Film News

ಬೇಬಿ ಬಂಪ್ ಪೊಟೋ ಹಂಚಿಕೊಂಡು ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟ ಅದಿತಿ, 2024ಕ್ಕೆ ನಾನು ಅಮ್ಮ ಎಂದ ನಟಿ….!

ಕನ್ನಡ ಸಿನಿರಂಗದಲ್ಲಿ ಬಹುಬೇಡಿಕೆ ನಟಿಯರಲ್ಲಿ ಅಧಿತಿ ಪ್ರಭುದೇವ ಸಹ ಒಬ್ಬರಾಗಿದ್ದಾರೆ. ಸಾಲು ಸಾಲು ಸಿನೆಮಾಗಳ ಮೂಲಕ ಸ್ಟಾರ್‍ ನಟಿಯಾಗಿ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯ ಮೂಲಕ ಸಿನೆಮಾ ಲೋಕಕ್ಕೆ ಕಾಲಿಟ್ಟ ಈಕೆ ಕಡಿಮೆ ಸಮಯದಲ್ಲೇ ಬಹುಬೇಡಿಕೆ ನಟಿಯಾದರು. ಕಳೆದ 2022 ರಲ್ಲಿ ಈಕೆ ರೈತ ಯಶಸ್ ಎಂಬಾತನೊಂದಿಗೆ ಮದುವೆಯಾದರು. ಇದೀಗ 2 ವರ್ಷಗಳ ಬಳಿಕ ಆಕೆ ಗರ್ಭಿಣಿಯಾಗಿದ್ದು, ಈ ಶುಭಸುದ್ದಿಯನ್ನು ಆಕೆ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆಕೆಯ ಬೇಬಿ ಬಂಪ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಅದಿತಿ ಪ್ರಭುದೇವ 2024 ರ ಮೊದಲ ದಿನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಾನು ಅಮ್ಮನಾಗುತ್ತಿರುವ ಸಂತಸದ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬ ಮಹಿಳೆಗೂ ಅಮ್ಮನಾಗುವುದು ಎಂದರೇ ತುಂಬಾನೆ ಖುಷಿಯ ವಿಚಾರ ಎಂದೇ ಹೇಳಬಹುದು. ಹುಟ್ಟಿದಾಗಿನಿಂದ ಸಾಯುವವರೆಗೂ ನಮ್ಮ ಬಾಯಿಂದ ಬರುವ ಮೊದಲ ಪದ ಅಮ್ಮಾ ಎನ್ನಬಹುದು. ಇದೀಗ ಅದಿತಿ ಪ್ರಭುದೇವ ಸಹ ತಾನು ತಾಯಿಯಾಗುವ ಸಂತಸವನ್ನು ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ಆಕೆ ಬೇಬಿ ಬಂಪ್ ಪೊಟೋಗಳನ್ನು ಸಹ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ನಟಿ ಅದಿತಿ ಪ್ರಭುದೇವ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ತಾನು ತಾಯಿಯಾಗುತ್ತಿರುವ ಸಂತಸವನ್ನು ಹಂಚಿಕೊಂಡಿದ್ದಾರೆ. ಬೇಬಿ ಬಂಪ್ ಪೊಟೋ ಹಂಚಿಕೊಂಡು ಅದಕ್ಕೆ ಇಂಟ್ರಸ್ಟಿಂಗ್ ಕಾಮೆಂಟ್ ಸಹ ಹಾಕಿದ್ದಾರೆ. ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ “ಅಮ್ಮ”. . . ❤ ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ “ಅಮ್ಮ” . . . ❤ ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ “ಅಮ್ಮ” . . . ❤ 2024 ಕ್ಕೆ ನಾನು ” ಅಮ್ಮ”  ಎಂದು ಬರೆದುಕೊಂಡಿದ್ದಾರೆ. ಇನ್ನೂ ಅದಿತಿ ಹಂಚಿಕೊಂಡ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಜೊತೆಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಸಹ ಶುಭ ಹಾರೈಸುತ್ತಿದ್ದಾರೆ.

ಕಳೆದ 2022 ನವೆಂಬರ್‍ 28 ರಂದು ಕೊಡಗಿನ ಕಾಫಿ ಬೆಳೆಗಾರ ಯಶಸ್ ಎಂಬಾತನೊಂದಿಗೆ ನಟಿ ಅದಿತಿ ಸಪ್ತಪದಿ ತುಳಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದ 2 ವರ್ಷಗಳ ಬಳಿಕ ಅದಿತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ಆಕೆ ಜ.26 ಗಣರಾಜ್ಯೋತ್ಸವ ದಿನದಂದು ಅದಿತಿ ಹಾಗೂ ಪವನ್ ತೇಜ್ ನಾಯಕನಾಗಿ ನಟಿಸಿದ ಅಲೆಕ್ಸಾ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

Most Popular

To Top