Film News

ಸೌತ್ ಸಿನಿರಂಗದ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟ ಸ್ಟಾರ್ ನಟಿ ತಾಪ್ಸಿ ಪನ್ನು…..!

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ತಾಪ್ಸಿ ಪನ್ನು ಸಹ ಒಬ್ಬರಾಗಿದ್ದಾರೆ. ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ದೊಡ್ಡ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಸದ್ಯ ಬಾಲಿವುಡ್‌ ನಲ್ಲಿ ದೊಡ್ಡ ಫೇಮ್ ದಕ್ಕಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇನ್ನೂ ತಾಪ್ಸಿ ಅಭಿನಯದ ಮೊದಲನೇ ಸಿನೆಮಾ ಫ್ಲಾಪ್ ಆದರೂ ಸಹ ತೆಲುಗಿನಲ್ಲಿ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಂಡರು. ಇದೀಗ ಆಕೆ ಸೌತ್ ಸಿನಿರಂಗದ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಅವು ವಿವಾದಕ್ಕೆ ಕಾರಣವಾಗಿದೆ.

ಕಳೆದ 2010 ರಲ್ಲಿ ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ತಾಪ್ಸಿ ಅನೇಕ ಸ್ಟಾರ್‍ ಗಳ ಜೊತೆಗೆ ತೆರೆ ಹಂಚಿಕೊಂಡರು. ಆದರೆ ಆಕೆಗೆ ಯಾವುದೇ ಸಿನೆಮಾ ಕಮರ್ಷಿಯಲ್ ಸಕ್ಸಸ್ ತಂದುಕೊಡಲಿಲ್ಲ. ಬಳಿಕ ಆಕೆ ಬಾಲಿವುಡ್ ನಲ್ಲಿ ಛಷ್ಮೆ ಬದ್ದೂರ್‍ ಸಿನೆಮಾದಲ್ಲಿ ನಟಿಸಿದ್ದರು. ಸೌತ್ ನಲ್ಲಿ ನಟಿಸುತ್ತಲೇ, ಹಿಂದಿಯಲ್ಲೂ ಸಹ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಾ ಬಂದರು. ಇನ್ನೂ ತಾಪ್ಸಿ 2016 ರಿಂದ ಬಾಲಿವುಡ್ ನಲ್ಲೇ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಹಿಂದಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಹತ್ತು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಕೆ ಕೆಲವೊಂದು ಇಂಟ್ರಸ್ಟಿಂಗ್ ಹೇಳಿಕೆಗಳನ್ನು ನೀಡಿದ್ದು, ಅವು ವಿವಾದಕ್ಕೆ ಕಾರಣವಾಗಿದೆ.

ಇತ್ತಿಚಿಗೆ ತಾಪ್ಸಿ ಚಿಟ್ ಚಾಟ್ ಒಂದರಲ್ಲಿ ಮಾತನಾಡಿದ್ದಾರೆ. ಬಾಲಿವುಡ್ ಸಿನಿರಂಗದಲ್ಲಿ ನಾನು ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡ ಹಿನ್ನೆಲೆಯಲ್ಲಿ  ಬಾಲಿವುಡ್ ನಲ್ಲಿ ಸಕ್ಸಸ್ ಆಗಿ ಕೆರಿಯರ್‍ ಸಾಗಿಸುತ್ತಿದ್ದೇನೆ. ಸೌತ್ ಸಿನಿರಂಗದಲ್ಲಿ ನಾನು ಹಿರೋಯಿನ್ ಆಗಿ ನಟಿಸಿದ ಸಮಯದಲ್ಲಿ ಸ್ಟಾರ್‍ ಡಮ್ ಸಿಕ್ಕಿತ್ತು ಆದರೆ ನಟಿಯಾಗಿ ಎಂದೂ ನನಗೆ ತೃಪ್ತಿ ಸಿಕ್ಕಿಲ್ಲ. ಸೌತ್ ಸಿನಿರಂಗದಲ್ಲಿ ಆಕೆ ದೊಡ್ಡ ಸಿನೆಮಾಗಳಲ್ಲಿ ಸಹ ನಟಿಸಿದ್ದರು. ಕೆಲವೊಂದು ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಂಡು ಒಳ್ಳೆಯ ಹೆಸರನ್ನು ಸಹ ಪಡೆದುಕೊಂಡರು. ಆದರೆ ಆಕೆ ಸೌತ್ ನಲ್ಲಿ ಹಿರೋಯಿನ್ ಆಗಿ ನಟಿಸಿದ್ದಾಗ ನನಗೆ ತೃಪ್ತಿ ಸಿಕ್ಕಿಲ್ಲ ಎಂದಿ ಹೇಳಿದ್ದು, ಸೌತ್ ಸಿನಿರಂಗವನ್ನು ಅವಮಾನಿಸಿದ್ದಂತಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ವಿಮರ್ಶೆಗಳು ಕೇಳಿಬರುತ್ತಿವೆ.

ಸೌತ್ ನಲ್ಲಿ ಸ್ಟಾರ್‍ ಡಮ್ ಸಿಕ್ಕರೂ ತೃಪ್ತಿ ಸಿಗಲಿಲ್ಲ ಎಂದು ಹೇಳಿದ ತಾಪ್ಸಿ, ಬಾಲಿವುಡ್ ನಲ್ಲಿ ಯಾವ ರೀತಿಯಲ್ಲಿ ಸಿನೆಮಾಗಳನ್ನು ಆಯ್ಕೆ ಮಾಡಿಕೊಂಡರೋ ಅದೇ ರೀತಿ ಸೌತ್ ನಲ್ಲಿ ಸಹ ಆಯ್ಕೆ ಮಾಡಿಕೊಳ್ಳಬಹುದಾಗಿತ್ತು ಎಂದು ಟ್ರೋಲ್ ಸಹ ಮಾಡುತ್ತಿದ್ದಾರೆ. ಅಷ್ಟೇಅಲ್ಲದೇ ಸೌತ್ ನಲ್ಲಿ ನಟಿಸಿದ ಸಿನೆಮಾಗಳ ಕಾರಣದಿಂದಲೇ ನಿಮಗೆ ಬಾಲಿವುಡ್ ನಲ್ಲಿ ಆಫರ್‍ ಗಳು ಬಂದಿವೆ ಎಂಬುದನ್ನು ಮರೆಯಬೇಡ ಎಂದು ಸೌತ್ ಸಿನಿರಂಗದ ಅಭಿಮಾನಿಗಳು ಆಕ್ರೋಷ ಹೊರಹಾಕುತ್ತಿದ್ದಾರೆ.

Most Popular

To Top