News

ಹಿಂದೂ ಧರ್ಮದ ಅವಹೇಳನ: ಉದಯನಿಧಿ, ಪ್ರಿಯಾಂಕ್ ಖರ್ಗೆ ವಿರುದ್ದ ಎಫ್.ಐ.ಆರ್ ದಾಖಲು….!

ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಉತ್ತರ ಪ್ರದೇಶದ ರಾಂಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯ ವಕೀಲರಾದ ಹರ್ಷಗುಪ್ತಾ ಹಾಗೂ ರಾಮ್ ಸಿಂಗ್ ಲೋಧಿ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 295A ಹಾಗೂ 153ಆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರವರ ಪುತ್ರ ಸಚಿವ ಉದಯನಿಧಿ ಸ್ಟಾಲಿನ್ ಕೆಲವು ದಿನಗಳ ಹಿಂದೆಯಷ್ಟೆ ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದು, ಆ ಹೇಳಿಕೆ ಕಾರಣದಿಂದ ಇಡೀ ದೇಶದಾದ್ಯಂತ ಆಕ್ರೋಷ ವಿವಾದ ಹುಟ್ಟಿಹಾಕಿದೆ. ಅನೇಕರು ಉದಯನಿಧಿ ಸ್ಟಾಲಿನ್ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಸಹ ಹಿಂದೂ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದಾರೆ. ಸಚಿವ ಉದಯನಿಧಿ ಸ್ಟಾಲಿನ್ ಯಾವ ಸಮಯದಲ್ಲಿ ಆ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಿಲ್ಲ. ಆದರೆ ಯಾವ ಧರ್ಮದಲ್ಲಿ ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಇರುವುದಿಲ್ಲವೋ ಅದು ಧರ್ಮಅಲ್ಲ. ಮನುಷ್ಯರ ನಡುವೆ ಭೇದ-ಭಾವ ಇರೋದು ಧರ್ಮವಲ್ಲ ಎಂದು ಪ್ರಿಯಾಂಕ್ ಖರ್ಗೆ ಉದಯನಿಧಿ ಹೇಳಿಕೆಯನ್ನು ಬೆಂಬಲಿಸುವಂತೆ ಮಾತನಾಡಿದ್ದಾರೆ. ಈ ಕಾರಣದಿಂದ ಅವರ ವಿರುದ್ದ ದೂರು ನೀಡಲಾಗಿದೆ.

ಇನ್ನೂ ನಿನ್ನೆ ತುಮಕೂರಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ್‍ ಸಹ ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯಿಂದ ಅನೇಕ ಹಿಂದೂ ಪರ ಸಂಘಟನೆಗಳು ಪರಮೇಶ್ವರ್‍ ರವರ ವಿರುದ್ದ ಕಿಡಿಕಾರುತ್ತಿವೆ. ಈ ಬಗ್ಗೆ ಬಿಜೆಪಿ ಸಹ ರಿಯಾಕ್ಟ್ ಆಗಿದೆ. ಯಾರಿಗಾದರೂ ಅವತ ಮುತ್ತಾತ, ತಾತನ ಹೆಸರು ಗೊತ್ತಿಲ್ಲ ಎಂದ ಮಾತ್ರಕ್ಕೆ ಅವರಿಗೆ ತಾತ-ತಂದೆಯಿಲ್ಲ ಎಂದಲ್ಲ. ಅವರಿಗೆ ಆ ಬಗ್ಗೆ ಜ್ಞಾನವಿಲ್ಲ ಅಷ್ಟೆ. ಪಾಪ ಸಚಿವ ಪರಮೇಶ್ವರ್‍ ರವರ ಸ್ಮೃತಿ I.N.D.I.A ಮೈತ್ರಿಕೂಟದ ಪ್ರಭಾವದಿಂದ ಕೊಂಚ ಪಲ್ಲಟವಾದಂತಾಗಿದೆ. ಹಿಂದು ಧರ್ಮ ಒಬ್ಬ ಪುರುಷ ಅಥವಾ ಒಂದು ಪುಸ್ತಕದಿಂದ ಹುಟ್ಟಿದ ಧರ್ಮವಲ್ಲ. ಅದಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ ಎಂದು ಬಿಜೆಪಿ ಕೌಂಟರ್‍ ಕೊಟ್ಟಿದೆ. ಜತೆಗೆ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರವರೂ ಸಹ ಪರಮೇಶ್ವರ್‍ ರವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇನ್ನೂ ಈ ಬಗ್ಗೆ ಸಚಿವ ಪರಮೇಶ್ವರ್‍ ಸಹ ರಿಯಾಕ್ಟ್ ಆಗಿದ್ದಾರೆ. ನನ್ನ ಪ್ರಕಾರ ನಾನು ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಹಿಂದೂ ಧರ್ಮದ ಬಗ್ಗೆ ನಮಗಿರುವಷ್ಟು ಅಭಿಮಾನ ಬಿಜೆಪಿಯವರಿಗಿಲ್ಲ. ಕೇವಲ ತೋರ್ಪಡಿಕೆಗಾಗಿ ಹಿಂದೂ ಎನ್ನುತ್ತಾರೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ತಮಿಳುನಾಡಿನ ಉದಯನಿಧಿ ಸ್ಟಾಲಿನ್ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ಹಿಂದೂ ಧರ್ಮದಲ್ಲಿ ನಾನು ಮಾಡುವ ಆಚರಣೆ, ನಂಬಿಕೆ ಅವರಿಗಿಲ್ಲ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

Most Popular

To Top