ನಟಿ ಅಮೂಲ್ಯ ಅವಳಿ ಮಕ್ಕಳು ಸಹ ಈ ಸಲ ಕಪ್ ನಮ್ದೆ ಅಂತಿದ್ದಾರೆ, ಸಖತ್ ವೈರಲ್ ಆದ ಪೊಟೋಸ್…..!

ಸ್ಯಾಂಡಲ್ ವುಡ್ ನಲ್ಲಿ ಗೋಲ್ಡನ್ ಕ್ವೀನ್ ಎಂದು ಫೇಮ್ ಪಡೆದುಕೊಂಡಿರುವ ಅಮೂಲ್ಯ ಮದುವೆಯಾದ ಬಳಿಕ ಸಿನಿರಂಗದಿಂದ ದೂರವುಳಿದಿದ್ದಾರೆ. ಆಕೆ ಇತ್ತೀಚಿಗಷ್ಟೆ ಮುದ್ದಾದ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಬಗ್ಗೆ ತಿಳಿದೇ ಇದೇ. ಮಕ್ಕಳ ವಿವಿಧ ಪೊಟೋಗಳನ್ನು ಸಹ ಆಕೆ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.  ಇನ್ನೂ ಆಕೆಯ ಹಂಚಿಕೊಂಡ ಪೊಟೊಗಳೂ ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಇದೀಗ ಆಕೆಯ ಅವಳಿ ಮಕ್ಕಳು ಈ ಸಲ ಕಪ್ ನಮ್ದೆ ಎನ್ನುವಂತಹ ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಕರ್ನಾಟಕದವರಿಗೆ ಐಪಿಎಲ್ ಟೂರ್ನಿ ಬಂದರೇ ಸಾಕು ಆರ್‍.ಸಿ.ಬಿ ಹೆಸರು ಕೇಳಿಬರುತ್ತದೆ. ಪ್ರತಿ ಭಾರಿ ಈ ಸಲ ಕಪ್ ನಮ್ದೆ ಎಂಬ ಹುರುಪು ಕಾಣಿಸುತ್ತಿರುತ್ತದೆ. ಆರ್‍.ಸಿ.ಬಿ ಎಷ್ಟೇ ಬಾರಿ ಸೋತರೂ ಸಹ ಉತ್ಸಾಹ ಮಾತ್ರ ಕಳೆದುಕೊಳ್ಳದೇ ಈ ಸಲ ಕಪ್ ನಮ್ದೆ ಎನ್ನುತ್ತಿರುತ್ತಾರೆ. ಇನ್ನೂ ಕಳೆದ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನೈ ಸೂಪರ್‍ ಕಿಂಗ್ಸ್ ನಡುವೆ ಒಳ್ಳೆಯ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಸಿ.ಎಸ್.ಕೆ ಎಂಟು ರನ್ ಗಳ ಅಂತರದಲ್ಲಿ ಜಯ ಗಳಿಸಿತ್ತು. ಭಾರಿ ಹೋರಾಟ ನಡೆಸಿದ ಆರ್‍.ಸಿ.ಬಿ ವಿರೋಚಿತ ಸೋಲನ್ನು ಕಂಡಿತ್ತು. ಇದೀಗ ಕನ್ನಡದ ನಟಿ ಅಮೂಲ್ಯ ತನ್ನ ಅವಳಿ ಮಕ್ಕಳಿಗೆ ಆರ್‍.ಸಿ.ಬಿ ಜೆರ್ಸಿ ಧರಿಸಿ ಪೊಟೋಶೂಟ್ ಮಾಡಿಸಿದ್ದು, ಪೊಟೊಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟಿ ಅಮೂಲ್ಯ ಸೋಷಿಯಲ್ ಮಿಡಿಯಾ ಮೂಲಕ ಪೊಟೋಗಳು, ರೀಲ್ಸ್ ಗಳು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಈಕೆಯ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಈ ಹಿಂದೆ ಆಕೆಯ ಬೇಬಿ ಬಂಪ್ ಪೊಟೋಗಳು, ರೀಲ್ಸ್ ಗಳು, ಮುದ್ದಿನ ಪೊಟೋಶೂಟ್ ಗಳು, ಮಕ್ಕಳ ಬಗೆಗಿನ ಅಪ್ಡೇಟ್ ಗಳು ಸೋಷಿಯಲ್ ಮಿಡಿಯಾ ಮೂಲಕವೇ ಆಕೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಮೂಲ್ಯ ತನ್ನ ಅವಳಿ ಮಕ್ಕಳಾದ ಅಥರ್ವ್ ಹಾಗೂ ಆಧವ್ ಇಬ್ಬರಿಗೂ ಆರ್‍.ಸಿ.ಬಿ ಜೆರ್ಸಿ ಹಾಕಿ ಪೊಟೋಶೂಟ್ ಮಾಡಿಸಿದ್ದಾರೆ. ಈ ಪೊಟೋಗಳನ್ನು ಅಮೂಲ್ಯ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಈ ಸಲ ಕಪ್ ನಮ್ದೆ ಎಂದು ಆ ಮಕ್ಕಳೇ ಹೇಳಿರುವಂತ ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಪುಟಾಣಿ ಆರ್‍.ಸಿ.ಬಿ ಫ್ಯಾನ್ಸ್ ನೋಡಿದ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಆರ್‍.ಸಿ.ಬಿ ಹಾಗೂ ಸಿ.ಎಸ್.ಕೆ ಪಂದ್ಯಾವಳಿಯನ್ನು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ಹಾಗೂ ಕಾಲಿವುಡ್ ಸ್ಟಾರ್‍ ಧನುಷ್  ವೀಕ್ಷಣೆ ಮಾಡಿದ್ದರು. ಆರ್‍.ಸಿ.ಬಿ ಯನ್ನು ಶಿವರಾಜ್ ಕುಮಾರ್‍ ಬೆಂಬಲಿಸಿದರೇ, ಸಿ.ಎಸ್.ಕೆ ತಂಡವನ್ನು ಧನುಷ್ ಬೆಂಬಲಿಸಿದ್ದರು. ಈ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.