತಿರುತ್ತಾರೆ.…

ಸೌತ್ ಸಿನಿರಂಗದಲ್ಲಿ ತನ್ನದೇ ಆದ ಕ್ರೇಜ್ ಸಂಪಾದಿಸಿಕೊಂಡ ನಟಿ ತ್ರಿಷಾ ಅನೇಕ ಹಿಟ್ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಎಂತಹುದೇ ಪಾತ್ರವಾದರೂ ಆಕೆ ಆ ಪಾತ್ರಕ್ಕೆ ಜೀವ ತುಂಬಿ ನಟಿಸುವ ಮೂಲಕ ಹೈಲೈಟ್ ಆಗುತ್ತಿರುತ್ತಾರೆ. ಸೌತ್ ಸಿನಿರಂಗದ ಅನೇಕ ಸ್ಟಾರ್‍ ನಟರ ಜೊತೆಗೆ ಈಕೆ ತೆರೆಯನ್ನು ಹಂಚಿಕೊಂಡಿದ್ದಾರೆ. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಸಹ ಆರಂಭಿಸಿದ್ದು, ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಬ್ಯುಸಿಯಾಗಿದ್ದಾರೆ. ಇದೀಗ ಅವರ ಬಗ್ಗೆ ನಟ ಕಂ ಯೂಟ್ಯೂಬರ್‍ ಬೈಲ್ವಾನ್ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಸೌತ್ ಸಿನಿರಂಗದ ಸೀನಿಯರ್‍ ಸ್ಟಾರ್‍ ನಟಿ ತ್ರಿಷಾ ಸದ್ಯ ಸೆಕೆಂಡ್ ಇ‌ನ್ನಿಂಗ್ಸ್ ನಲ್ಲೂ ಭಾರಿ ಆಫರ್‍ ಗಳ ಮೂಲಕ ಬ್ಯುಸಿಯಾಗಿದ್ದಾರೆ. ಆಕೆಯ ವಯಸ್ಸು 40 ದಾಟಿದರೂ ಸಹ ಇನ್ನೂ ಆಕೆ ಮದುವೆಯಾಗಿಲ್ಲ. ಈ ಹಿಂದೆ ಆಕೆಯ ಲವ್ ಫೈಲ್ ಆಗಿದೆ ಎಂದೂ ಸಹ ರೂಮರ್‍ ಗಳು ಕೇಳಿಬಂದಿವೆ. ಆಗಾಗ ಆಕೆಯ ಮದುವೆಯ ಬಗ್ಗೆ ಕೆಲವೊಂದು ಸುದ್ದಿಗಳು ಕೇಳಿಬರುತ್ತಿರುತ್ತದೆ. ಇದೀಗ ಆಕೆಯ ಬಗ್ಗೆ ನಟ ಕಂ ಯೂಟ್ಯೂಬರ್‍ ಬೈಲ್ವಾನ್ ರಂಗನಾಥನ್ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಆತನ ಹೇಳಿಕೆಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಬೈಲ್ವಾನ್ ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ.

ನಟಿ ತ್ರಿಷಾ ರವರ ವೈಯುಕ್ತಿಕ ಜೀವನದ ಬಗ್ಗೆ ನಟ ಬೈಲ್ವಾನ್ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಆಕೆ ಆ ಇಬ್ಬರು ನಟರ ಕಾರಣದಿಂದಲೇ ಮದುವೆಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರಂತೆ. ಆ ಇಬ್ಬರೂ ನಟರು ಯಾರು ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ತ್ರಿಷಾ ಇನ್ನೂ ಮದುವೆಯಾಗದೇ ಇರಲು ಮುಖ್ಯ ಕಾರಣ ಸಿಂಬು ಹಾಗೂ ರಾಣ ಅಂತೆ. ಆ ಇಬ್ಬರೂ ನಟರು ಆಕೆಯನ್ನು ಪ್ರೀತಿಸಿ ಮೋಸ ಮಾಡಿದ್ದಾರಂತೆ. ಆ ಕಾರಣದಿಂದಲೇ ತ್ರಿಷಾ ಪ್ರೀತಿ ಹಾಗೂ ಮದುವೆಯ ಮೇಲೂ ಸಹ ನಂಬಿಕೆ ಕಳೆದುಕೊಂಡು ಸಿಂಗಲ್ ಆಗಿಯೇ ಇದ್ದಾರಂತೆ ಎಂದು ಬೈಲ್ವಾನ್ ಹೇಳಿದ್ದಾರಂತೆ. ಇನ್ನೂ ಈ ಬಗ್ಗೆ ತಮಿಳಿನ ಕೆಲವೊಂದು ಮಾದ್ಯಮಗಳು ವರದಿ ಮಾಡಿದೆ ಎಂದು ತಿಳಿದು ಬಂದಿದೆ.

ಇನ್ನೂ ತ್ರಿಷಾ ತಮಿಳು ಸೇರಿದಂತೆ ತೆಲುಗು ಹಾಗೂ ಕನ್ನಡದಲ್ಲೂ ಸಹ ನಟಿಸಿದ್ದಾರೆ. ಖ್ಯಾತ ನಿರ್ದೇಶನ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬಂದ ಪೊನ್ನಿಯನ್ ಸೆಲ್ವನ್ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ತ್ರಿಷಾ ಬಳಿಕ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಇದೀಗ ಪೊನ್ನಿಯನ್ ಸೆಲ್ವನ್-2 ಸಿನೆಮಾದಲ್ಲೂ ಸಹ ತ್ರಿಷಾ ನಟಿಸಿದ್ದಾರೆ. ಈ ಸಿನೆಮಾಗಾಗಿ ಆಕೆ ಭಾರಿ ಮೊತ್ತದ ಸಂಭಾವನೆಯನ್ನು ಸಹ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.