Film News

ಶ್ರೀ ಕೃಷ್ಣನ ಅವತಾರದಲ್ಲಿ ಮಿಂಚಿದ ಅಮೂಲ್ಯ ಅವಳಿ ಮಕ್ಕಳು, ವೈರಲ್ ಆದ ಪೊಟೋಸ್…..!

ಚಂದನವನದಲ್ಲಿ ಗೋಲ್ಡನ್ ಕ್ವೀನ್ ಎಂದು ಫೇಮ್ ಪಡೆದುಕೊಂಡಿರುವ ಅಮೂಲ್ಯ ಮದುವೆಯಾದ ಬಳಿಕ ಸಿನಿರಂಗದಿಂದ ದೂರವುಳಿದಿದ್ದಾರೆ. ಆಕೆ ಇತ್ತೀಚಿಗಷ್ಟೆ ಮುದ್ದಾದ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಬಗ್ಗೆ ತಿಳಿದೇ ಇದೇ. ಮಕ್ಕಳ ವಿವಿಧ ಪೊಟೋಗಳನ್ನು ಸಹ ಆಕೆ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.  ಇನ್ನೂ ಆಕೆಯ ಹಂಚಿಕೊಂಡ ಪೊಟೊಗಳೂ ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಇದೀಗ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಅಮೂಲ್ಯ ಸೋಷಿಯಲ್ ಮಿಡಿಯಾ ಮೂಲಕ ಪೊಟೋಗಳು, ರೀಲ್ಸ್ ಗಳು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಈಕೆಯ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಈ ಹಿಂದೆ ಆಕೆಯ ಬೇಬಿ ಬಂಪ್ ಪೊಟೋಗಳು, ರೀಲ್ಸ್ ಗಳು, ಮುದ್ದಿನ ಪೊಟೋಶೂಟ್ ಗಳು, ಮಕ್ಕಳ ಬಗೆಗಿನ ಅಪ್ಡೇಟ್ ಗಳು ಸೋಷಿಯಲ್ ಮಿಡಿಯಾ ಮೂಲಕವೇ ಆಕೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಮೂಲ್ಯ ತನ್ನ ಅವಳಿ ಮಕ್ಕಳಾದ ಅಥರ್ವ್ ಹಾಗೂ ಆಧವ್ ಇಬ್ಬರಿಗೂ ಶ್ರೀ ಕೃಷ್ಣನ ವೇಷ ತೊಟ್ಟು ಪೊಟೋಶೂಟ್ಸ್ ಮಾಡಿಸಿದ್ದಾರೆ. ಈ ಪೊಟೋಗಳು ಇದೀಗ ಇಂಟರ್‍ ನೆಟ್ ನಲ್ಲಿ ಜೋರಾಗಿಯೇ ಹರಿದಾಡುತ್ತಿವೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಅಮೂಲ್ಯ ತಮ್ಮ ಮಕ್ಕಳೊಂದಿಗೆ ಕ್ಯೂಟ್ ಪೊಟೋಸ್ ಹಂಚಿಕೊಂಡಿದ್ದಾರೆ. ತಮ್ಮ ಮುದ್ದಿನ ಮಕ್ಕಳಾದ ಅಥರ್ವ್ ಹಾಗೂ ಆಧವ್ ಕೊಳಲು ಹಿಡಿದು ಕುಳಿತಿದ್ದರೇ, ಅವರೊಂದಿಗೆ ಅಮೂಲ್ಯ ಸಹ ಕಾಣಿಸಿಕೊಂಡಿದ್ದಾರೆ. ಜೊತೆಗೆ ಗೋವಿನ ಪೊಟೋಗಳೂ ಸಹ ಇದೆ. ಇನ್ನೂ ಈ ಪೊಟೋಗಳು ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿವೆ. ಅಮೂಲ್ಯ ಅಭಿಮಾನಿಗಳ ಜತೆಗೆ ನೆಟ್ಟಿಗರೂ ಸಹ ಲೈಕ್ ಗಳು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಅಮೂಲ್ಯ ಮದುವೆಯಾದ ಬಳಿಕ ಕುಟುಂಬದ ನಿರ್ವಹಣೆಯಲ್ಲೇ ಬ್ಯೂಸಿಯಾಗಿದ್ದಾರೆ. ಸದಾ ಮಕ್ಕಳ ಪೊಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಇನ್ನೂ ಕನ್ನಡ ಸಿನಿರಂಗದಲ್ಲಿ ಖ್ಯಾತಿ ಪಡೆದುಕೊಂಡ ಅಮೂಲ್ಯ ರವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದ್ದು, ಅವರು ಮತ್ತೆ ಸಿನೆಮಾಗಳಲ್ಲಿ ನಟಿಸಲಿ ಎಂದು ಕೋರುತ್ತಿದ್ದಾರೆ. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಮೂಲ್ಯ ಚೆಲುವಿನ ಚಿತ್ತಾರ ಸಿನೆಮಾದ ಮೂಲಕ ಹೆಚ್ಚು ಫೇಂ ಪಡೆದುಕೊಂಡರು. ಆಕೆ ಕೊನೆಯದಾಗಿ 2017 ರಲ್ಲಿ ತೆರೆಕಂಡ ಮುಗುಳು ನಗೆ ಎಂಬ ಸಿನೆಮಾದಲ್ಲಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆಕೆ ಮತ್ತೆ ಸಿನೆಮಾಗಳಲ್ಲಿ ನಟಿಸಲಿ ಎಂಬುದು ಅವರ ಅಭಿಮಾನಿಗಳ ಕೋರಿಕೆಯಾಗಿದೆ.

Most Popular

To Top