Film News

ಇಲಿಯಾನಾ ಗರ್ಭಿಣಿಯಾಗಲು ಕಾರಣ ಅವರೇನಾ, ಸ್ಟಾರ್ ಹಿರೋಯಿನ್ ತಮ್ಮ ಇಲಿಯಾನಾ ಮಗುವಿಗೆ ತಂದೆನಾ?

ಇತ್ತೀಚಿಗೆ ಬಾಲಿವುಡ್ ಸಿನಿರಂಗದಲ್ಲಿ ಮದುವೆಗೂ ಮುಂಚೆ ತಾಯಿಯಾಗಿ ಬಳಿಕ ಮದುವೆಯಾಗುತ್ತಿರುವ ಬಗ್ಗೆ ಅನೇಕ ಸುದ್ದಿಗಳನ್ನು ಕೇಳಿಬರುತ್ತಿವೆ. ಮೊದಲಿಗೆ ಸಹಜೀವನ ನಡೆಸಿ ಬಳಿಕ ಮದುವೆಯಾಗುತ್ತಿರುವ ಅನೇಕ ಉದಾಹರಣೆಗಳೂ ಸಹ ಇದೆ. ಅಮಿ ಜಾಕ್ಸನ್, ಆಲಿಯಾ ಭಟ್ ಸೇರಿದಂತೆ ಅನೇಕ ಸ್ಟಾರ್‍ ಹಿರೋಯಿನ್ಸ್ ಮದುವೆಗೂ ಮುಂಚೆಯೇ ತಾಯಿಯಾಗಿದ್ದಾರೆ ಎಂಬ ಸುದ್ದಿಗಳನ್ನು ಸಹ ಕೇಳಿದ್ದೇವೆ. ಇದೀಗ ಹಾಟ್ ಬ್ಯೂಟಿ ಇಲಿಯಾನಾ ಸಹ ಮದುವೆಗೂ ಮುಂಚೆ ಗರ್ಭಿಣಿಯಾಗಿದ್ದಾರೆ. ಈ ವಿಚಾರವನ್ನು ಆಕೆ ಪರೋಕ್ಷವಾಗಿ ತನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆಕೆ ಗರ್ಭಿಣಿಯಾಗಲು ಕಾರಣ ಓರ್ವ ಸ್ಟಾರ್‍ ಹಿರೋಯಿನ್ ಸಹೋದರ ಎಂದು ಪ್ರಚಾರ ಶುರುವಾಗಿದೆ.

ನಟಿ ಇಲಿಯಾನಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಇತ್ತೀಚಿಗಷ್ಟೆ ಮಗುವಿನ ಟೀ ಷರ್ಟ್ ಹಾಗೂ ಕತ್ತಿನಲ್ಲಿ ಮಾಮಾ (ಅಮ್ಮಾ) ಎಂಬ ಚೈನ್ ಒಂದನ್ನು ಶೇರ್‍ ಮಾಡಿದ್ದರು.  ಟೀ ಶರ್ಟ್ ಮೇಲೆ ಅಂಡ್ ಸೋ ದಿ ಅಡ್ವೆಂಚರ್‍ ಬಿಗಿನ್ಸ್ ಎಂದು ಬರೆದಿದೆ. ಇದಕ್ಕೆ ಆಕೆ ಕಮ್ಮಿಂಗ್ ಸೂನ್, ನನ್ನ ಚಿನ್ನಾರಿ ಡಾರ್ಲಿಂಗ್ ನನ್ನು ಭೇಟಿಯಾಗಲು ಅತ್ಯಂತ ಆತುರದಲ್ಲಿದ್ದೇನೆ ಎಂದು ಕ್ಯಾಪ್ಷನ್ ಹಾಕಿದ್ದರು. ಈ ಪೋಸ್ಟ್ ಕಂಡ ಅಭಿಮಾನಿಗಳೂ ಸೇರಿದಂತೆ ಅನೇಕರು ಶಾಕ್ ಆಗಿದ್ದರು. ಮದುವೆಗೂ ಮುಂಚೆ ಇಲಿಯಾನಾ ಗರ್ಭಿಣಿಯಾಗಿದ್ದಾಳೆ, ಆಕೆ ಗರ್ಭಕ್ಕೆ ಕಾರಣವಾದರೂ ಯಾರೂ, ಆ ಮಗುವಿನ ತಂದೆ ಯಾರು ಎಂಬೆಲ್ಲಾ ಪ್ರಶ್ನೆಗಳು, ಅನುಮಾನಗಳು ಸಹ ಕಾಮೆಂಟ್ ಗಳ ರೂಪದಲ್ಲಿ ಹುಟ್ಟಿಕೊಂಡವು. ಇದೀಗ ಕೆಲವೊಂದು ಮೂಲಗಳ ಪ್ರಕಾರ ಇಲಿಯಾನಾ ತಾಯಿಯಾಗಲು ಬಾಲಿವುಡ್ ಸ್ಟಾರ್‍ ನಟಿ ಕತ್ರಿಕಾ ಕೈಫ್ ಸಹೋದರ ಸೆಬಾಸ್ಟಿಯನ್ ಲಾರೆನ್ಸ್ ಮೈಖಲ್ ಎಂದು ಹೇಳಲಾಗುತ್ತಿದೆ.

