ಅಂತಹ ಪಾತ್ರಗಳಲ್ಲಿ ನಟಿಸಬೇಕೆಂದ ಬುಟ್ಟ ಬೊಮ್ಮ ಪೂಜಾ ಹೆಗ್ಡೆ, ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ಬ್ಯೂಟಿ ಪೂಜಾ…..!

Follow Us :

ಸೌತ್ ಅಂಡ್ ನಾರ್ತ್ ಸಿನಿರಂಗದ ಸ್ಟಾರ್‍ ಬ್ಯೂಟಿ ಪೂಜಾ ಹೆಗ್ಡೆ ಸೋಲು ಗೆಲುವಿಗೆ ಸಂಬಂಧವಿಲ್ಲದೇ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸದ್ಯ ಆಕೆ ಬಾಲಿವುಡ್ ನಲ್ಲಿ ಸ್ಟಾರ್‍ ನಟ ಸಲ್ಮಾನ್ ಖಾನ್ ಜೊತೆಗೆ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಸಹ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇನ್ನೂ ಈ ಸಿನೆಮಾದ ಪ್ರಮೋಷನ್ ನಲ್ಲಿ ಪೂಜಾ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಅಂತಹ ಪಾತ್ರದಲ್ಲಿ ನಟಿಸಬೇಕೆಂಬ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಬಾಲಿವುಡ್ ಸ್ಟಾರ್‍ ನಟ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ನಲ್ಲಿ ಮೂಡಿಬಂದ ಕಿಸಿ ಕಾ ಬಾಯ್ ಕಿಸಿ ಕಾ ಜಾನ್ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿವೆ. ಇನ್ನೂ ಪ್ರಮೋಷನ್ ನಿಮಿತ್ತ ಅನೇಕ ಸಂದರ್ಶನಗಳನ್ನು ಸಹ ನೀಡಿದ್ದು, ಈ ವೇಳೆ ಆಕೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾ ಸಾಗಿದ್ದಾರೆ.  ಸಿನೆಮಾ ಪ್ರಮೋಷನ್ ಜೊತೆ ಜೊತೆಗೆ ಆಕೆ ತಮ್ಮ ವೈಯುಕ್ತಿಕ ಜೀವನದ ಜೊತೆಗೆ ಕೆರಿಯರ್‍ ಬಗ್ಗೆ ಸಹ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು ಆಕೆಯ ಕಾಮೆಂಟ್ ಗಳು ವೈರಲ್ ಆಗಿದೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಪೂಜಾ ಹೆಗ್ಡೆ ಕೆರಿಯರ್‍ ನಲ್ಲಿ ಆಕೆಯ ಟಾರ್ಗೆಟ್ ಬಗ್ಗೆ ಹೇಳಿದ್ದಾರೆ. ನನಗೆ ಚಿಕ್ಕಂದಿನಿಂದ ಡ್ಯಾನ್ಸ್ ಮಾಡಲು ತುಂಬಾ ಭಯವಿತ್ತು. ಆ ಕಾರಣದಿಂದಲೇ ನಮ್ಮ ತಾಯಿ ನನಗೆ ಭರತನಾಟ್ಯ ಕಲಿತುಕೊ ಎಂದು ಹೇಳುತ್ತಿದ್ದರು. ಬಳಿಕ ನನಗೆ ಡ್ಯಾನ್ಸ್ ಬಗ್ಗೆ ಆಸಕ್ತಿ ಹೆಚ್ಚಾಯಿತು. ಇನ್ನೂ ಸಿನೆಮಾಗಳ ಬಗ್ಗೆ ಹೇಳುವುದಾದರೇ ನನಗೆ ತುಂಬಾ ಗುರಿಗಳಿವೆ. ಮುಖ್ಯವಾಗಿ ನನಗೆ ಮಹಿಳೆಯರನ್ನು ಜಾಗೃತಗೊಳಿಸುವಂತಹ, ಚೈತನ್ಯಗೊಳಿಸುವಂತಹ ಪಾತ್ರಗಳಲ್ಲಿ ನಟಿಸಲು ತುಂಬಾ ಆಸಕ್ತಿಯಿದೆ ಜೊತೆಗೆ ಅದು ನನ್ನ ಗುರಿ ಸಹ ಆಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪ್ರತ್ಯೇಕತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ನಾನು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ. ಇನ್ನೂ ನನ್ನ ವಿರುದ್ದ ಬರುವಂತಹ ರೂಮರ್‍ ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಇನ್ನೂ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸೌತ್ ನಲ್ಲಿ ಬಹುಬೇಡಿಕೆ ಹೊಂದಿದ್ದಾರೆ. ಜೊತೆಗೆ ನಾರ್ತ್‌ನಲ್ಲೂ ಸಹ ಸಕ್ಸಸ್ ಕಾಣಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದೀಗ ಆಕೆ ಅಭಿನಯದ ಕಿಸಿಕಾ ಭಾಯ್ ಕಿಸಿಕಿ ಜಾನ್  ಸಿನೆಮಾ ಇದೇ ಏಪ್ರಿಲ್ 21 ರಂದು ತೆರೆಗೆ ಬರಲಿದ್ದು, ಈ ಸಿನೆಮಾದಲ್ಲಿ ಅನೇಕ ಸ್ಟಾರ್‍ ಗಳು ನಟಿಸಿದ್ದಾರೆ. ಈ ಸಿನೆಮಾದ ಮೇಲೆ ಪೂಜಾ ಭಾರಿ ನಿರೀಕ್ಷೆಯನ್ನು ಸಹ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.