ಮತ್ತೊಮ್ಮೆ ಸಿಕ್ಕಿಬಿದ್ದ ರಷ್ಮಿಕಾ -ವಿಜಯ್ ದೇವರಕೊಂಡ, ಒಂದೇ ಮನೆಯಲ್ಲಿ ವಾಸವಿದ್ದಾರಾ ಈ ಜೋಡಿ, ಮತ್ತೊಮ್ಮೆ ವೈರಲ್ ಆದ ರೂಮರ್…..!

ಸುಮಾರು ದಿನಗಳಿಂದ ಟಾಲಿವುಡ್ ರೌಡಿ ಹಿರೋ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಷ್ ರಷ್ಮಿಕಾ ಮಂದಣ್ಣ ನಡುವೆ ಅಫೈರ್‍ ನಡೆಯುತ್ತಿದೆ. ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಲೇ ಇದೆ. ಜೊತೆಗೆ ಅವರು ಆಗಾಗ…

ಸುಮಾರು ದಿನಗಳಿಂದ ಟಾಲಿವುಡ್ ರೌಡಿ ಹಿರೋ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಷ್ ರಷ್ಮಿಕಾ ಮಂದಣ್ಣ ನಡುವೆ ಅಫೈರ್‍ ನಡೆಯುತ್ತಿದೆ. ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಲೇ ಇದೆ. ಜೊತೆಗೆ ಅವರು ಆಗಾಗ ವೆಕೇಷನ್ ಗಳಲ್ಲಿ ಪಾರ್ಟಿಗಳಲ್ಲಿ ಕ್ಯಾಮೆರಾಗಳಿಗೆ ಸಿಕ್ಕಿ ಬೀಳುತ್ತಿರುತ್ತಾರೆ. ಈಗಾಗಲೇ ಅವರು ಅನೇಕ ಭಾರಿ ವೆಕೇಷನ್ ಗಳಿಗೆ ಹಾರಿದ್ದಾರೆ. ಅವರು ಎಷ್ಟೆ ಸಿಕ್ರೇಟ್ ಆಗಿದ್ದರೂ ಸಹ ಸಿಕ್ಕಿಬಿಡುತ್ತಾರೆ. ಇದೀಗ ಅವರು ಮತ್ತೊಮ್ಮೆ ಸಿಕ್ಕಿಬಿದಿದ್ದಾರೆ. ಇಬ್ಬರೂ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆಯೇ ಎಂಬ ಸುದ್ದಿಯೊಂದು ಇದೀಗ ವೈರಲ್ ಆಗುತ್ತಿದೆ.

ಸುಮಾರು ದಿನಗಳಿಂದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡುತ್ತಲೇ ಇದೆ. ಅವರಿಬ್ಬರು ಗಾಡವಾದ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ಈ ಜೋಡಿ ಮಾಲ್ಡೀವ್ಸ್ ಗೆ ವೆಕೇಷನ್ ಗೆ ಹಾರಿದ್ದರು. ಅದನ್ನು ರಶ್ಮಿಕಾ ಸಹ ಒಪ್ಪಿಕೊಂಡಿದ್ದರು. ನಾವಿಬ್ಬರು ಒಳ್ಳೆಯ ಸ್ನೇಹಿತರು, ಆತನೊಂದಿಗೆ ಟ್ರಿಪ್ ಹೋದರೇ ತಪ್ಪೇನು ಎಂದು ಹೇಳಿದ್ದರು. ಜೊತೆಗೆ ವಿಜಯ್ ದೇವರಕೊಂಡ ಕುಟುಂಬಸ್ಥರು ಸಹ ರಶ್ಮಿಕಾಗೆ ತುಂಬಾನೆ ಹತ್ತಿರವಾಗಿದ್ದಾರೆ ಎನ್ನಲಾಗಿದೆ. ವಿಜಯ್ ದೇವರಕೊಂಡ ಮನೆಯಲ್ಲಿ ನಡೆಯುವಂತ ಅನೇಕ ಕಾರ್ಯಕ್ರಮಗಳಲ್ಲಿ ರಶ್ಮಿಕಾ ಸಹ ಹಾಜರಾಗಿದ್ದಾರೆ. ನಮ್ಮಿಬ್ಬರ ನಡುವೆ ಲವ್ ಇಲ್ಲ ಎನ್ನುತ್ತಲೇ ಅವರು ಅನೇಕ ಕಡೆ ವೆಕೇಷನ್ ಗಳಿಗೆ ಸಹ ಹೋಗಿ ಬಂದಿದ್ದಾರೆ.

ಇದೀಗ ಮತ್ತೊಂದು ಕಾರಣದಿಂದ ಅವರ ಅಪೈರ್‍ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೊತೆಗೆ ವಾಸಿಸುತ್ತಿದ್ದಾರಾ ಎಂಬ ಅನುಮಾನ ಸಹ ಮೂಡುವಂತೆ ಮಾಡಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಈ ಸುದ್ದಿ ಹರಿದಾಡಲು ಕಾರಣವಾಗಿದೆ. ವಿಜಯ್ ದೇವರಕೊಂಡ ತನ್ನ ಮನೆಯ ಆವರಣದಲ್ಲಿ ತೆಗೆದ ಪೊಟೋಗಳನ್ನು ಹಂಚಿಕೊಂಡಿದ್ದರು. ಜೊತೆಗೆ ರಶ್ಮಿಕಾ ಸಹ ಕೆಲವೊಂದು ಪೊಟೊಗಳನ್ನು ಹಂಚಿಕೊಂಡಿದ್ದರು ಈ ಎರಡೂ ಪೊಟೋಗಳ ಬ್ಯಾಕ್ ಗ್ರೌಂಡ್ ಚೆಕ್ ಮಾಡಿದರೇ ಒಂದೆ ಮಾದರಿಯಲ್ಲಿದ್ದು, ಅವು ವಿಜಯ್ ದೇವರಕೊಂಡ ಮನೆಯಲ್ಲಿ ತೆಗೆದ ಪೊಟೋಗಳು ಎಂದು ಹೇಳಲಾಗುತ್ತಿದೆ. ಈ ಪೊಟೋಗಳ ಕಾರಣದಿಂದ ಅವರಿಬ್ಬ ಡೇಟಿಂಗ್ ಸುದ್ದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಇನ್ನೂ ಸುಮಾರು ದಿನಗಳ ಹಿಂದೆ ವಿಜಯ್ ದೇವರಕೊಂಡ ತಮ್ಮ ಅಭಿಮಾನಿಗಳೊಂದಿಗೆ ವಿಡಿಯೋ ಮೂಲಕ ಚಾಟ್ ಮಾಡುವಾಗಲೂ ಸಹ ರಶ್ಮಿಕಾ ಮಂದಣ್ಣ ಸೌಂಡ್ ಕೇಳಿಸಿತ್ತು. ಅವರಿಬ್ಬರೂ ಒಂದೇ ಹೋಟೆಲ್ ನಲ್ಲಿದ್ದರು ಎಂಬ ಸುದ್ದಿ ಆಗ ಕೇಳಿಬಂತು. ಇದೀಗ ಅವರಿಬ್ಬರೂ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಇನ್ನೂ ಅವರಿಬ್ಬರೂ ತಮ್ಮ ರಿಲೇಷನ್ ಶಿಪ್ ಬಗ್ಗೆ ಓಪೆನ್ ಆಗದ ಕಾರಣದಿಂದ ಗೊಂದಲ ಮುಂದುವರೆದಿದೆ.