ಸೆಬಾಸ್ಟಿಯನ್ ಲಾರೆನ್ಸ್ ಮೈಖಲ್ ಹಾಗೂ ಇಲಿಯನಾ ಸುಮಾರು ಒಂದು ವರ್ಷದಿಂದ ಡೇಟಿಂಗ್ ನಲ್ಲಿದ್ದಾರಂತೆ. ಈ ಕಾರಣದಿಂದಲೇ ಇಲಿಯಾನಾ ಗರ್ಭಿಣಿಯಾಗಿದ್ದಾರಂತೆ. ಈ ಹಿಂದೆ ಕತ್ರಿನಾ ಹಾಗೂ ವಿಕ್ಕಿ ಮಾಲ್ಡಿವ್ಸ್ ಗೆ ವೆಕೇಷನ್ ಗೆ ಹಾರಿದ್ದರು. ಅವರೊಂದಿಗೆ ಸ್ನೇಹಿತರು ಹಾಗೂ ಇಲಿಯಾನಾ, ಸೆಬಾಸ್ಟಿಯನ್ ಸಹ ಹಾಜರಾಗಿದ್ದರು. ಇನ್ನೂ ಈ ವೇಳೆ ಕೆಲವೊಂದು ಪೊಟೋಗಳಲ್ಲಿ ಸೆಬಾಸ್ಟಿಯನ್ ಹಾಗೂ ಇಲಿಯಾನಾ ತುಂಬಾ ಕ್ಲೋಜ್ ಆಗಿರುವುದು ಕಂಡುಬಂದಿದೆ. ಇನ್ನೂ ಅವರಿಬ್ಬರು ತಮ್ಮ ಸಂಬಂಧದ ಬಗ್ಗೆ ಒಪೆನ್ ಆಗದೇ ಇದ್ದರೂ ಸಹ ಸುಮಾರು ತಿಂಗಳುಗಳಿಂದ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದ್ದೆ. ಈಗಲಾದರು ಇಲಿಯಾನಾ ತನ್ನ ಮಗುವಿನ ತಂದೆ ಯಾರು ಎಂಬುದನ್ನು ಅಧಿಕೃತವಾಗಿ ಘೋಷಣೆ ಮಾಡಿ ಎಂದು ಆಕೆಯ ಅಭಿಮಾನಿಗಳು ಡಿಮ್ಯಾಂಡ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಇಲಿಯಾನಾ ತನ್ನ ಕೆರಿಯರ್‍ ನಲ್ಲಿ ತೆಗೆದುಕೊಂಡ ಕೆಲ ತಪ್ಪು ನಿರ್ಣಯಗಳಿಂದ ಸಿನೆಮಾಗಳಿಂದ ದೂರ ಉಳಿಯಬೇಕಾಗಿತ್ತು. ಇದೀಗ ಮತ್ತೆ ಸಿನೆಮಾಗಳ ಮೇಲೆ ಪೋಕಸ್ ಇಟ್ಟಿದ್ದು, ಅವಕಾಶಗಳಿಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಸಬ್ ಗಜಬ್ ಎಂಬ ಆಲ್ಬಮ್ ಸಾಂಗ್ ನಲ್ಲಿ ಕಾಣಿಸಿಕೊಂಡರು. ಈ ಹಾಡಿನಲ್ಲಿ ಆಕೆ ದಪ್ಪವಾಗಿ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ಕೊಟ್ಟರು. ಸದ್ಯ ಮುಂಬೈನಲ್ಲಿರುವ ಇಲಿಯಾನಾ ಬಾಲಿವುಡ್ ಸಿನೆಮಾಗಳ ಮೇಲೆ ಪೋಕಸ್ ಇಟ್ಟಿದ್ದಾರೆ.  ಇನ್ನೂ ಆಕೆ ಮತ್ತೆ ಸಿನಿರಂಗದಲ್ಲಿ ಮೆರೆಯುತ್ತಾರಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top